Sign In

By signing in or creating an account, you agree with Associated Broadcasting Company's Terms & Conditions and Privacy Policy.

US vs China: ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕ; ಗರಂ ಆದ ಚೀನಾ

America Shots Down Chinese Balloon: ಶಂಕಿತ ಚೀನೀ ಬೇಹುಗಾರಿಕಾ ಬಲೂನೊಂದನ್ನು ಅಮೆರಿಕ ಹೊಡೆದುರುಳಿಸಿದೆ. ಶನಿವಾರ ಇಲ್ಲಿಯ ಕಡಲತೀರದ ಮೇಲೆ ಹಾದು ಹೋಗುತ್ತಿತ್ತೆನ್ನಲಾದ ಈ ಬಲೂನನ್ನು ಅಮೆರಿಕದ ಯುದ್ಧವಿಮಾನ ನಾಶಗೊಳಿಸಿರುವುದು ವರದಿಯಾಗಿದೆ.

US vs China: ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕ; ಗರಂ ಆದ ಚೀನಾ
ಸ್ಪೈ ಬಲೂನು ಹೊಡೆದುರುಳಿಸಿದ ಅಮೆರಿಕImage Credit source: Reuters
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 05, 2023 | 7:43 AM

ಸೌತ್ ಕರೋಲಿನಾ: ಶಂಕಿತ ಚೀನೀ ಬೇಹುಗಾರಿಕಾ ಬಲೂನೊಂದನ್ನು (Chinese Spy Balloon) ಅಮೆರಿಕ ಹೊಡೆದುರುಳಿಸಿದೆ. ಶನಿವಾರ ಇಲ್ಲಿಯ ಕಡಲತೀರದ ಮೇಲೆ ಹಾದು ಹೋಗುತ್ತಿತ್ತೆನ್ನಲಾದ ಈ ಬಲೂನನ್ನು ಅಮೆರಿಕದ ಯುದ್ಧವಿಮಾನ ನಾಶಗೊಳಿಸಿರುವುದು ವರದಿಯಾಗಿದೆ. ಈ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದಿಂದ ಅಂತಾರಾಷ್ಟ್ರೀಯ ಪ್ರಮಾಣಿತ ನಡಾವಳಿ ನಿಯಮಗಳ (International Standard Practices) ಉಲ್ಲಂಘನೆಯಾಗಿದೆ ಎಂದಿದೆ.

ಚೀನಾದ ಬಲೂನುಗಳು ಅಮೆರಿಕದ ವಾಯುಭಾಗದಲ್ಲಿ ಹಾರಾಡುತ್ತಿದ್ದ ಬಗ್ಗೆ ಇತ್ತೀಚೆಗೆ ಕೆಲ ವರದಿಗಳು ಬಂದಿದ್ದವು. ಇವುಗಳು ಬೇಹುಗಾರಿಕೆ ಉದ್ದೇಶದಿಂದ ಹಾರಾಡುತ್ತಿದ್ದ ವಸ್ತುಗಳೆಂದು ಅಮೆರಿಕ ಶಂಕಿಸಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಬಲೂನುಗಳನ್ನು ಹೊಡೆದುರುಳಿಸುವಂತೆ ಆದೇಶಿಸಿದ್ದರು. ಆದರೆ, ಬಲೂನು ಶೂಟ್ ಮಾಡಿದರೆ ನಾಗರಿಕರಿಗೆ ಅಪಾಯವಾಗುವ ಸಾಧ್ಯತೆಯಿಂದ ಅಮೆರಿಕನ್ ಮಿಲಿಟರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ವರದಿಗಳ ಪ್ರಕಾರ, ನಿನ್ನೆ ಹೊಡೆದುರುಳಿಸಲಾದ ಬಲೂನು ಜನವರಿ 28ರಂದು ಅಮೆರಿಕದ ವಾಯುಪ್ರದೇಶವನ್ನು ಮೊದಲು ಪ್ರವೇಶಿಸಿತು. ಬಳಿಕ ಜನವರಿ 30ರಂದು ಕೆನಡಾ ಭಾಗಕ್ಕೆ ಹೋಗಿ ಮರುದಿನ ಮತ್ತೆ ಅಮೆರಿಕದ ಕಡೆ ಬಂದಿತ್ತು. ಆದರೆ ಇದು ಸಾಗರ ಪ್ರದೇಶಕ್ಕೆ ಬರದೇ ಇದ್ದರಿಂದ ಶೂಟ್ ಮಾಡಲು ಕಷ್ಟವಾಗಿತ್ತು. ಕೊನೆಗೆ ನಿನ್ನೆ ಶನಿವಾರ ಈ ಬಲೂನನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ.

ಇದನ್ನೂ ಓದಿ: Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು

ಚೀನಾದ ಈ ಬಲೂನು ತಮ್ಮ ದೇಶದ ಸಾರ್ವಭೌಮತೆಗೆ (Sovereignty) ಧಕ್ಕೆ ತರುವಂತಿತ್ತು ಎಂದು ಹೇಳಿರುವ ಅಮೆರಿಕ, ಬಲೂನು ಹೊಡೆಯುತ್ತಿರುವ ಬಗ್ಗೆ ಚೀನಾಗೆ ಮಾಹಿತಿಯನ್ನೂ ನೀಡಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಚೀನಾ ಗರಂ:

ಅಮೆರಿಕ ಹೊಡೆದುರುಳಿಸುವ ತನ್ನ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೆರಿಕ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೆರಿಕ ಅತಿರೇಕವಾಗಿ ವರ್ತಿಸಿದೆ ಎಂದು ಚೀನಾ ಹೇಳಿದೆ.

ಅಮೆರಿಕದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದೂ ಚೀನಾ ಬೆದಕರಿಕೆ ಹಾಕಿದೆ.

ಇದನ್ನೂ ಓದಿ: Pakistan: ಕೈಯಲ್ಲಿ ಕುರಾನ್, ಅಣುಬಾಂಬ್; ಬಡತನ ನಿರ್ಮೂಲನೆಗೆ ಸೂತ್ರ ಕೊಟ್ಟ ಪಾಕ್ ಇಸ್ಲಾಮಿಕ್ ಮುಖಂಡ

ಅಮೆರಿಕದ ಗುಪ್ತಚರ ವರದಿಗಳ ಪ್ರಕಾರ, ಚೀನಾದ ಸ್ಪೈ ಬಲೂನುಗಳು ಬೇರೆ ದೇಶದ ಮೇಲೆ ಕದ್ದು ಹೋಗುವುದು ಇದೇ ಮೊದಲಲ್ಲ. ಅಮೆರಿಕ ಮಾತ್ರವಲ್ಲ, ಏಷ್ಯಾ, ಯೂರೋಪ್ ಸೇರಿದಂತೆ ಐದು ಖಂಡಗಳ ವಿವಿಧ ದೇಶಗಳ ವಾಯು ಪ್ರದೇಶಗಳಲ್ಲಿ ಚೀನಾದ ಬಲೂನುಗಳು ಅಕ್ರಮವಾಗಿ ಪ್ರವೇಶಿಸಿ ಬೇಹುಗಾರಿಕೆ ನಡೆಸುತ್ತಿರುವ ಘಟನೆಗಳು ಹಲವು ವರ್ಷಗಳಿಂದ ಆಗುತ್ತಿವೆ ಎಂದು ಆರೋಪಿಸಲಾಗಿದೆ.

ಅಮೆರಿಕದ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರು ಮೊನ್ನೆ ಶುಕ್ರವಾರ ಚೀನಾಗೆ ಪೂರ್ವನಿಗಧಿತ ಭೇಟಿ ನೀಡಬೇಕಿತ್ತು. ಆದರೆ, ಈ ಬೇಹುಗಾರಿಕೆ ಬಲೂನು ಕಾರಣದಿಂದ ಅವರ ಭೇಟಿಯನ್ನು ಮುಂದೂಡಲಾಗಿದೆ.

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ