Nobel Economics Prize 2023: ಕ್ಲಾಡಿಯಾ ಗೋಲ್ಡಿನ್​​ಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗುತ್ತದೆ. ಅರ್ಥಶಾಸ್ತ್ರದಲ್ಲಿ ತಮ್ಮದೇ ಆಗಿರುವ ಅನಮ್ಯ ಸಾಧನೆಗಾಗಿ ಮತ್ತು ಆರ್ಥಿಕ ಕ್ಷೇತ್ರದ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

Nobel Economics Prize 2023: ಕ್ಲಾಡಿಯಾ ಗೋಲ್ಡಿನ್​​ಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ಕ್ಲಾಡಿಯಾ ಗೋಲ್ಡಿನ್‌
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 09, 2023 | 3:50 PM

ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ನೀಡಲಾಗುತ್ತದೆ. ಅರ್ಥಶಾಸ್ತ್ರದಲ್ಲಿ ತಮ್ಮದೇ ಆಗಿರುವ ಅನಮ್ಯ ಸಾಧನೆಗಾಗಿ ಮತ್ತು ಆರ್ಥಿಕ ಕ್ಷೇತ್ರದ ತಿಳುವಳಿಕೆಯನ್ನು ಹೆಚ್ಚಿಸಿದ್ದಕ್ಕಾಗಿ ಕ್ಲಾಡಿಯಾ ಗೋಲ್ಡಿನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆರ್ಥಿಕ ವಿಜ್ಞಾನಕ್ಕೆ 1969 ರಿಂದ 2022 ರವರೆಗೆ ಒಟ್ಟು 54 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. 92 ಪುರಸ್ಕೃತರ ಪೈಕಿ 25 ಮಂದಿ ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಇನ್ನು ಮಹಿಳೆಯರ ಪೈಕಿ ಇಬ್ಬರು ಮಾತ್ರ ಈ ಪ್ರಶಸ್ತಿಗೆ ಆಯ್ಕೆ ಆಗಿದ್ದರು. 2009ರಲ್ಲಿ ಎಲಿನಾರ್ ಓಸ್ಟ್ರೋಮ್. 2019ರಲ್ಲಿ ಎಸ್ತರ್ ಡುಫ್ಲೋ. ಇದೀಗ ಈ ಪ್ರಶಸ್ತಿಯನ್ನು ಪಡೆದ ಮೂರನೇ ಮಹಿಳೆ ಎಂಬ ಗೌರವಕ್ಕೆ ಕ್ಲಾಡಿಯಾ ಗೋಲ್ಡಿನ್‌ ಪಾತ್ರರಾಗಿದ್ದಾರೆ.

ನೊಬೆಲ್​​ ಪ್ರಶಸ್ತಿಯನ್ನು ಅಕ್ಟೋಬರ್ 2ರಿಂದ ನೀಡಲಾಗುತ್ತಿದೆ. ಇನ್ನು ಆರ್ಥಿಕ ವಿಜ್ಞಾನ ಕ್ಷೇತ್ರಕ್ಕೆ ಇದು ಈ ವರ್ಷದ ಕೊನೆಯ ಪ್ರಶಸ್ತಿಯಾಗಿದೆ. ಔಷಧ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಮತ್ತು ಶಾಂತಿಗೆ ಸಂಬಂಧಿಸಿದಂತೆ ಈ ವಾರ ನೊಬೆಲ್​​ ಪ್ರಶಸ್ತಿಯನ್ನು ನೀಡಲಾಗಿತ್ತು.

ಕಳೆದ ವರ್ಷದ ಆರ್ಥಿಕ ವಿಜ್ಞಾನಗಳ ಪ್ರಶಸ್ತಿಯನ್ನು ಬೆನ್ ಬರ್ನಾಂಕೆ, ಡೌಗ್ಲಾಸ್ ಡೈಮಂಡ್ ಮತ್ತು ಫಿಲಿಪ್ ಡೈಬ್ವಿಗ್​​ಗೆ ನೀಡಲಾಗಿತ್ತು. ಬ್ಯಾಂಕ್ ವೈಫಲ್ಯಗಳು ಮತ್ತು 2007-2008 ರ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಅಧ್ಯಯನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

Published On - 3:36 pm, Mon, 9 October 23