ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಪೊಲೀಸ್ ಅಧಿಕಾರಿ ಕಾರಿನ ಬಳಿ ಚುಂಬಿಸಿರುವ ವಿಡಿಯೋ ಎಲ್ಲ ಕಡೆ ವೈರಲ್ ಆಗಿದ್ದು, ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ವಿಡಿಯೋದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಪ್ರಿನ್ಸ್ ಜಾರ್ಜ್‌ನ ಕೌಂಟಿ ಪೊಲೀಸ್ ಅಧಿಕಾರಿ ಫ್ರಾನ್ಸೆಸ್ಕೊ ಮಾರ್ಲೆಟ್ ಎಂದು ಗುರುತಿಸಲಾಗಿದ್ದು, ಸಾರ್ವಜನಿಕ ಪಾರ್ಕ್ ಬಳಿ ಮಹಿಳೆಯೊಬ್ಬರನ್ನು ಅಪ್ಪಿಕೊಂಡು ಮುತ್ತಿಡುತ್ತಿರುವುದನ್ನು ವೀಡಿಯೊ ತೋರಿಸಲಾಗಿದೆ. ನಂತರ ಮಹಿಳೆ ಅಧಿಕಾರಿಯ ಕೈಯನ್ನು ಹಿಡಿದುಕೊಂಡು, ವಾಹನದ ಹಿಂಭಾಗಕ್ಕೆ ಬರುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇನ್ನು ಈ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಹೇಳಿರುವ ಪ್ರಕಾರ ಬಾಲ್ಟಿಮೋರ್ ಬ್ಯಾನರ್ನಲ್ಲಿರುವ ಉದ್ಯಾನವನದಿಂದ ಪೊಲೀಸ್ ಮತ್ತು ಮಹಿಳೆ ಪ್ರತ್ಯೇಕವಾಗಿ ಹೊರಗೆ ಬಂದಿದ್ದಾರೆ. ಪಾರ್ಕ್ನ ಒಳಗೆ ಇಬ್ಬರು ಸುಮಾರು 40 ನಿಮಿಷಗಳ ಕಾಲ ಕಳೆದಿದ್ದಾರೆ. ABC 7News ಪ್ರಕಾರ, ಆಕ್ಸನ್ ಹಿಲ್ ಹೈಸ್ಕೂಲ್‌ನ ಪಕ್ಕದಲ್ಲಿರುವ ಕಾರ್ಸನ್ ಪಾರ್ಕ್‌ನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ:ಮಧ್ಯರಾತ್ರಿ ಎದುರು ಮನೆ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ದೆವ್ವನಾ? ವಿಡಿಯೋ ವೈರಲ್ ಆಗಿದೆ
ಮಾರ್ಲೆಟ್ ಮತ್ತು ವಿಡಿಯೋದಲ್ಲಿರುವ ಮಹಿಳೆಯ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯನಿರತ ಅಧಿಕಾರಿಗಳು ಅಪರಿಚಿತ ವ್ಯಕ್ತಿಗಳ ಜತೆಗೆ ಅಸಭ್ಯವಾಗಿ ವರ್ತನೆ ಮಾಡುವುದು ಸರಿಯಲ್ಲ ಎಂದು ಮಾರ್ಲೆಟ್ ಅವರನ್ನು ಮಂಗಳವಾರ ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
Prince George’s County Police officer in Maryland caught on video embracing and kissing an individual before entering a police SUV with her.
PGPD has launched an investigation. pic.twitter.com/iobAtRjXhm
— BoreCure (@CureBore) September 5, 2023
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಪೊಲೀಸ್ ಇಲಾಖೆ, ಮಾರ್ಲೆಟ್ ಅವರನ್ನು ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಮಾರ್ಲೆಟ್ ಅವರ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ಇದ್ದು, ಶಿಕ್ಷೆಯನ್ನು ಕೂಡ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Thu, 7 September 23