ಮೆಕ್​ಡೊನಾಲ್ಡ್ ಬರ್ಗರ್​ ತಿನ್ನಲೆಂದು ಹೆಲಿಕಾಪ್ಟರ್ ಕಾಯ್ದಿರಿಸಿದ.. ಯಾರು ಈತ?

|

Updated on: Dec 04, 2020 | 5:30 PM

ಮೆಕ್​ಡೊನಾಲ್ಡ್ ಔಟ್​ಲೆಟ್​ನಲ್ಲಿ ಬರ್ಗರ್​ ತಿನ್ನಲೆಂದು ಹೆಲಿಕಾಪ್ಟರ್ ಕಾಯ್ದಿರಿಸಿ ವಿಕ್ಟರ್ ಮಾರ್ಟಿನೋವ್ 450 ಕಿ.ಮೀ ದೂರ ಹೋಗಿದ್ದಾನೆ. ಬರ್ಗರ್, ಮಿಲ್ಕ್​ಶೇಕ್​ಗಳಿಗೆ 49 ಪೌಂಡ್​ಗಳಷ್ಟು ಖರ್ಚಾಗುತ್ತದೆ. ಖಾಸಗಿ ಹೆಲಿಕಾಪ್ಟರ್​ಗೆ ದ್ವಿಮುಖ ಸವಾರಿಗೆ 2,000 ಪೌಡ್​ಗಳು ವೆಚ್ಚವಾಗುತ್ತವೆ.

ಮೆಕ್​ಡೊನಾಲ್ಡ್ ಬರ್ಗರ್​ ತಿನ್ನಲೆಂದು ಹೆಲಿಕಾಪ್ಟರ್ ಕಾಯ್ದಿರಿಸಿದ.. ಯಾರು ಈತ?
ಸಾಂದರ್ಭಿಕ ಚಿತ್ರ
Follow us on

ಈಗಿನ ಜಮಾನದಲ್ಲಿ ದುಡ್ಡಿದ್ದವನೇ ದೊಡ್ಡಪ್ಪ. ದುಡ್ಡಿದ್ದರೆ ಏನು ಬೇಕಾದರೂ ಖರೀದಿಸಿಬಿಡಬಹುದು ಅನ್ನೋದು ಬಹುತೇಕ ಜನರ ಅಭಿಪ್ರಾಯ. ಇದೇ ಧಾಟಿಯಲ್ಲಿ ಸಾಗಿದ ಇಲ್ಲೊಬ್ಬ ಕೋಟ್ಯಾಧಿಪತಿ ಬರ್ಗರ್ ತಿನ್ನಲೆಂದು  ಹೆಲಿಕಾಪ್ಟರ್​ನಲ್ಲಿ ಹೋಗಿದ್ದಾನೆ. ಯಾರೀತ? ಎಲ್ಲಿಯವ? ಎಂದೆಲ್ಲಾ ಪ್ರಶ್ನೆಗಳು ಎದುರಾಗ್ತಿವೆ ಅಲ್ವಾ? ಈತನ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ..

ಹೌದು.. ಈತನ ಹೆಸರು ವಿಕ್ಟರ್ ಮಾರ್ಟಿನೋವ್. ಮೆಕ್​ಡೊನಾಲ್ಡ್ಸ್ ಬರ್ಗರ್ ತಿನ್ನಲೇಬೇಕೆಂಬ ಆಸೆಯಿಂದ ಹೆಲಿಕಾಪ್ಟರ್​ ಕಾಯ್ದಿರಿಸಿ, ತನ್ನ ಉದ್ದೇಶ ಈಡೇರಿಸಿಕೊಂಡಿದ್ದಾರೆ. 33 ವರ್ಷದ ಮಾರ್ಟಿನೋವ್ ಎಂಬೀತ ಬರ್ಗರ್​ ತಿನ್ನಲೆಂದು ಹೆಲಿಕಾಪ್ಟರ್ ನಲ್ಲಿ  450 ಕಿ.ಮೀ. ದೂರಕ್ಕೆ ಕ್ರಮಿಸಿದ್ದಾನೆ.

ಯಾರ ಜೊತೆಯಲ್ಲಿ ಹೆಲಿಕಾಪ್ಟರ್ ಪಯಣ?

ತನ್ನ ಗೆಳತಿ ಅಲುಷ್ಟಾಳ ಜೊತೆ ಈತ ವಿಹಾರಕ್ಕೆ ಹೋಗಿದ್ದ. ಆ ವೇಳೆ, ಮಾರ್ಟಿನೋವ್ ಮತ್ತು ಗೆಳತಿ  ಅಲುಷ್ಟಾ ಇಬ್ಬರೂ ಹಸಿವಿನಿಂದ ಬಳಲುತ್ತಿದ್ದರು ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ಈತ ಅಷ್ಟು ದೂರ ಕ್ರಮಿಸಿದ್ದೇಕೆ?

ಮಾರ್ಟಿನೋವ್ ಹಸಿವಿನಿಂದ ಕಂಗೆಟ್ಟಿದ್ದ. ಆದ್ರೆ ಸ್ಥಳೀಯ ಆಹಾರ ಮಳಿಗೆಗಳಲ್ಲಿ ಸಿಗುವ ಆಹಾರ ಆತನಿಗೆ ಖುಷಿ ಕೊಟ್ಟಿಲ್ಲ. ಆದ್ದರಿಂದ 450 ಕಿ.ಮೀ. ದೂರದಲ್ಲಿದ್ದ ಮೆಕ್​ಡೊನಾಲ್ಡ್ ಅಂಗಡಿ ತಲುಪಲು ಹೆಲಿಕಾಪ್ಟರ್​  ಕಾಯ್ದಿರಿಸಿದ.

ಡೈಲಿ ಸ್ಟಾರ್ ವರದಿಯ ಪ್ರಕಾರ ಬರ್ಗರ್, ಮಿಲ್ಕ್​ಶೇಕ್​ಗಳಿಗೆ 49 ಪೌಂಡ್​ಗಳಷ್ಟು ಖರ್ಚಾಗುತ್ತದೆ. ಖಾಸಗಿ ಹೆಲಿಕಾಪ್ಟರ್​ಗೆ ದ್ವಿಮುಖ ಸವಾರಿಗೆ 2,000 ಪೌಡ್​ ವೆಚ್ಚವಾಗುತ್ತವೆ. 2014 ರಲ್ಲಿ ಕ್ರೈಮಿಯಾವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡ ನಂತರ ತ್ವರಿತ ಆಹಾರ ಸೇವೆಯನ್ನು ನಿಲ್ಲಿಸಿತ್ತು. ಹಾಗಾಗಿ ಕ್ರೈಮಿಯಾದಲ್ಲಿ ಯಾವುದೇ ಮೆಕ್​ಡೊನಾಲ್ಡ್ ಮಳಿಗೆಗಳಿಲ್ಲ.

ಬರ್ಗರ್

ಮಾರ್ಟಿನೋವ್ ಹೇಳಿದ್ದೇನು?

ನನ್ನ ಗೆಳತಿ ಮತ್ತು ನಾನು ಹಸಿವಿನಿಂದ ಬೇಸತ್ತಿದ್ದೇವೆ. ನಮಗೆ ಮಾಮೂಲಿ ಮಾಸ್ಕೊ ಆಹಾರ ಬೇಕು. ಆದ್ದರಿಂದ ನಾವು ಹೆಲಿಕಾಪ್ಟರ್​ನೊಂದಿಗೆ ಬರ್ಗರ್​ ತಿನ್ನಲು 450 ಕಿ.ಮೀ. ತೆರೆಳಿದೆವು ಎಂದು ಮಾರ್ಟಿನೋವ್ ಹೇಳಿದ್ದಾನೆ.

Published On - 5:25 pm, Fri, 4 December 20