Viral Video: ಭೀಕರ ಚಂಡಮಾರುತಕ್ಕೆ ಸಿಲುಕಿ ಗಾಳಿಯಲ್ಲಿ ಹಾರಿ ಹೋದ ಜನರು, ಭಯಾನಕ ವಿಡಿಯೋ
ಭಾರತದ ಹಲವು ರಾಜ್ಯಗಳಿಗೆ ಅಪ್ಪಳಿಸಿದ ಬಿಪೋರ್ಜಾಯ್ ಚಂಡಮಾರುತ(Cyclone)ವು ಹೆಚ್ಚಿನ ಸಂಖ್ಯೆಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ.
ಭಾರತದ ಹಲವು ರಾಜ್ಯಗಳಿಗೆ ಅಪ್ಪಳಿಸಿದ ಬಿಪೋರ್ಜಾಯ್ ಚಂಡಮಾರುತ(Cyclone)ವು ಹೆಚ್ಚಿನ ಸಂಖ್ಯೆಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಈ ಚಂಡಮಾರುತದಿಂದಾಗಿ ದೇಶದ ಹಲವೆಡೆ ಭಯ ಹುಟ್ಟಿಸುವ ದೃಶ್ಯಗಳು ಕಂಡು ಬಂದವು. ಒಂದೆಡೆ ಬಿಪೋರ್ಜಾಯ್ (Biparjoy)ಚಂಡಮಾರುತವು ಅನೇಕರ ಜೀವನವನ್ನು ಕಷ್ಟಕರವಾಗಿಸಿದೆ, ಇನ್ನೊಂದೆಡೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ವಾಸ್ತವವಾಗಿ, ಈ ವೀಡಿಯೊದಲ್ಲಿ, ಚಂಡಮಾರುತದ ತೀವ್ರ ಸ್ವರೂಪವನ್ನು ನೋಡಬಹುದು. ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಜನರು ಕಂಬಗಳನ್ನು ಹಿಡಿದು ನಿಂತಿದ್ದಾರೆ. ಬೀಸುತ್ತಿರುವ ಬಿರುಗಾಳಿಗೆ ಆಕಾಶದಲ್ಲಿ ಜನರು ಹಾರಾಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋ ರೆಸ್ಟೋರೆಂಟ್‌ನಂತೆ ಕಾಣುತ್ತದೆ, ಅಲ್ಲಿ ಬಿರುಗಾಳಿಯು ಏಕಾಏಕಿ ಅಪ್ಪಳಿಸಿದಾಗ ಗ್ರಾಹಕರು ತೊಂದರೆಗೀಡಾದರು, ರೆಸ್ಟೊರೆಂಟ್‌ನಲ್ಲಿ ಬಿರುಗಾಳಿ ಬೀಸುತ್ತಿದ್ದು, ಕುರ್ಚಿ, ಮೇಜುಗಳು ಕೂಡ ಗಾಳಿಯಲ್ಲಿ ಹಾರುವುದನ್ನು ಕಾಣಬಹುದು.
ಮತ್ತಷ್ಟು ಓದಿ: ಬಿರಿಯಾನಿ ಟೀ ಯಿಂದ ಹಿಡಿದು ರಸಗುಲ್ಲ ಟೀ ವರೆಗೂ ಬಗೆ ಬಗೆಯ ಟೀಗಳು ಇಲ್ಲಿ ಲಭ್ಯ
ಚಂಡಮಾರುತದ ಅನಾಹುತ ತಪ್ಪಿಸಲು ಕೆಲವರು ಕಂಬ ಹಿಡಿದು ನಿಂತಿದ್ದಾರೆ. ಜನ ಆಸರೆಯಾಗಿದ್ದ ಕಂಬವೇ ಬೀಳುವಷ್ಟು ವೇಗದಲ್ಲಿ ಗಾಳಿ ಬೀಸುತ್ತಿದ್ದರೂ ಜೋರಾದ ಗಾಳಿಗೆ ಕಂಬಗಳು ಉರುಳಿ ಬಿದ್ದಿದೆ. ಇಡೀ ರೆಸ್ಟೋರೆಂಟ್ನ ಸೆಟ್ಟಿಂಗ್ ಹದಗೆಟ್ಟಿದೆ. ಜನರು ಪ್ರತಿ ಮೂಲೆಯಲ್ಲಿ ನಿಂತು ಈ ಮಾರಣಾಂತಿಕ ಚಂಡಮಾರುತ ನಿಲ್ಲುವುದನ್ನೇ ಕಾಯುತ್ತಿದ್ದಾರೆ.
Si esto hubiera sido en mexico la historia fiera diferente,el mexicano promedio pesa unos 100 kilos??? pic.twitter.com/EimQiEbHl9
— El Chaman (@el_karadepapa) June 12, 2023
3 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ ಈ ವೀಡಿಯೊವನ್ನು Twitter ಬಳಕೆದಾರರ @el_karadepapa ಅವರು ಪೋಸ್ಟ್ ಮಾಡಿದ್ದಾರೆ. ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಆದಾಗ್ಯೂ, ಈ ವೀಡಿಯೊ ಸೈಕ್ಲೋನ್ ಬಿಪೋರ್ಜಾಯ್ಗೆ ಯಾವುದೇ ಸಂಬಂಧವಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ