8 ಲಕ್ಷ ಅನಿವಾಸಿ ಭಾರತೀಯರಿಗೆ Kuwait​ ತೊರೆಯಬೇಕಾದ ಭೀತಿ, ಯಾಕೆ?

ಕುವೈತ್​: ವಿಶ್ವದೆಲ್ಲೆಡೆ ಕೊರೊನಾದಿಂದ ಕಂಗಾಲಾಗಿ ಹೋಗಿದ್ದ ಹಲವಾರು ಅನಿವಾಸಿ ಭಾರತೀಯರು ಕಳೆದ ಕೆಲವು ದಿನಗಳಿಂದ ತಾಯ್ನಾಡಿಗೆ ಮರಳುತ್ತಿದ್ದಾರೆ. ಇತ್ತ ಇವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೆ ಅತ್ತ ಕುವೈತ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ವಲಸೆ ಕಾನೂನಿಗೆ ಸಿಕ್ತು ಸಂಸದೀಯ ಸಮಿತಿಯ ಅನುಮೋದನೆ ಕುವೈತ್​ನ ಕಾನೂನು ಮತ್ತು ಶಾಸಕಾಂಗ ಸಂಸದೀಯ ಸಮಿತಿಯು ವಲಸಿಗರ ಕಾನೂನಿನ ಕರಡು ಮಸೂದೆಗೆ ಇಂದು ತನ್ನ ಅನುಮೋದನೆ ನೀಡಿದೆ. ಈ ಮಸೂದೆ ಅಡಿಯಲ್ಲಿ ಕುವೈತ್​ನಲ್ಲಿ ನೆಲೆಸಿರುವ ವಲಸಿಗರ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, […]

8 ಲಕ್ಷ ಅನಿವಾಸಿ ಭಾರತೀಯರಿಗೆ Kuwait​ ತೊರೆಯಬೇಕಾದ ಭೀತಿ, ಯಾಕೆ?
Follow us
KUSHAL V
| Updated By:

Updated on:Jul 06, 2020 | 6:51 PM

ಕುವೈತ್​: ವಿಶ್ವದೆಲ್ಲೆಡೆ ಕೊರೊನಾದಿಂದ ಕಂಗಾಲಾಗಿ ಹೋಗಿದ್ದ ಹಲವಾರು ಅನಿವಾಸಿ ಭಾರತೀಯರು ಕಳೆದ ಕೆಲವು ದಿನಗಳಿಂದ ತಾಯ್ನಾಡಿಗೆ ಮರಳುತ್ತಿದ್ದಾರೆ. ಇತ್ತ ಇವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೆ ಅತ್ತ ಕುವೈತ್​ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಂಕಷ್ಟ ಎದುರಾಗಿದೆ.

ವಲಸೆ ಕಾನೂನಿಗೆ ಸಿಕ್ತು ಸಂಸದೀಯ ಸಮಿತಿಯ ಅನುಮೋದನೆ ಕುವೈತ್​ನ ಕಾನೂನು ಮತ್ತು ಶಾಸಕಾಂಗ ಸಂಸದೀಯ ಸಮಿತಿಯು ವಲಸಿಗರ ಕಾನೂನಿನ ಕರಡು ಮಸೂದೆಗೆ ಇಂದು ತನ್ನ ಅನುಮೋದನೆ ನೀಡಿದೆ. ಈ ಮಸೂದೆ ಅಡಿಯಲ್ಲಿ ಕುವೈತ್​ನಲ್ಲಿ ನೆಲೆಸಿರುವ ವಲಸಿಗರ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಇದರಿಂದ ದೇಶದಲ್ಲಿರುವ ಸರಿಸುಮಾರು 8 ಲಕ್ಷ ಅನಿವಾಸಿ ಭಾರತೀಯರಿಗೆ ಕುವೈತ್​ ತೊರೆಯುವ ಪರಿಸ್ಥಿತಿ ಎದುರಾಗಲಿದೆ.

ಕುವೈತ್​ನಲ್ಲಿ ಸ್ಥಳೀಯರಿಗಿಂತ ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಜಾರಿಮಾಡಲು ನಿರ್ಧರಿಸಲಾಗಿತ್ತು ಎಂದು ತಿಳಿದುಬಂದಿದೆ. ಜೊತೆಗೆ, ಕುಸಿದ ತೈಲ ಬೆಲೆ ಹಾಗೂ ಕೊರೊನಾ ಮಹಾಮಾರಿಯಿಂದ ಕುವೈತ್ ತತ್ತರಿಸಿ ಹೋಗಿದೆ. ಹೀಗಾಗಿ, ತನ್ನ ಆರ್ಥಿಕ ಸಂಪನ್ಮೂಲಗಳನ್ನ ಉಳಿಸಿಕೊಳ್ಳಲು ದೇಶದಲ್ಲಿ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲೇಬೇಕೆಂಬ ಕೂಗು ದೇಶದ ಹಲವೆಡೆಯಿಂದ ಕೇಳಿಬಂದಿದ್ದ ಕಾರಣದಿಂದ ಅಲ್ಲಿನ ಆಡಳಿತವು ಈ ನಿರ್ಧಾರವನ್ನ ಕೈಗೊಂಡಿದೆ.

ಸದ್ಯಕ್ಕೆ, ಕುವೈತ್​ನ ಒಟ್ಟು ಜನಸಂಖ್ಯೆ 4.3 ಮಿಲಿಯನ್​. ಅದರಲ್ಲಿ ಸ್ಥಳೀಯರ ಸಂಖ್ಯೆ ಕೇವಲ 1.3 ಮಿಲಿಯನ್​ ಆದರೆ ಇನ್ನುಳಿದ 3 ಮಿಲಿಯನ್​ ಜನಸಂಖ್ಯೆ ವಲಸಿಗರಿಂದಲೇ ಕೂಡಿದ್ದು. ಈ 3 ಮಿಲಿಯನ್​ನಲ್ಲಿ ಅನಿವಾಸಿ ಭಾರತೀಯರೇ ಬಹುಪಾಲು (1.45 ಮಿಲಿಯನ್​). ಇದೀಗ ಅನುಮೋದನೆ ಸಿಕ್ಕಿರುವ ಮಸೂದೆಯ ಪ್ರಕಾರ ಭರತೀಯರ ಸಂಖ್ಯೆ ಕುವೈತ್​ ಜನಸಂಖ್ಯೆಯ ಶೇಕಡಾ 15ರಷ್ಟು ದಾಟಬಾರದು. ಹೀಗಾಗಿ , ಈ ಮಸೂದೆಯಿಂದ ಲಕ್ಷಾಂತರ ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳಬೇಕಾಗುತ್ತದೆ.

ಪ್ರತಿವರ್ಷ ಇಳಿಮುಖವಾಗಲಿದೆ ವಲಸಿಗರ ಸಂಖ್ಯೆ ಇನ್ನು ಮಸೂದೆಯನ್ನ ಕಾರ್ಯಗತ ಮಾಡಲು ಸೂಕ್ತ ಸಮಿತಿಗೆ ವರ್ಗಾಯಿಸಲಾಗಿದೆ. ಇದಷ್ಟೇ ಅಲ್ಲ, ಮಸೂದೆ ಮತ್ತೊಂದು ಅಂಗವಾಗಿ ಪ್ರತಿ ವರ್ಷವೂ ವಲಸಿಗರ ಸಂಖ್ಯೆಯನ್ನು ಮತ್ತಷ್ಟು ಕಡಿತಗೊಳಿಸುವ ಯೋಚನೆ ಸಹ ಇದೆ. ಜೊತೆಗೆ, ಕಾನೂನುಬಾಹಿರವಾಗಿ ಬಂದು ನೆಲೆಸಿರುವ ಕೌಶಲ್ಯರಹಿತ, ಅಶಿಕ್ಷಿತ ವಲಸಿಗರನ್ನು ಪತ್ತೆಹಚ್ಚಿ ಅವರನ್ನು ಹೊರಗಟ್ಟುವ ಪ್ರಕ್ರಿಯೆಗೂ ಚಾಲನೆ ಸಿಗಲಿದೆ ಎಂದು ತಿಳಿದುಬಂದಿದೆ.

ಭಾರತದ ಆದಾಯಕ್ಕೂ ಬೀಳಲಿದೆ ಹೊಡೆತ ಕುವೈತ್​ನಲ್ಲಿರುವ ಭಾರತದ ರಾಯಭಾರ ಕಚೇರಿ ನೀಡಿರುವ ಅಂಕಿಗಳ ಪ್ರಕಾರ, 28,000 ಜನ ಸರ್ಕಾರಿ ಉದ್ಯೋಗದಲ್ಲಿದ್ದರೆ ಇನ್ನುಳಿದವರು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ಕೆಲಸಕ್ಕೆ ಸಮರ್ಪಕ ವೇತನವೂ ಪಡೆಯುತ್ತಿದ್ದಾರೆ. ಬರುವ ವರಮಾನವನ್ನು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿದ್ದರಿಂದ ದೇಶದ ವಿದೇಶಿ ವಿನಿಮಯದ ಒಳಹರಿವಿನಲ್ಲಿ ಕುವೈತ್​ನ ಭಾರತೀಯರು ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ 2018ರಲ್ಲಿ ಕುವೈತ್​ನ ಅನಿವಾಸಿ ಭಾರತೀಯರಿಂದ ದೇಶಕ್ಕೆ ಸರಿಸುಮಾರು 480 ಕೋಟಿ ರೂಪಾಯಿ ಸಂದಾಯವಾಗಿದೆ. ಆದ್ದರಿಂದ, ಕುವೈತ್​ನ ಈ ಒಂದು ನಿರ್ಧಾರ ಭಾರತದ ವಿದೇಶಿ ಆದಾಯಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಉಂಟಾಗಿದೆ.

ಒಟ್ನಲ್ಲಿ, ಕುವೈತ್​ ಸರ್ಕಾರದ ಆ ಒಂದು ನಿರ್ಧಾರದ ಪರಿಣಾಮ ಭಾರತದಲ್ಲೂ ಪ್ರತಿಧ್ವನಿಸಲಿದೆ ಎಂಬುದು ತಜ್ಞರ ಅಭಿಪ್ರಾಯ. ಆರ್ಥಿಕ ಕೊರತೆಯ ಜೊತೆಗೆ ತಾಯ್ನಾಡಿಗೆ ಮರಳಲಿರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹಲವು ತೊಡಕುಗಳು ಎದುರಾಗಬಹುದು ಎಂಬ ಮಾತೂ ಸಹ ಕೇಳಿಬಂದಿದೆ.

Published On - 6:40 pm, Mon, 6 July 20

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ