ರಷ್ಯಾಗೆ 2 ದಿನ ತೆಗೆದುಕೊಳ್ಳಬಹುದೆಂದು ಗೊತ್ತಿದ್ದರೂ ಕಿಮ್ ಜಾಂಗ್ ಉನ್ ಅದೇ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಂಗಳವಾರ ರಷ್ಯಾ ತಲುಪಿದ್ದಾರೆ. ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರನ್ನು ಭೇಟಿಯಾದರು.ಉತ್ತರ ಕೊರಿಯಾ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ಸಾಮಗ್ರಿ ಉಸ್ತುವಾರಿ ವಹಿಸಿರುವ ಉನ್ನತ ಮಿಲಿಟರಿ ಅಧಿಕಾರಿಗಳು ಸಹ ಕಿಮ್​ರೊಂದಿಗೆ ರಷ್ಯಾಗೆ ಆಗಮಿಸಿದ್ದರು. ಈ ಭೇಟಿಯು ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ದೃಷ್ಟಿಯಿಂದ ರಷ್ಯಾದೊಂದಿಗೆ ಸಂಭವನೀಯ ಶಸ್ತ್ರಾಸ್ತ್ರ ಒಪ್ಪಂದದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ.

ರಷ್ಯಾಗೆ 2 ದಿನ ತೆಗೆದುಕೊಳ್ಳಬಹುದೆಂದು ಗೊತ್ತಿದ್ದರೂ ಕಿಮ್ ಜಾಂಗ್ ಉನ್ ಅದೇ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?
ಕಿಮ್ ಜಾಂಗ್ ಉನ್
Follow us
ನಯನಾ ರಾಜೀವ್
|

Updated on: Sep 12, 2023 | 11:59 AM

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(Kim Jong Un) ಮಂಗಳವಾರ ರಷ್ಯಾ ತಲುಪಿದ್ದಾರೆ. ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ರನ್ನು ಭೇಟಿಯಾದರು.ಉತ್ತರ ಕೊರಿಯಾ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧ ಸಾಮಗ್ರಿ ಉಸ್ತುವಾರಿ ವಹಿಸಿರುವ ಉನ್ನತ ಮಿಲಿಟರಿ ಅಧಿಕಾರಿಗಳು ಸಹ ಕಿಮ್​ರೊಂದಿಗೆ ರಷ್ಯಾಗೆ ಆಗಮಿಸಿದ್ದರು. ಈ ಭೇಟಿಯು ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ದೃಷ್ಟಿಯಿಂದ ರಷ್ಯಾದೊಂದಿಗೆ ಸಂಭವನೀಯ ಶಸ್ತ್ರಾಸ್ತ್ರ ಒಪ್ಪಂದದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಾನುವಾರ ರಾಜಧಾನಿ ಪ್ಯೊಂಗ್ಯಾಂಗ್​ನಿಂದ ತನ್ನ ಖಾಸಗಿ ರೈಲು ಹತ್ತಿದರು, ಆಡಳಿತ ಪಕ್ಷ, ಮಿಲಿಟರಿ ಸದಸ್ಯರು ಜತೆಗಿದ್ದರು. ಕಿಮ್ ಅವರಿದ್ದ ರೈಲು ಮಂಗಳವಾರ ಮುಂಜಾನೆ ರಷ್ಯಾವನ್ನು ಪ್ರವೇಶಿಸಿದೆ. ರಷ್ಯಾಗೆ ತಲುಪಿದ ಕಿಮ್ ನಿಯೋಗದಲ್ಲಿ ಉತ್ತರ ಕೊರಿಯಾ ವಿದೇಶಾಂಗ ಸಚಿವ ಚೋ ಸುನ್ ಹುಯಿ ಮತ್ತು ಕೊರಿಯಾ ಪೀಪಲ್ಸ್ ಆರ್ಮಿ ಮಾರ್ಷಲ್​ಗಳಾದ ರಿ ಪ್ಯಾಂಗ್ ಚೋಲ್, ಪಾಕ್ ಜೊಂಗ್ ಚೋನ್ ಸೇರಿದಂತೆ ಉನ್ನತ ಮಿಲಿಟರಿ ಅಧಿಕಾರಿಗಳು ಇದ್ದರು.

ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಕೊರಿಯಾದ ಇತರ ನಾಯಕರೊಂದಿಗೆ ಕಿಮ್, ನಿಧಾನವಾಗಿ ಚಲಿಸುವ ಹಸಿರು ಮತ್ತು ಹಳದಿ ರೈಲಿನಲ್ಲಿ ಎರಡು ದಿನಗಳ ಕಾಲ 1,180 ಕಿಮೀ (733 ಮೈಲುಗಳು) ಪ್ರಯಾಣಿಸಿದರು. ಕಿಮ್ ಜಾಂಗ್ ಉನ್ ಅವರ ಈ ವಿಶೇಷ ರೈಲು ಎಷ್ಟು ಭಾರವಾಗಿರುತ್ತದೆ ಎಂದರೆ ಅದು ಗಂಟೆಗೆ 59 ಕಿಮೀಗಿಂತ ಹೆಚ್ಚು ಓಡಲು ಸಾಧ್ಯವಿಲ್ಲ. ಇದನ್ನು ಲಂಡನ್‌ನ ಹೈ-ಸ್ಪೀಡ್ ರೈಲು ಮತ್ತು ಜಪಾನ್‌ನ ಶಿಂಕನ್‌ಸೆನ್ ಬುಲೆಟ್ ರೈಲುಗಳೊಂದಿಗೆ ಹೋಲಿಸಲಾಗುತ್ತದೆ.

ಮತ್ತಷ್ಟು ಓದಿ: ಹಿರಿಯ ಜನರಲ್ ವಜಾ; ಯುದ್ಧದ ಸಿದ್ಧತೆಗಳಿಗೆ ಕರೆ ನೀಡಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್

ಕಿಮ್ ಜಾಂಗ್ ಉನ್ ಅವರ ತಂದೆ ಕಿಮ್ ಜಾಂಗ್ ಇಲ್ ಮತ್ತು ಅವರ ಅಜ್ಜ ಕಿಮ್ ಇಲ್ ಸುಂಗ್ ಇಬ್ಬರೂ ವಿಮಾನ ಪ್ರಯಾಣದ ಬಗ್ಗೆ ಹೆದರುತ್ತಿದ್ದರು ಎಂದು ಹೇಳಲಾಗುತ್ತದೆ. ವಿಮಾನ ಪ್ರಯಾಣದ ವೇಳೆ ಅವರ ಜೆಟ್‌ನಲ್ಲಿ ಬೆಂಕಿ ಕಂಡಾಗ ಅವರ ಭಯ ಹೆಚ್ಚಾಯಿತು. ಈ ಘಟನೆಯ ನಂತರ, ಕಿಮ್ ಇಲ್ ಸುಂಗ್ 1986 ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಹೋದರು. ಉತ್ತರ ಕೊರಿಯಾದ ನಾಯಕರೊಬ್ಬರು ಮೂರು ದಶಕಗಳಿಗೂ ಹೆಚ್ಚು ಕಾಲ ವಿಮಾನದಲ್ಲಿ ಸಾರ್ವಜನಿಕವಾಗಿ ವಿದೇಶಕ್ಕೆ ಪ್ರಯಾಣಿಸಿದ್ದು ಕೊನೆಯ ಬಾರಿ.

ಕಿಮ್ ವಿಮಾನ ಪ್ರಯಾಣದ ಬಗ್ಗೆ ಭಯಪಡುತ್ತಾರೆ ಎಂದು ನಂಬಲಾಗಿದೆ, ಆದ್ದರಿಂದ ಅವರು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಈ ರೈಲನ್ನು ಸ್ಟಾಲಿನ್ ಅವರು ಕಿಮ್ ಅವರ ಅಜ್ಜ ಕಿಮ್ ಇಲ್ ಸುಂಗ್ ಅವರಿಗೆ 1949 ರಲ್ಲಿ ಉಡುಗೊರೆಯಾಗಿ ನೀಡಿದರು. ಇದು ಅನೇಕ ಕೋಚ್‌ಗಳನ್ನು ಹೊಂದಿರುವ ಅಂತರ-ಸಂಪರ್ಕ ರೈಲು. ಕಿಮ್ ಉತ್ತರ ಕೊರಿಯಾ ಅಥವಾ ಚೀನಾಕ್ಕೆ ಪ್ರಯಾಣಿಸಿದಾಗ, ಅವರ ಇಡೀ ಪರಿವಾರವು ಈ ರೈಲಿನಲ್ಲಿ ಅವರೊಂದಿಗೆ ಹೋಗುತ್ತಾರೆ.

ಕಿಮ್ ಜಾಂಗ್ ಉನ್ ಸ್ವಿಟ್ಜರ್ಲೆಂಡ್‌ನಲ್ಲಿ ಶಾಲೆಯಲ್ಲಿ ಓದುತ್ತಿದ್ದಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆದಾಗ್ಯೂ, 2011 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಅವರು ಸಾಂದರ್ಭಿಕ ವಿಮಾನ ಪ್ರಯಾಣವನ್ನು ಆರಿಸಿಕೊಂಡರು. 2018 ರಲ್ಲಿ, ಅವರು ಸಿಂಗಾಪುರದಲ್ಲಿ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ವಿಮಾನದಲ್ಲಿ ಪ್ರಯಾಣಿಸಿದರು. ತಮ್ಮ ಕುಟುಂಬ ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಅವರು ರೈಲಿನಲ್ಲಿ ಪ್ರಯಾಣಿಸುತ್ತಾರೆ ಎಂಬುದು ಜನರ ನಂಬಿಕೆ.

ಈ ರೈಲಿನಲ್ಲಿ 90 ಕೋಚ್‌ಗಳಿವೆ. ಅಲ್ಲಿಯೇ, ಪ್ರಯಾಣಿಕರನ್ನು ಗುರುತಿಸದಂತೆ ಕಪ್ಪು ಕಿಟಕಿಗಳನ್ನು ಅಳವಡಿಸಲಾಗಿದೆ. ರೈಲಿನ ಎಲ್ಲಾ ಬೋಗಿಗಳು ಬುಲೆಟ್ ಪ್ರೂಫ್ ಆಗಿದ್ದು, ಇದರಿಂದಾಗಿ ಈ ರೈಲು ತುಂಬಾ ಭಾರವಾಗಿರುತ್ತದೆ. ಇದು ದುಬಾರಿ ಫ್ರೆಂಚ್ ವೈನ್‌ಗಳನ್ನು ಒದಗಿಸುವ ರೆಸ್ಟೋರೆಂಟ್ ಅನ್ನು ಸಹ ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM