ಚೀನಾಕ್ಕೆ ಮತ್ತೊಂದು ಹೊಡೆತ, ಅಮೆರಿಕದಲ್ಲೂ TikTok ಬ್ಯಾನ್​ಗೆ ತೀವ್ರ ಚಿಂತನೆ

ವಾಷಿಂಗ್ಟನ್‌: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡರಂತೆ ಅನ್ನುವಂತಾಗುತ್ತಿದೆ ಕುಟಿಲ ಬುದ್ದಿಯ ಚೀನಾದ ಸ್ಥಿತಿ. ಯಾಕಂದ್ರೆ ಭಾರತದ ವಿರುದ್ಧ ಗಡಿ ಕ್ಯಾತೆ ತೆಗಿದಿದ್ದೇ ಬಂತು ಭಾರತ ಅದರ 59 ಆಪ್‌ಗಳನ್ನ ಬ್ಯಾನ್‌ ಮಾಡಿತು. ಈಗ ಅಮೆರಿಕ ಕೂಡಾ ಭಾರತದಂತೆ ಟಿಕ್‌ಟಾಕ್‌ ಬ್ಯಾನ್‌ ಮಾಡಲು ಮುಂದಾಗಿದೆ. ಭಾರತದಂತೆ ಅಮೆರಿಕದಲ್ಲಿಯೂ ಟಿಕ್‌ಟಾಕ್‌ ಬ್ಯಾನ್‌? ಹೌದು, ಗಲ್ವಾನ್‌ ಕಣಿವೆಯಲ್ಲಿ ಭಾರತದ 20 ಯೋಧರ ಸಾವಿಗೆ ಕಾರಣವಾದ ಚೀನಾ ವಿರುದ್ದ ಸೇಡು ತೀರಿಸಿಕೊಳ್ಳಲು ಭಾರತ ಟಿಕ್‌ಟಾಕ್‌ ಸೇರಿದಂತೆ ಚೀನಾದ 59 ಆಪ್‌ಗಳನ್ನು ಬ್ಯಾನ್‌ ಮಾಡಿತು. ಇದು […]

ಚೀನಾಕ್ಕೆ ಮತ್ತೊಂದು ಹೊಡೆತ, ಅಮೆರಿಕದಲ್ಲೂ TikTok ಬ್ಯಾನ್​ಗೆ ತೀವ್ರ ಚಿಂತನೆ
Follow us
Guru
| Updated By: ಸಾಧು ಶ್ರೀನಾಥ್​

Updated on:Jul 07, 2020 | 2:21 PM

ವಾಷಿಂಗ್ಟನ್‌: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡರಂತೆ ಅನ್ನುವಂತಾಗುತ್ತಿದೆ ಕುಟಿಲ ಬುದ್ದಿಯ ಚೀನಾದ ಸ್ಥಿತಿ. ಯಾಕಂದ್ರೆ ಭಾರತದ ವಿರುದ್ಧ ಗಡಿ ಕ್ಯಾತೆ ತೆಗಿದಿದ್ದೇ ಬಂತು ಭಾರತ ಅದರ 59 ಆಪ್‌ಗಳನ್ನ ಬ್ಯಾನ್‌ ಮಾಡಿತು. ಈಗ ಅಮೆರಿಕ ಕೂಡಾ ಭಾರತದಂತೆ ಟಿಕ್‌ಟಾಕ್‌ ಬ್ಯಾನ್‌ ಮಾಡಲು ಮುಂದಾಗಿದೆ.

ಭಾರತದಂತೆ ಅಮೆರಿಕದಲ್ಲಿಯೂ ಟಿಕ್‌ಟಾಕ್‌ ಬ್ಯಾನ್‌? ಹೌದು, ಗಲ್ವಾನ್‌ ಕಣಿವೆಯಲ್ಲಿ ಭಾರತದ 20 ಯೋಧರ ಸಾವಿಗೆ ಕಾರಣವಾದ ಚೀನಾ ವಿರುದ್ದ ಸೇಡು ತೀರಿಸಿಕೊಳ್ಳಲು ಭಾರತ ಟಿಕ್‌ಟಾಕ್‌ ಸೇರಿದಂತೆ ಚೀನಾದ 59 ಆಪ್‌ಗಳನ್ನು ಬ್ಯಾನ್‌ ಮಾಡಿತು. ಇದು ಭಾರೀ ಅಲ್ಲದಿದ್ರೂ ತಕ್ಕ ಮಟ್ಟಿನ ಹೊಡೆತವನ್ನು ಚೀನಾಗೆ ನೀಡಲಿದೆ ಅನ್ನೋ ಲೆಕ್ಕಾಚಾರ ಭಾರತದ್ದು.

ಈಗ ಇದೇ ಭಾರತದ ಪಾಲಿಸಿಯನ್ನ ಅಮೆರಿಕ ಕೂಡಾ ಪಾಲಿಸಲು ಮುಂದಾಗಿದೆ. ಅಮೆರಿಕ ಚೀನಾದ ವಿಡಿಯೋ ಶೇರಿಂಗ್‌ ಟಿಕ್‌ಟಾಕ್‌ ಅಪ್‌ ಸೇರಿ ಕೆಲವೊಂದು ಅಪ್‌ಗಳನ್ನ ಬ್ಯಾನ್‌ ಮಾಡಲು ಮುಂದಾಗಿದೆ.

ಟಿಕ್‌ಟಾಕ್‌ ಬ್ಯಾನ್‌ ಮಾಡಲು ಚಿಂತನೆ ಈ ಸಂಬಂಧ ಮಾತನಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೋ ಅಮೆರಿಕ ಚೀನಾದ ಕೆಲ ಅಪ್‌ಗಳನ್ನು ಬ್ಯಾನ್‌ ಮಾಡಲು ಚಿಂತಿಸುತ್ತಿದೆ. ಇದರಲ್ಲಿ ವಿಡಿಯೋ ಶೇರಿಂಗ್‌ ಅಪ್‌ ಟಿಕ್‌ಟಾಕ್‌ ಕೂಡಾ ಸೇರಿದೆ ಎಂದಿದ್ದಾರೆ. ಆದ್ರೆ ಈ ಕುರಿತು ಅಂತಿಮವಾಗಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಪ್ರಕಟಿಸುತ್ತಾರೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನು ಹೇಳಲಾರೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಆಪ್ತವಾಗಿರುವ ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಟಿಕ್‌ಟಾಕ್‌ ಬ್ಯಾನ್‌ ಟ್ರಂಪ್‌ ಅವರ ಚುನಾವಣಾ ಗಿಮಿಕ್‌? ಮೈಕ್‌ ಪೊಂಪಿಯೋ ಅವರ ಈ ಮಾತನ್ನ ಕೇಳಿದ್ರೆ ಒಂದಂತೂ ಸ್ಪಷ್ಟವಾಗುತ್ತಿದೆ. ಮೊದಲೇ ಚುನಾವಣಾ ವರ್ಷದಲ್ಲಿರುವ ಟ್ರಂಪ್‌, ಭಾರತದಂತೆ ಚೀನಾದ ಟಿಕ್‌ಟಾಕ್‌ ಸೇರಿ ಕೆಲವೊಂದು ಆಪ್‌ಗಳನ್ನ ಬ್ಯಾನ್‌ ಮಾಡುವುದಂತೂ ಪಕ್ಕಾ. ಈ ಹೀಗೆ ಬ್ಯಾನ್‌ ಮಾಡುವುದರಿಂದ ಅಮೆರಿಕವೇನೂ ಸಾಧಿಸಿದಂತಾಗುವುದಿಲ್ಲ. ಆದ್ರೆ ನವೆಂಬರ್‌ನಲ್ಲಿ ನಡೆಯಲಿರುವ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಗಿಮಿಕ್‌ ವರ್ಕ್‌ ಔಟ್‌ ಆಗುವ ಲೆಕ್ಕಾಚಾರ ಟ್ರಂಪ್‌ ಆಡಳಿತದ್ದು.

Published On - 2:19 pm, Tue, 7 July 20

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು