ಇಟಲಿಯ ಐತಿಹಾಸಿಕ ನಗರಿ ವೆನಿಸ್‌ನಲ್ಲಿ ಕೆಲವು ಜನಪ್ರಿಯ ಕಾಲುವೆಗಳು ಬತ್ತಿ ಹೋಗಿವೆ, ಪ್ರವಾಸಿಗರು ಮತ್ತು ಗೊಂಡೊಲಾ ನಿರ್ವಾಹಕರು ನಿರಾಶೆಗೊಂಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಇಟಲಿಯ ವೆನೆಟೊ ಪ್ರದೇಶದ ರಾಜಧಾನಿಯಾದ ವೆನಿಸ್ 100 ಕ್ಕೂ ಹೆಚ್ಚು ಸಣ್ಣ ದ್ವೀಪಗಳು ಸೇರಿ ಮಾಡಲ್ಪಟ್ಟಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲು ಕನಸು ಕಾಣುವ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಯಾವುದೇ ರಸ್ತೆಗಳನ್ನು ಹೊಂದಿಲ್ಲ, ಕೇವಲ ಕಾಲುವೆಗಳು ಮತ್ತು ಗೋಥಿಕ್ ಅರಮನೆಗಳಿಂದ ಕೂಡಿದೆ.
ಕಳೆದ ಕೆಲವು ದಿನಗಳಿಂದ ವೆನಿಸ್‌ನ ಕೆಲವು ಕಾಲುವೆಗಳು ಬಹುತೇಕ ಒಣಗುತ್ತಿವೆ, ನಿಂತಲ್ಲೇ ನಿಂತ ವಾಟರ್ ಟ್ಯಾಕ್ಸಿಗಳು, ಗೊಂಡೊಲಾಗಳು (ಕಾಲುವೆಗಳಲ್ಲಿ ಸಾಗುವ ಪುಟ್ಟ ದೋಣಿಗಳು), ಮತ್ತು ಆಂಬ್ಯುಲೆನ್ಸ್ ದೋಣಿಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿವೆ. ದೀರ್ಘಾವಧಿಯ ಉಬ್ಬರವಿಳಿತಗಳು ಮತ್ತು ಮಳೆಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.
ಕಳೆದ ಕೆಲವು ದಿನಗಳಿಂದ ವೆನಿಸ್‌ನ ಕೆಲವು ಕಾಲುವೆಗಳು ಬಹುತೇಕ ಒಣಗುತ್ತಿವೆ, ನಿಂತಲ್ಲೇ ನಿಂತ ವಾಟರ್ ಟ್ಯಾಕ್ಸಿಗಳು, ಗೊಂಡೊಲಾಗಳು (ಕಾಲುವೆಗಳಲ್ಲಿ ಸಾಗುವ ಪುಟ್ಟ ದೋಣಿಗಳು), ಮತ್ತು ಆಂಬ್ಯುಲೆನ್ಸ್ ದೋಣಿಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿವೆ. ದೀರ್ಘಾವಧಿಯ ಉಬ್ಬರವಿಳಿತಗಳು ಮತ್ತು ಮಳೆಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.
ವೆನಿಸ್ ಹಲವು ಬರಿ ಪ್ರವಾಹದಿಂದ ಬಳಲುತ್ತಿತ್ತು ಆದರೆ ಇದೀಗ ನೀರಿನ ಮಟ್ಟವು ಕಡಿಮೆಯಾಗಿರುವುದು ಆಶ್ಚರ್ಯಕರವಾಗಿದೆ. 2019 ರಲ್ಲಿ, ಇದು 1966 ರ ನಂತರದ ಅತ್ಯಂತ ಕೆಟ್ಟ ಪ್ರವಾಹಕ್ಕೆ ಸಾಕ್ಷಿಯಾಯಿತು, ಇದು ನೂರಾರು ಮಿಲಿಯನ್ ಯುರೋಗಳಷ್ಟು ಮೌಲ್ಯದ ಹಾನಿಯಾಗಿತ್ತು.
ಉತ್ತರ ಇಟಲಿಯಲ್ಲಿರುವ ವೆನಿಸ್ ನಗರವು ವಿಶಿಷ್ಟವಾದ ಭೌಗೋಳಿಕತೆಯನ್ನು ಹೊಂದಿದೆ. ಈ ಪ್ರದೇಶದಲ್ಲಿ ಒಟ್ಟು 118 ಕ್ಕೂ ಸಣ್ಣ ದ್ವೀಪಗಳಿವೆ. 70,176.4 ಹೆ., ವೆನೆಷಿಯನ್ ಆವೃತವನ್ನು ಆಡ್ರಿಯಾಟಿಕ್ ಸಮುದ್ರದಿಂದ ಬೇರ್ಪಡಿಸಲಾಗಿದೆ. NASA ಚಿತ್ರವು ವೆನೆಷಿಯನ್ ಲಗೂನ್‌ನಲ್ಲಿರುವ ಕಟ್ಟಡಗಳ ಕೆಂಪು ಟೈಲ್ ಛಾವಣಿಗಳನ್ನು ತೋರಿಸುತ್ತದೆ.
Venice Lagoon – This image was snapped May 9 from the space station’s #Exp39 crew: http://t.co/7NlpNBoxsX #ISS pic.twitter.com/Gk8eARgAEj
— NASA (@NASA) June 2, 2014
UNESCO ಪ್ರಕಾರ, 5 ನೇ ಶತಮಾನದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಬಂದ ರೈತರು ಮತ್ತು ಮೀನುಗಾರರು ನಂತರ ಷಷ್ಟವಾಗಿ ಇಲ್ಲೆಯೇ ನೆಲೆಸಿದರು. “ವೆನಿಸ್ ಮತ್ತು ಅದರ ಆವೃತ ಭೂದೃಶ್ಯವು ಪರಿಸರವು ತನ್ನ ಸುತ್ತ ಮುತ್ತಲಿನ ನಿವಾಸಿಗಳೊಂದಿಗೆ ಬದಲಾಗುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ” ಎಂದು UNESCO ಹೇಳುತ್ತದೆ.
ಪ್ರಸ್ತುತ, ಸಮೀಪದ ನೀರಿಲ್ಲದ ಕಾಲುವೆಗಳು ನಗರದಲ್ಲಿ ದೈನಂದಿನ ಜೀವನವನ್ನು ಅಡ್ಡಿಪಡಿಸಿವೆ ಏಕೆಂದರೆ ಅವುಗಳು ಹೆಚ್ಚಿನ ಸಾರಿಗೆಯನ್ನು ಸಾಗಿಸಲು ಈ ಕಾಲುವೆಗಳನ್ನು ಉಪಯೋಗಿಸುತ್ತಿದ್ದರು. ಅದಲ್ಲದೆ ವೆನಿಸ್‌ನಾದ್ಯಂತ ವಾಹನಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ಅಲ್ಲಿನ ನಾಗರಿಗರಿಗೆ ಸಂಚರಿಸಲು ಇರುವುದು ಇದೊಂದೇ ಮಾರ್ಗ.
ಕಾಲುವೆಗಳು ಬತ್ತಿರುವುದರಿಂದ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಆಂಬುಲೆನ್ಸ್ ಅನ್ನು ಕಾಲುವೆಗಳಿಂದ ದೂರವಿರುವಂತೆ ಮಾಡಿದೆ ಎಂದು ಎಪಿ ವರದಿ ತಿಳಿಸಿದೆ. ಸಿಬ್ಬಂದಿಗಳು “ಕೆಲವೊಮ್ಮೆ ಕೈಯಿಂದ ಸ್ಟ್ರೆಚರ್‌ಗಳನ್ನು ಬಹಳ ದೂರದವರೆಗೆ ಒಯ್ಯಬೇಕಾಗುತ್ತದೆ, ಏಕೆಂದರೆ ಅವರ ಹಡಗುಗಳು ಕಾಲುವೆಗಳ ಮೇಲೆ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ನೀರು ಮತ್ತು ಕೆಸರಿನ ಗುಂಡಿಗಳಿವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ” ಎಂದು ವರದಿ ಸೇರಿಸಲಾಗಿದೆ.
ಇದಲ್ಲದೆ, ವೆನಿಸ್‌ನ ಪ್ರಸಿದ್ಧ ಸೇತುವೆಗಳ ಅಡಿಯಲ್ಲಿ ಪ್ರಯಾಣಿಸುವ ಗೊಂಡೊಲಾಗಳು, ಫ್ಲಾಟ್-ಬಾಟಮ್ ಉದ್ದದ ದೋಣಿಗಳು ಒಣಗಿದ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗದ ಕಾರಣ ಪ್ರವಾಸಿಗರು ನಿರಾಶೆಗೊಂಡಿದ್ದಾರೆ. ಹವಾಮಾನ ವಿಶ್ಲೇಷಕರ ಪ್ರಕಾರ, ಹೆಚ್ಚಿನ ಒತ್ತಡದ ವಾತಾವರಣ ನಗರವನ್ನು ಅಂಟಿಕೊಂಡಿದೆ, ಇದು ಕಡಿಮೆ ಉಬ್ಬರವಿಳಿತಗಳನ್ನು ಸೃಷ್ಟಿಸುತ್ತದೆ, ಇದರಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಈ ಸಮಸ್ಯೆಯ ಹಿಂದಿನ ಮೂಲ ಕಾರಣ ಇಟಲಿಯಾದ್ಯಂತ ಸೃಷ್ಟಿಯಾದ ಬರಗಾಲ.
ಇಟಾಲಿಯನ್ ನದಿಗಳು ಮತ್ತು ಸರೋವರಗಳ ಮೇಲೆ ಹವಾಮಾನ ಬದಲಾವಣೆಯ ಪ್ರಭಾವದ ಬಗ್ಗೆ ವಿಜ್ಞಾನಿಗಳು ದಶಕಗಳಿಂದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಆದರೆ ಸರ್ಕಾರಗಳು ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ ಎಂದು ನೇಚರ್ ಜರ್ನಲ್ನ 2022 ರ ವರದಿ ಹೇಳಿದೆ. ಟುರಿನ್ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಮತ್ತು ಹೈಡ್ರೊಬಯಾಲಜಿಯ ಪ್ರಾಧ್ಯಾಪಕ ಸ್ಟೆಫಾನೊ ಫೆನೊಗ್ಲಿಯೊ ಜರ್ನಲ್ ಜೊತೆ ಮಾತನಾಡಿದಾಗ, “ಇಟಲಿಯಲ್ಲಿ ಇಂತಹ ಹವಾಮಾನ ಬದಲಾವಣೆಗಳು ಬಹಳಷ್ಟು ಕಾಣಿಸಿಕೊಳ್ಳಲು ಪ್ರಾರಂಭವಾಗಿವೆ, ವಿಶೇಷವಾಗಿ ಆಲ್ಪೈನ್ ಪ್ರದೇಶ ಈ ಬಿಕ್ಕಟ್ಟನ್ನು ಎದುರಿಸುವುದು ತಯಾರಿ ಮಾಡಿಕೊಳ್ಳಬೇಕಿದೆ.” ಎಂದು ತಿಳಿಸಿದರು.