ಬ್ರೆಜಿಲ್: ಬ್ರೆಜಿಲ್‌ನಲ್ಲಿ (Brazil) ಮಹಿಳೆಯೊಬ್ಬರು ಇತ್ತೀಚೆಗೆ 7.3 ಕೆ.ಜಿ ತೂಕದ, 2 ಅಡಿ ಎತ್ತರದ ಮಗುವಿಗೆ ಜನ್ಮ ನೀಡಿದ್ದಾರೆ. ಆಂಗರ್ಸನ್ ಸ್ಯಾಂಟೋಸ್ ಎಂಬ ಮಗುವಿಗೆ ಅಮೆಜಾನಾಸ್ ರಾಜ್ಯದ ಪ್ಯಾರಿಂಟಿನ್ಸ್‌ನಲ್ಲಿರುವ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಜನ್ಮ ನೀಡಲಾಗಿದೆ. ಆಂಗರ್ಸನ್ ಎಂಬ ಈ ಮಗು 2016ರಲ್ಲಿ ಜನಿಸಿದ 6.8 ಕೆ.ಜಿ ಇದ್ದ ಮಗುವಿನ ದಾಖಲೆಯನ್ನು ಮುರಿದಿದೆ.
ಆದರೆ, ಅದಕ್ಕೂ ಮೊದಲು 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಹೆಣ್ಣು ಮಗು ಜನಿಸಿತ್ತು. ಆ ದಾಖಲೆಯನ್ನು ಇನ್ನೂ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. ನವಜಾತ ಗಂಡು ಮಗು ಸಾಮಾನ್ಯವಾಗಿ 3.3 ಕೆ.ಜಿ ಮತ್ತು ಹೆಣ್ಣು ಮಗು 3.2 ಕೆ.ಜಿ. ಇರುತ್ತದೆ.
ದೈತ್ಯ ಗಾತ್ರ ಶಿಶುಗಳನ್ನು ವಿವರಿಸಲು ಬಳಸಲಾಗುವ ಪದವು ಮ್ಯಾಕ್ರೋಸೋಮಿಯಾ. ಗರ್ಭಾವಸ್ಥೆಯ ವಯಸ್ಸನ್ನು ಲೆಕ್ಕಿಸದೆಯೇ 4 ಕೆಜಿಗಿಂತ ಹೆಚ್ಚು ತೂಕವಿರುವ ಎಲ್ಲ ನವಜಾತ ಶಿಶುಗಳಿಗೆ ಮ್ಯಾಕ್ರೋಸೋಮಿಯಾ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Viral News: ಬಲಿ ಕೊಡಲು ತಂದ ಕೋಳಿಯ ಬದಲು ತಾನೇ ಪ್ರಾಣ ಕಳೆದುಕೊಂಡ ವೃದ್ಧ!
ಮ್ಯಾಕ್ರೋಸೋಮಿಯಾ ಹೊಂದಿರುವ ಶಿಶುಗಳು ಸುಮಾರು ಶೇ. 12ರಷ್ಟು ಜನನಗಳಿಗೆ ಕಾರಣವಾಗಿವೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಮಧುಮೇಹ ಹೊಂದಿರುವ ತಾಯಂದಿರಲ್ಲಿ ಇದು ಶೇ. 15 ಮತ್ತು ಶೇ. 45ರಷ್ಟು ಹೆಚ್ಚಾಗುತ್ತದೆ. ಕೆಲವು ಅಂಶಗಳು ದೈತ್ಯ ಮಗುವಿಗೆ ಜನ್ಮ ನೀಡುವ ತಾಯಿಯ ಅಪಾಯವನ್ನು ಹೆಚ್ಚಿಸುತ್ತವೆ. ತಾಯಿಯ ದೇಹದ ತೂಕವೂ ಇಲ್ಲಿ ಪರಿಗಣನೆಗೆ ಬರುತ್ತದೆ.
ಸ್ಥೂಲಕಾಯದ ತಾಯಂದಿರು ಮ್ಯಾಕ್ರೋಸೋಮಿಯಾದೊಂದಿಗೆ ನವಜಾತ ಶಿಶುವನ್ನು ಹೊಂದುವ ಸಾಧ್ಯತೆ 2 ಪಟ್ಟು ಹೆಚ್ಚು. ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಾಗುವುದರಿಂದಲೂ ಮ್ಯಾಕ್ರೋಸೋಮಿಯಾ ಅಪಾಯ ಹೆಚ್ಚಾಗುತ್ತದೆ.
ಗರ್ಭಾವಸ್ಥೆಯ ಮಧುಮೇಹ ಕೂಡ ಬಹಳ ಅಪಾಯಕಾರಿ ಅಂಶವಾಗಿದೆ. ಈ ಸ್ಥಿತಿಯು ಮಗುವಿನ ಬೆಳವಣಿಗೆಯನ್ನು ಹೆಚ್ಚಾಗಿಸುತ್ತದೆ. ವಯಸ್ಸಾದ ಮೇಲೆ ಗರ್ಭ ಧರಿಸುವುದು ಕೂಡ ಮ್ಯಾಕ್ರೋಸೋಮಿಯಾದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 35 ವರ್ಷಕ್ಕಿಂತ ಮೇಲ್ಪಟ್ಟ ತಾಯಿಯಿಂದ ಮಗುವಿಗೆ ಮ್ಯಾಕ್ರೋಸೋಮಿಯಾ ಬರುವ ಸಾಧ್ಯತೆ ಶೇ. 20ರಷ್ಟು ಹೆಚ್ಚು. ತಂದೆಯ ವಯಸ್ಸು ಕೂಡ ಇಲ್ಲಿ ಲೆಕ್ಕಕ್ಕೆ ಬರುತ್ತದೆ. 35 ವರ್ಷಕ್ಕಿಂತ ಹೆಚ್ಚಿನ ತಂದೆಯ ವಯಸ್ಸು ಮ್ಯಾಕ್ರೋಸೋಮಿಯಾ ಅಪಾಯವನ್ನು ಶೇ. 10ರಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ: Viral News: ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ; ಆದರೂ ಕೈ ಕೊಟ್ಟಳು ಗೆಳತಿ!
ಗಂಡು ಮಗು ಹುಟ್ಟಿದರೆ ಮ್ಯಾಕ್ರೋಸೋಮಿಯಾ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗಂಡು ಮಗು ಹೆಣ್ಣು ಮಗುವಿಗಿಂತಲೂ 3 ಪಟ್ಟು ಹೆಚ್ಚು ಮ್ಯಾಕ್ರೋಸೋಮಿಕ್ ಆಗಿ ಜನಿಸುತ್ತಾರೆ. ಮ್ಯಾಕ್ರೋಸೋಮಿಯಾ ಹೊಂದಿರುವ ಶಿಶುಗಳು ತಮ್ಮ ದೊಡ್ಡ ಗಾತ್ರದ ಕಾರಣ ಜನ್ಮ ಕಾಲುವೆಯ ಮೂಲಕ ಚಲಿಸುವ ತೊಂದರೆಗಳನ್ನು ಎದುರಿಸುವ ಸಾಧ್ಯತೆಯಿದೆ.