ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ

ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ(Vivek Ramaswamy) ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಈ ಅಧ್ಯಕ್ಷೀಯ ಪ್ರಚಾರವನ್ನು ನಿಲ್ಲಿಸಲಿದ್ದೇವೆ. ನಾನು ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಅವರ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ
ವಿವೇಕ್ ರಾಮಸ್ವಾಮಿImage Credit source: Zee Business
Follow us
ನಯನಾ ರಾಜೀವ್
|

Updated on: Jan 16, 2024 | 11:30 AM

ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ(Vivek Ramaswamy) ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಈ ಅಧ್ಯಕ್ಷೀಯ ಪ್ರಚಾರವನ್ನು ನಿಲ್ಲಿಸಲಿದ್ದೇವೆ. ನಾನು ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಅವರ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಟ್ರಂಪ್ ಗೆಲುವು ಮತ್ತು ಅಧ್ಯಕ್ಷೀಯ ಅಭ್ಯರ್ಥಿಯನ್ನು ನಿರ್ಧರಿಸಲು ಅಯೋವಾದ ರಿಪಬ್ಲಿಕನ್ ಕೌಕಸ್‌ನಲ್ಲಿ ನಡೆದ ಮತದಾನದಲ್ಲಿ ಅವರ ಅತ್ಯಂತ ಕಳಪೆ ಪ್ರದರ್ಶನದ ಬೆನ್ನಲ್ಲೇ ರಾಮಸ್ವಾಮಿ ಈ ಘೋಷಣೆ ಮಾಡಿದ್ದಾರೆ. ರಾಮಸ್ವಾಮಿ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ವಿವೇಕ್ ತಿಳಿಸಿದ್ದರು.

ಈ ವರ್ಷ ವಿವೇಕ್ ರಾಮಸ್ವಾಮಿ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಂತರ ಡೊನಾಲ್ಡ್ ಟ್ರಂಪ್ ಹೊರತುಪಡಿಸಿ ನಿಕ್ಕಿ ಹ್ಯಾಲಿ ಮತ್ತು ರಾನ್ ಡಿಸಾಂಟಿಸ್ ಮಾತ್ರ ರೇಸ್‌ನಲ್ಲಿ ಉಳಿದಿದ್ದಾರೆ. ವಿವೇಕ್ ರಾಮಸ್ವಾಮಿ ಅಮೆರಿಕಾದ ರಾಜಕೀಯ ರಂಗದಲ್ಲಿ ಅಪರಿಚಿತ ಮುಖವಾಗಿದ್ದರು.

ಮತ್ತಷ್ಟು ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ: ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ಮೊದಲ ಹಂತದಲ್ಲಿ ಭಾರಿ ಗೆಲುವು ಸಾಧಿಸಿದ ಟ್ರಂಪ್

ಆದರೆ ಫೆಬ್ರವರಿ 2023 ರಲ್ಲಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ನಂತರ, ವಿವೇಕ್ ರಾಮಸ್ವಾಮಿ ರಿಪಬ್ಲಿಕನ್ ಮತದಾರರ ಗಮನ ಸೆಳೆದರು.

ರಾಮಸ್ವಾಮಿ ಅವರು ಅಯೋವಾ ಕಾಕಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು ಮತ್ತು ಕೇವಲ 7.7 ಶೇಕಡಾ ಮತಗಳನ್ನು ಪಡೆದರು. ವಿವೇಕ್ ರಾಮಸ್ವಾಮಿ ಬಿಲಿಯನೇರ್ ಉದ್ಯಮಿ ಮತ್ತು ಬಯೋಟೆಕ್ ಕಂಪನಿಯ ಮುಖ್ಯಸ್ಥ. ರಾಮಸ್ವಾಮಿ ಅವರ ಪೋಷಕರು ಭಾರತದ ಕೇರಳ ನಿವಾಸಿಗಳಾಗಿದ್ದು, ಅವರು ಅಮೆರಿಕದಲ್ಲಿ ನೆಲೆಸಿದ್ದರು.

ರಾಮಸ್ವಾಮಿ ಹುಟ್ಟಿದ್ದು ಅಮೆರಿಕದ ಓಹಿಯೋ ರಾಜ್ಯದಲ್ಲಿ. ಚುನಾವಣಾ ಪ್ರಚಾರದ ಆರಂಭಿಕ ಹಂತದಲ್ಲಿ, ವಿವೇಕ್ ರಾಮಸ್ವಾಮಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳಿದರು ಮತ್ತು ಟ್ರಂಪ್‌ಗೆ ಹತ್ತಿರವಾಗಿದ್ದಾರೆಂದು ತೋರಿಸಲು ಪ್ರಯತ್ನಿಸಿದರು. ಟ್ರಂಪ್ ಕೂಡ ರಾಮಸ್ವಾಮಿ ಅವರನ್ನು ಬೆಂಬಲಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ