Video Viral: ಹಾಂಗ್ ಕಾಂಗ್‌ನಲ್ಲಿ ದಕ್ಷಿಣ ಕೊರಿಯಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವ್ಯಕ್ತಿ ಬಂಧನ

ಹಾಂಗ್ ಕಾಂಗ್‌ನಲ್ಲಿ ದಕ್ಷಿಣ ಕೊರಿಯಾದ ಮಹಿಳೆಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಹಾಂಗ್ ಕಾಂಗ್‌ ಪೊಲೀಸರು ತಿಳಿಸಿದ್ದಾರೆ.

Video Viral: ಹಾಂಗ್ ಕಾಂಗ್‌ನಲ್ಲಿ ದಕ್ಷಿಣ ಕೊರಿಯಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯ ವ್ಯಕ್ತಿ ಬಂಧನ
ವೈರಲ್​​ ವಿಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on:Sep 13, 2023 | 2:52 PM

ಹಾಂಗ್ ಕಾಂಗ್‌ನಲ್ಲಿ ದಕ್ಷಿಣ ಕೊರಿಯಾದ ಮಹಿಳೆಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಹಾಂಗ್ ಕಾಂಗ್‌ ಪೊಲೀಸರು ತಿಳಿಸಿದ್ದಾರೆ. ಈ ಮಹಿಳೆ ಹಾಂಗ್ ಕಾಂಗ್‌ ಸಿಟಿಯ ಬಗ್ಗೆ ಲೈವ್​​ ಸ್ಟ್ರೀಮ್ ವಿವರಿಸುತ್ತಿರುವಾಗ, ಭಾರತೀಯ ಮೂಲದ ವ್ಯಕ್ತಿಯೊಬ್ಬ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಇನ್ನು ಲೈವ್ ಸ್ಟ್ರೀಮ್​​ನಲ್ಲಿ ಸಾವಿರಾರೂ ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಈ ಬಗ್ಗೆ ತಕ್ಷಣ ಪೊಲೀಸರು ಕ್ರಮ ತೆಗೆದುಕೊಳ್ಳವಂತೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾಂಗ್ ಕಾಂಗ್‌ ಪೊಲೀಸರು ಆತನನ್ನು ಬಂಧಿಸುವ ಬಗ್ಗೆ ಭರವಸೆ ನೀಡಿದರು. ಇದೀಗ ಕೆಲವು ತಿಂಗಳ ಬಳಿಕ ಆತನನ್ನು ಬಂಧಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಮಹಿಳೆ ಹಾಂಗ್ ಕಾಂಗ್‌ ಸಿಟಿಯ ಬಗ್ಗೆ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ಹಾಂಗ್ ಕಾಂಗ್‌ ಸೆಂಟ್ರಲ್ ಪ್ರದೇಶದ ಟ್ರಾಮ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಅಲ್ಲಿನ ವಿಶೇಷತೆಗಳ ಬಗ್ಗೆ ಲೈವ್​​ ಬಂದ ಮಾಹಿತಿ ನೀಡಿದ್ದಾಳೆ. ಈ ಸಮಯದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಮೃದುವಾಗಿ ಮಾತನಾಡಿ, ಸ್ವಲ್ಪ ಸಮಯದ ನಂತರ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ.

ವಿಡಿಯೋ ಇಲ್ಲಿದೆ ನೋಡಿ

ಇನ್ನು ವಿಡಿಯೋದಲ್ಲಿ ತಿಳಿಸಿರುವಂತೆ ಒಬ್ಬ ವ್ಯಕ್ತಿ ಮೊದಲು ವಿಳಾಸ ಕೇಳುತ್ತಾನೆ. ನಂತರ ಆಕೆಯ ಹೆಗಲ ಮೇಲೆ ಕೈ ಹಾಕಿ ನನ್ನೊಂದಿಗೆ ಬಾ, ನನ್ನ ಜತೆಗೆ ಯಾರು ಇಲ್ಲ, ಎಂದು ಕೆಟ್ಟ ಪದಗಳನ್ನು ಬಳಸುತ್ತಾನೆ. ಆಕೆ ಇದರಿಂದ ಇರಿಸುಮುರಿಸುಗೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಅದರೂ ಆತ ಆಕೆಯನ್ನು ಹಿಂಬಾಲಿಸಿಕೊಂಡು ಹಾಂಗ್ ಕಾಂಗ್‌ ಮೆಟ್ರೋ ನಿಲ್ದಾಣದ ಮೆಟ್ಟಿಲಿನಲ್ಲಿ ಆಕೆಯನ್ನು ಎಳೆದು, ಅಪ್ಪಿಕೊಂಡು ಕಿಸ್​​​ ಮಾಡಿದ್ದಾನೆ. ಇದರ ಜತೆಗೆ ಆಕೆಯ ಎದೆ ಭಾಗವನ್ನು ಕೂಡ ಮುಟ್ಟಿ ಲೈಂಗಿಕ ದಾಳಿ ಮಾಡಿದ್ದಾನೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:500ರೂಗಳ ಕಂತೆ ಕಂತೆ ನೋಟಿನ ಜೊತೆ ಪೊಲೀಸ್​​​​​​​ ಅಧಿಕಾರಿಯ ಹೆಂಡತಿ ಮಕ್ಕಳ ಸೆಲ್ಫಿ

ಆಕೆ ಆತನ ಕೈಯಿಂದ ತಪ್ಪಿಕೊಂಡು ಹೋಗಲು ತುಂಬಾ ಪ್ರಯತ್ನಪಟ್ಟಿದ್ದಾಳೆ. ಬಿಟ್ಟುಬಿಡು ಎಂದು ಅಂಗಲಾಚಿದರು, ಆಕೆಯನ್ನು ಬಲವಂತವಾಗಿ ಸೆಳೆಯಲು ಮುಂದಾಗಿದ್ದಾನೆ. ಈ ವಿಡಿಯೋದಲ್ಲಿ ಆಕೆ ಅಳುವುದನ್ನು ಕೂಡ ಕಾಣಬಹುದು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಅಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ನಂತರ ಆಕೆ ಒಂದು ವಿಡಿಯೋ ಮಾಡಿ ಆ ವ್ಯಕ್ತಿ ಮಾಡಿದ ಎಲ್ಲ ಕೃತ್ಯಗಳನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನಂತರ ಪೊಲೀಸರು ಈ ವಿಡಿಯೋ ಮತ್ತು ಆಕೆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ, ಆತನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಇನ್ನು ಆತ ಭಾರತ ಮೂಲದ ಅಮಿತ್ ಜರಿಯಾಲ್ ಎಂದು ಗುರುತಿಸಲಾಗಿದೆ. ಹಾಂಕಾಂಗ್‌ನಲ್ಲಿರುವ ರಾಜಸ್ಥಾನ್ ರೈಫಲ್ಸ್ ರೆಸ್ಟೋರೆಂಟ್​​ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಇದೀಗ ಪೊಲೀಸರು ರಾಜಸ್ಥಾನ್ ರೈಫಲ್ಸ್ ರೆಸ್ಟೋರೆಂಟ್ ಮಾಲೀಕರ ಮೇಲೆಯು ದೂರು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Wed, 13 September 23