Earthquake: ಪಪುವಾ ನ್ಯೂ ಗಿನಿಯಾ ದ್ವೀಪ ರಾಷ್ಟ್ರದಲ್ಲಿ 6.5ರಷ್ಟು ತೀರ್ವತೆಯಲ್ಲಿ ಕಂಪಿಸಿದ ಭೂಮಿ
ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಬರುವ ದ್ವೀಪ 'ಪಪುವಾ ನ್ಯೂ ಗಿನಿಯಾ' ದ್ವೀಪ ರಾಷ್ಟ್ರದಲ್ಲಿ ಇಂದು (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.5 ದಾಖಲಾಗಿದೆ.
ನ್ಯೂ ಬ್ರಿಟನ್: ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಬರುವ ದ್ವೀಪ ‘ಪಪುವಾ ನ್ಯೂ ಗಿನಿಯಾ’ (Papua New Guinea) ದ್ವೀಪ ರಾಷ್ಟ್ರದಲ್ಲಿ ಇಂದು (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.5 ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಇದರಿಂದ ಸುನಾಮಿಯ ಆತಂಕವಿಲ್ಲ ಎಂದು ಹೇಳಿದೆ. ಪಶ್ಚಿಮ ಬ್ರಿಟನ್ನಲ್ಲಿ ಭೂಕಂಪನ ಸಂಭಿವಿಸಿದ್ದು, ಭೂಮಿಯ 38 ಕಿ ಮೀ ಆಳದಲ್ಲಿ ಸಂಭವಿಸಿದೆ.
Earthquake of magnitude 6.5 strikes Papua New Guinea:USGS
— ANI (@ANI) February 25, 2023
ಅಫ್ಘಾನಿಸ್ಥಾನದಲ್ಲಿ 4.3 ತೀರ್ವತೆಯಲ್ಲಿ ಕಂಪಿಸಿದ ಭೂಮಿ
ಅಫ್ಘಾನಿಸ್ಥಾನ: ಅಫ್ಘಾನಿಸ್ಥಾನದಲ್ಲೂ ಕೂಡ ಭೂಕಂಪನ ಸಂಭಿವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3 ದಾಖಲಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಫಯಾಜಾಬಾದನಿಂದ 273 ಕಿ ಮೀ ದೂರದಲ್ಲಿ ಭೂಮಿ ಕಂಪಿಸಿದೆ. ಭೂಮಿಯ 180 ಕಿಮೀ ಆಳದಲ್ಲಿ ಭೂಕಂಪನವಾಗಿದೆ.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 am, Sun, 26 February 23