ಹನೋಯಿ, ಸೆಪ್ಟೆಂಬರ್ 14: ವಿಯೆಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಭಾರೀ ಅಗ್ನಿ ದುರಂತಕ್ಕೆ 56 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹನೋಯಿ ನಗರದ 9 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಬೆಂಕಿ ಪ್ರಮಾದದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹನೋಯಿ ಪೊಲೀಸ್ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಚಿಕ್ಕ ಮಗುವನ್ನು ಎತ್ತರದ ಮಹಡಿಯಿಂದ ಎಸೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
Deadly fire in Hanoi apartment building kills 50, injures
54 #Vietnam #Hanoi #HanoiFire #Accident #HanoiApartment #BNN #Worldnews #Dailynews #Breakingnews #Newsupdate pic.twitter.com/hQT85I4dm7— Anchor Manish Kumar (@manishA20058305) September 13, 2023
ವಿಯೆಟ್ನಾಂ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಾರಣಾಂತಿಕ ಬೆಂಕಿಯನ್ನು ಅನುಭವಿಸಿದೆ. ಅದರಲ್ಲೂ ಆಗಾಗ್ಗೆ ಜನಪ್ರಿಯ ಕರೋಕೆ ಬಾರ್‌ಗಳಂತಹ ಮನರಂಜನಾ ಸ್ಥಳಗಳಲ್ಲಿ ಇಂತಹ ದುರಂತಗಳು ಘಟಸಿವೆ. ಒಂದು ವರ್ಷದ ಹಿಂದೆ ವಾಣಿಜ್ಯ ಕೇಂದ್ರವಾದ ಹೋ ಚಿ ಮಿನ್ಹ್ ಸಿಟಿಯಲ್ಲಿ ಮೂರು ಅಂತಸ್ತಿನ ಕರೋಕೆ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು 32 ಜನರು ಸಾವನ್ನಪ್ಪಿದರು. ಆ ಬೆಂಕಿಯಲ್ಲಿ 17 ಜನರು ಗಾಯಗೊಂಡಿದ್ದರು.
ಪ್ರಸ್ತುತ ಅವಘಡದಲ್ಲಿ ಬೆಂಕಿ ತಡೆಗಟ್ಟುವ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಾಲೀಕರನ್ನು ಬಂಧಿಸಲಾಗಿದೆ. ದುರಂತದ ನಂತರ, ಪ್ರಧಾನ ಮಂತ್ರಿ ಫಾಮ್ ಮಿನ್ ಚಿನ್ಹ್ ಎಲ್ಲಾ ಅಪಾಯಕಾರಿ ಸ್ಥಳಗಳ ಪರಿಶೀಲನೆಗೆ ಆದೇಶಿಸಿದರು.
ಟ್ರಿಪೋಲಿ, ಸೆ.14: ಲಿಬಿಯಾ ದೇಶದಲ್ಲಿ ಅಬ್ಬರಿಸಿದ ಭೀಕರ ಡೇನಿಯಲ್ ಚಂಡಮಾರುತ (Daniel cyclone) ಹಾಗೂ ಪ್ರವಾಹಕ್ಕೆ (Flood) ಸಾವನ್ನಪ್ಪಿದವರ ಸಂಖ್ಯೆ 20 ಸಾವಿರಕ್ಕೆ ಏರಿಕೆಯಾಗಿದ್ದು, ಈ ಪೈಕಿ ಐದು ಸಾವಿರ ಶವಗಳು ಡೆರ್ನಾ ನಗರವೊಂದರಲ್ಲೇ ಪತ್ತೆಯಾಗಿದೆ. ಚಂಡಮಾರುತದಿಂದಾಗಿ 2 ಡ್ಯಾಮ್ ಒಡೆದು ಈ ದುರಂತ ಸಂಭವಿಸಿದೆ.
ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಮತ್ತು ಅನೇಕರು ಸಮುದ್ರಕ್ಕೆ ಕೊಚ್ಚಿಕೊಂಡು ಹೋದ ಭೀಕರ ಪ್ರವಾಹದ ನಂತರ, ಹಾನಿಗೊಳಗಾದ ಲಿಬಿಯಾದ ನಗರ ಡೆರ್ನಾದ ನಿವಾಸಿಗಳು ಕಾಣೆಯಾದ ತಮ್ಮ ಸಂಬಂಧಿಕರಿಗಾಗಿ ತೀವ್ರ ಹುಡುಕಾಡುತ್ತಿದ್ದಾರೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡುಬಿಟ್ಟಿದ್ದು, ಕಟ್ಟಡ ಹಾಗೂ ಸಮುದ್ರ ತೀರದಿಂದ ಶವಗಳನ್ನು ಹೊರತೆಗೆಯುತ್ತಿದ್ದಾರೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 am, Thu, 14 September 23