ಲಿಬಿಯಾದಲ್ಲಿ ಡೇನಿಯನ್ ಚಂಡಮಾರುತ, ಭಾರಿ ಪ್ರವಾಹಕ್ಕೆ ಸಿಲುಕಿ 2 ಸಾವಿರಕ್ಕೂ ಅಧಿಕ ಮಂದಿ ಸಾವು, ಸಾವಿರಾರು ಮಂದಿ ನಾಪತ್ತೆ
ಲಿಬಿಯಾದಲ್ಲಿ ಸಂಭವಿಸಿದ ಡೇನಿಯಲ್ ಚಂಡಮಾರುತ ಹಾಗೂ ಭಾರಿ ಪ್ರವಾಹಕ್ಕೆ ಸಿಲುಕಿ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಡೇನಿಯಲ್ ಚಂಡಮಾರುತದ ನಂತರ ಪ್ರವಾಹವು ವಿನಾಶವನ್ನುಂಟು ಮಾಡಿದ್ದು ಅದನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ. ಮೆಡಿಟರೇನಿಯನ್ ಚಂಡಮಾರುತ ಡೇನಿಯಲ್ ಲಿಬಿಯಾದಲ್ಲಿ ವಿನಾಶಕಾರಿ ಪ್ರವಾಹಕ್ಕೆ ಕಾರಣವಾಯಿತು.

ಇದರಿಂದಾಗಿ ಅಣೆಕಟ್ಟುಗಳು ಒಡೆಯುತ್ತವೆ ಮತ್ತು ಉತ್ತರ ಆಫ್ರಿಕಾದ ರಾಷ್ಟ್ರದ ಪೂರ್ವದಲ್ಲಿರುವ ಹಲವಾರು ಕರಾವಳಿ ನಗರಗಳ ಸಂಪೂರ್ಣ ಪ್ರದೇಶಗಳು ಕೊಚ್ಚಿಹೋಗಿವೆ. ಡರ್ನಾದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಪೂರ್ವದ ಬೈಡಾ ನಗರದಲ್ಲಿ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನಗರದ ಮುಖ್ಯ ವೈದ್ಯಕೀಯ ಕೇಂದ್ರದ ಮುಖ್ಯಸ್ಥ ಅಬ್ದೆಲ್-ರಹೀಮ್ ಮಜೆಕ್ ಈ ಮಾಹಿತಿ ನೀಡಿದರು.
ಈಶಾನ್ಯ ಲಿಬಿಯಾದ ಕರಾವಳಿ ನಗರವಾದ ಸುಸಾದಲ್ಲಿ ಇತರ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶಾಹತ್ ಮತ್ತು ಒಮರ್ ಅಲ್-ಮೊಕ್ತಾರ್ ನಗರಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಒಸಾಮಾ ಅಬ್ದುಲ್ಜಲೀಲ್ ಹೇಳಿದ್ದಾರೆ. ಡರ್ನಾದಲ್ಲಿ 5 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಧಾನಿ ಸೋಮವಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು. ದೇಶಾದ್ಯಂತ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಯಿತು.
ಮತ್ತಷ್ಟು ಓದಿ: Viral Video: ಭೀಕರ ಚಂಡಮಾರುತಕ್ಕೆ ಸಿಲುಕಿ ಗಾಳಿಯಲ್ಲಿ ಹಾರಿ ಹೋದ ಜನರು, ಭಯಾನಕ ವಿಡಿಯೋ
ಡೇನಿಯಲ್ ಚಂಡಮಾರುತವು ಭಾನುವಾರ ಮತ್ತು ಸೋಮವಾರದಂದು ಬೆಂಗಾಜಿ, ಸುಸಾ, ಬೈಡಾ, ಅಲ್-ಮಾರ್ಜ್ ಮತ್ತು ಡರ್ನಾ ನಗರಗಳ ಮೇಲೆ ಪರಿಣಾಮ ಬೀರಿತು. ಡರ್ನಾ ಹೊರತುಪಡಿಸಿ, ಪೂರ್ವ ನಗರವಾದ ಬೈಡಾದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈಶಾನ್ಯ ಲಿಬಿಯಾದ ಸುಸಾ ನಗರದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಶಾಹತ್ ಮತ್ತು ಒಮರ್ ಅಲ್-ಮೊಖ್ತಾರ್ ನಗರಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ