ಆಸಿಯಾನ್ ಶೃಂಗಸಭೆಗಾಗಿ ಇಂಡೋನೇಷ್ಯಾ ತೆರಳಿದ ಪ್ರಧಾನಿ ಮೋದಿ, ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ
ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಜಕಾರ್ತಾ ತಲುಪಿದ್ದಾರೆ. ಅಲ್ಲಿ ಅವರನ್ನು ಭಾರತೀಯ ವಲಸಿಗರು ಆತ್ಮೀಯವಾಗಿ ಸ್ವಾಗತಿಸಿದರು. ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರ ಆಹ್ವಾನದ ಮೇರೆಗೆ ಮೋದಿ ಇಂಡೋನೇಷ್ಯಾ ತಲುಪಿದ್ದಾರೆ. ರಿಟ್ಜ್ ಕಾರ್ಲ್ಟನ್ ಹೋಟೆಲ್ನಲ್ಲಿ ಮೋದಿಯನ್ನು ಸ್ವಾಗತಿಸಲು ನೆರೆದಿದ್ದ ಅನಿವಾಸಿ ಭಾರತೀಯರು ವಂದೇ ಮಾತರಂ, ಮೋದಿ ಮೋದಿ ಎಂದು ಜೈಕಾರದ ನಡುವೆ ಭವ್ಯ ಸ್ವಾಗತ ಕೋರಿದರು.ಮಕ್ಕಳು ಸೇರಿದಂತೆ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜಕಾರ್ತಾ ತಲುಪಿದ್ದಾರೆ. ಅಲ್ಲಿ ಅವರನ್ನು ಭಾರತೀಯ ವಲಸಿಗರು ಆತ್ಮೀಯವಾಗಿ ಸ್ವಾಗತಿಸಿದರು. ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರ ಆಹ್ವಾನದ ಮೇರೆಗೆ ಮೋದಿ ಇಂಡೋನೇಷ್ಯಾ ತಲುಪಿದ್ದಾರೆ. ರಿಟ್ಜ್ ಕಾರ್ಲ್ಟನ್ ಹೋಟೆಲ್ನಲ್ಲಿ ಮೋದಿಯನ್ನು ಸ್ವಾಗತಿಸಲು ನೆರೆದಿದ್ದ ಅನಿವಾಸಿ ಭಾರತೀಯರು ವಂದೇ ಮಾತರಂ, ಮೋದಿ ಮೋದಿ ಎಂದು ಜೈಕಾರದ ನಡುವೆ ಭವ್ಯ ಸ್ವಾಗತ ಕೋರಿದರು.ಮಕ್ಕಳು ಸೇರಿದಂತೆ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
18ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು 20ನೇ ಆಸಿಯಾನ್ -ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂಡೋನೇಷ್ಯಾಗೆ ತೆರಳಿದ್ದಾರೆ.
ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ
ಜಾಗತಿಕ ಅಭಿವೃದ್ಧಿಯಲ್ಲಿ ಆಸಿಯಾನ್ ಪ್ರಮುಖ ಪಾತ್ರವಹಿಸಿದೆ, ವಸುಧೈವ ಕುಟುಂಬಕಂ ಒಂದು ಭೂಮಿ, ಒಂದು ಕುಟುಂಬ ಒಂದು ಭವಿಷ್ಯ ಇದು ಜಿ20 ಶೃಂಗಸಭೆಯ ವಿಷಯವಾಗಿದೆ ಎಂದರು.
ಮತ್ತಷ್ಟು ಓದಿ: ಜಿ20 ಶೃಂಗಸಭೆಗೆ ಮುನ್ನ ಜಕಾರ್ತಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ; ಪ್ರವಾಸದ ವೇಳಾಪಟ್ಟಿ ಹೀಗಿದೆ
G20 ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳು ಭಾರತದಲ್ಲಿ ಪೂರ್ಣಗೊಂಡು ಇತರ ದೇಶಗಳ ಪ್ರತಿನಿಧಿಗಳು ಭಾರತವನ್ನು ತಲುಪುತ್ತಿರುವ ಸಮಯದಲ್ಲಿ ASEAN ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಜಕಾರ್ತಕ್ಕೆ ತೆರಳಿದ್ದಾರೆ.
#WATCH | Prime Minister Narendra Modi met members of the Indian Diaspora, before attending the 20th ASEAN-India Summit and 18th East Asia Summit, earlier today. pic.twitter.com/jzw0jG0cWl
— ANI (@ANI) September 7, 2023
ವಿದೇಶಾಂಗ ಇಲಾಖೆಯ ಅಧಿಕಾರಿಯ ಪ್ರಕಾರ, ಭಾರತದಲ್ಲಿ G20 ಪ್ರತಿನಿಧಿ ರಾಷ್ಟ್ರಗಳ ನಾಯಕರನ್ನು ತಲುಪುವ ಪ್ರಕ್ರಿಯೆಯು ಪ್ರಾರಂಭವಾದಾಗ, ಅಂತಹ ಸಮಯದಲ್ಲಿ ಈ ಶೃಂಗಸಭೆಯಲ್ಲಿ ಸ್ವತಃ ಪ್ರಧಾನಿ ಮೋದಿ ಭಾಗವಹಿಸುವುದು ಭಾರತದ ಪೂರ್ವ ನೋಟ, ಗಂಭೀರತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ.
ನಮ್ಮ ಇತಿಹಾಸ ಮತ್ತು ಭೌಗೋಳಿಕತೆಯು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳನ್ನು ಒಗ್ಗೂಡಿಸುತ್ತದೆ. ಅದರ ಜತೆ ನಮ್ಮ ಮೌಲ್ಯಗಳು, ಪ್ರಾದೇಶಿಕ ಏಕೀಕರಣ ಮತ್ತು ಶಾಂತಿ, ಸಮೃದ್ಧಿ ಮತ್ತು ಬಹುಧ್ರುವ ಪ್ರಪಂಚ ಕೂಡಾ ನಮ್ಮನ್ನು ಒಗ್ಗೂಡಿಸುತ್ತದೆ.
ಆಸಿಯಾನ್ ಭಾರತದ ಪೂರ್ವ ನೀತಿಯ ಕೇಂದ್ರ ಸ್ತಂಭ ಎಂದೇ ಹೇಳಬಹುದು. ಆಸಿಯಾನ್-ಭಾರತ ಕೇಂದ್ರೀಯತೆ ಮತ್ತು ಇಂಡೋ-ಪೆಸಿಫಿಕ್ ಕುರಿತು ಆಸಿಯಾನ್ ದೃಷ್ಟಿಕೋನವನ್ನು ಭಾರತ ಬೆಂಬಲಿಸಲಿದೆ. ಭಾರತ- ಆಸಿಯಾನ್ ಉತ್ತಮ ಸ್ನೇಹಿತರು, ಆಸಿಯಾನ್ ರಾಷ್ಟ್ರಗಳ ಅಭಿವೃದ್ಧಿಗೆ ಭಾರತ ಸಹಕಾರ ನೀಡಲಿದೆ. ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೆರವು ನೀಡಲಾವುದು ಎಂದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ