AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಡಿಯೋ ನೋಡಿ: ಯಪ್ಪಾ, ಈ ಮೀನು ಮಾಮೂಲಿ ಮೀನು ಅಲ್ಲ; ನೀರಿನಿಂದ ಹೊರಹಾಕಿದರೂ, ಬಹಳ ಕಾಲ ಜೀವಿಸುತ್ತದೆ!

ಆಫ್ರಿಕನ್ ಲಾಂಗ್ ಫಿಶ್ ನಾಲ್ಕು ವರ್ಷಗಳವರೆಗೆ ಒಣಗಿದ ಬುರದೆಯಲ್ಲಿ ನಿದ್ರಾಸ್ಥಿತಿಯಲ್ಲಿ ಇರಬಲ್ಲದು. ಇವು ಬದುಕಲು ನೀರು ಬೇಕಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣುವ ಮೀನುಗಳನ್ನು ಸಕರ್‌ಮೌತ್ ಕ್ಯಾಟ್ ಫಿಶ್ ಎಂದು ಕೂಡ ಕರೆಯಲಾಗುತ್ತದೆ. ಹೈಬರ್ನೇಶನ್ ಮಾದರಿಯ ಜೀವನಕ್ಕೆ ಒಗ್ಗುವ ಅಪರೂಪದ ಜಾತಿಗಳಲ್ಲಿ ಇದು ಕೂಡ ಒಂದು.

ವೀಡಿಯೋ ನೋಡಿ: ಯಪ್ಪಾ, ಈ ಮೀನು ಮಾಮೂಲಿ ಮೀನು ಅಲ್ಲ; ನೀರಿನಿಂದ ಹೊರಹಾಕಿದರೂ, ಬಹಳ ಕಾಲ ಜೀವಿಸುತ್ತದೆ!
ಈ ಮೀನು ಮಾಮೂಲಿ ಮೀನಲ್ಲ; ನೀರಿಲ್ಲದೆ ಬಹಳ ಕಾಲ ಜೀವಿಸುತ್ತದೆ!
ಸಾಧು ಶ್ರೀನಾಥ್​
|

Updated on: Oct 09, 2023 | 5:16 PM

Share

ಎಲ್ಲಿಯಾದರೂ ಮೀನುಗಳು ನೀರು ಇಲ್ಲದೆ ಬದುಕಬಲ್ಲವಾ!? ಅಸಾಧ್ಯ ಎಂಬುದಷ್ಟೇ ನಿಮ್ಮ ಅನ್ಸರ್ ಆಗಿರುತ್ತದೆ! ಮೀನುಗಳು ಅವುಗಳ ಅಸ್ತಿತ್ವಕ್ಕಾಗಿ ನೀರನ್ನು ಅವಲಂಬಿಸುವುದು ಜಗದ ನಿಯಮ, ನಿಸರ್ಗ ಸಹಜ ಸತ್ಯ ಮತ್ತು ಅದು ಸೈನ್ಸ್ ಸಹ. ಮೀನುಗಳು ಬದುಕಲು ನೀರು ಕಡ್ಡಾಯವಾಗಿ ಬೇಕು. ಯಾವ ಮೀನು ಕೂಡ ನೀರು ಇಲ್ಲದೆ ಬದುಕಲಾರವು. ಆದರೆ ನೀರಿಲ್ಲದೆ ಬದುಕಬಲ್ಲ ಮೀನು ಇರುವುದು ಅಸಾಧ್ಯ ಅನ್ನುವವರು ಈ ಮೀನಿನ ಬಗ್ಗೆ ಕೇಳಬೇಕು. ಹೌದು.. ಇಲ್ಲೊಂದು ಜಾತಿಯ ಮೀನು ನೀರು ಇಲ್ಲದೆ ತಿಂಗಳುಗಳು, ವರ್ಷಗಳ ಕಾಲ ಬದುಕಬಲ್ಲವು ಎಂದರೆ ನಿಮಗೆ ನಂಬಲಾಗುತ್ತಿಲ್ಲಾ ಅಲ್ಲವಾ? ಆದರೂ ಇದು ನಿಜ. ಅದಕ್ಕಾಗಿ ನೀವು ವಿಡಿಯೋ ಸಾಕ್ಷ್ಯ ನೋಡಲೇಬೇಕು.

ಆಫ್ರಿಕನ್ ಲಂಗ್ ಫಿಶ್ ಎಂಬ ಮೀನು ಆಹಾರ, ನೀರು ಇಲ್ಲದೆ ವರ್ಷಗಳ ಕಾಲ ನಿತ್ರಾಣಸ್ಥಿತಿಯಲ್ಲಿ ಬದುಕಬಲ್ಲವು. ಇದು 3 ರಿಂದ 5 ವರ್ಷಗಳವರೆಗೆ ಸಜೀವವಾಗಿ ಇರುತ್ತವೆ. ನೀರಿಲ್ಲದ ಪರಿಸರದಲ್ಲಿ ಬದುಕಬಲ್ಲ ಈ ಮೀನುಗಳು ಮತ್ತೆ ಎಚ್ಚರಗೊಳ್ಲುವುದು, ಜೀವಂತಿಕೆ ಪಡೆಯುವುದು ನೀರು ಕಂಡ ಮೇಲಷ್ಟೇ.

ಇದನ್ನು ಒದಿ: ಆಂಧ್ರದ ವಿಶಾಖಪಟ್ಟಣಂ ಸಮುದ್ರತೀರದಲ್ಲಿ ಪತ್ತೆಯಾಯ್ತು ಅಪರೂಪದ ಸಮುದ್ರ ಕುದುರೆ ಮೀನುಗಳು, ವಿಶೇಷತೆ ಏನೆಂದರೆ..

ಈ ಮೀನುಗಳಿಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಹಲ್ ಚಲ್ ಮಾಡುತ್ತಿದೆ. ವ್ಯೂಸ್ ಅಡಿಕ್ಟ್ ಎಂದರೆ ಇನ್ಸ್ಟಾಗ್ರಾಮ್ ಬಳಕೆದಾರರು ಲಂಗ್ ಫಿಶ್‌ ಗೆ ಸಂಬಂಧಿಸಿದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ಅದು ವೈರಲ್ ಆಗಿದೆ.

View this post on Instagram

A post shared by VIEWS (@viewsaddict)

ಆಫ್ರಿಕನ್ ಲಾಂಗ್ ಫಿಶ್ ನಾಲ್ಕು ವರ್ಷಗಳವರೆಗೆ ಒಣಗಿದ ಬುರದೆಯಲ್ಲಿ ನಿದ್ರಾಸ್ಥಿತಿಯಲ್ಲಿ ಇರಬಲ್ಲದು. ಇವು ಬದುಕಲು ನೀರು ಬೇಕಿಲ್ಲ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣುವ ಮೀನುಗಳನ್ನು ಸಕರ್‌ಮೌತ್ ಕ್ಯಾಟ್ ಫಿಶ್ ಎಂದು ಕೂಡ ಕರೆಯಲಾಗುತ್ತದೆ. ಹೈಬರ್ನೇಶನ್ ಮಾದರಿಯ ಜೀವನಕ್ಕೆ ಒಗ್ಗುವ ಅಪರೂಪದ ಜಾತಿಗಳಲ್ಲಿ ಇದು ಕೂಡ ಒಂದು. ನೀರು ಇಲ್ಲದೆ ನಿತ್ರಾಣಸ್ಥಿತಿಯಲ್ಲಿ ಇದ್ದರೆ ಈ ಮೀನುಗಳ ಮಳೆ ಬರುವವರೆಗೆ ತಿಂಗಳು ಕಾಲ ಒಣ ನೆಲ ಅಥವಾ ಗಟ್ಟಿಯಾದ ಬುರದೆಯಲ್ಲಿ ಬದುಕುತ್ತವೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ