ಕೈವ್: ರಷ್ಯಾ-ಉಕ್ರೇನ್ (Russia-Ukraine War) ಯುದ್ಧದಲ್ಲಿ ಸಾವು-ನೋವಿನ ಪ್ರಮಾಣ ಹೆಚ್ಚುತ್ತಿದೆ. ನಾವಂತೂ ತಲೆ ಬಾಗುವ ಪ್ರಶ್ನೆಯೇ ಇಲ್ಲವೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಹೇಳಿಬಿಟ್ಟಿದ್ದಾರೆ. ನಿನ್ನೆ ಬೆಳಗ್ಗೆಯೇ ಉಕ್ರೇನ್ ರಾಜಧಾನಿ ಕೈವ್ಗೆ ತಲುಪಿರುವ ಅವರೂ ಸಹ ಈಗಾಗಲೇ ಮಿಲಿಟರಿ ಉಡುಪು ಧರಿಸಿ, ಕೈಯಲ್ಲಿ ರೈಪಲ್ ಹಿಡಿದಿದ್ದಾರೆ. ಉಕ್ರೇನ್ನಲ್ಲಿ ದೇಶ ರಕ್ಷಣೆಗಾಗಿ ಬರೀ ಯೋಧರಷ್ಟೇ ಅಲ್ಲ, ನಾಗರಿಕರೂ ಬಂದೂಕು ಹಿಡಿದು ನಿಂತಿದ್ದಾರೆ. ಈ ಎಲ್ಲದರ ಮಧ್ಯೆ ರಷ್ಯಾ ಅಧ್ಯಕ್ಷ ಮತ್ತು ಉಕ್ರೇನ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿಯೂ ಮುಂದುವರಿದಿದೆ. ಹಾಗೇ, ಶುಕ್ರವಾರ ರಾತ್ರಿ ಹೊತ್ತಿಗೆ ಕೈವ್ನ ಕೇಂದ್ರ ಭಾಗದಿಂದ ತಮ್ಮದೊಂದು ವಿಡಿಯೋ ಮಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಾವೆಲ್ಲ ಇಲ್ಲಿದ್ದೇವೆ. ನಮ್ಮ ಸೇನೆಯೂ ಇಲ್ಲಿದೆ. ಈ ಸಮಾಜದ ನಾಗರಿಕರೂ ನಮ್ಮೊಂದಿಗೆ ಸೇರಿದ್ದಾರೆ. ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು, ನಮ್ಮ ದೇಶವನ್ನು ಕಾಪಾಡಿಕೊಳ್ಳಲು ಒಂದಾಗಿದ್ದೇವೆ ಎಂದು ಹೇಳಿದ್ದಾರೆ. ಈ ವೇಳೆ ಅವರು ಸೇನಾ ಉಡುಪನ್ನು ಧರಿಸಿದ್ದನ್ನು ಕಾಣಬಹುದು. ಅಧ್ಯಕ್ಷರ ಭವನದ ಹೊರಗೆ ನಿಂತಿರುವ ಅವರ ಜತೆ, ಉಕ್ರೇನ್ ಪ್ರಧಾನಮಂತ್ರಿ ಮತ್ತು ಇತರರು ಇದ್ದಾರೆ.
?Президент України Володимир Зеленський:
“Всі ми тут – захищаємо нашу Незалежність, нашу державу! Так буде й надалі. Слава нашим захисникам і захисницям! Слава Україні!??” pic.twitter.com/hojX94ONDI— Defence of Ukraine (@DefenceU) February 25, 2022
ಉಕ್ರೇನ್ನಲ್ಲಿ ಅಧಿಕಾರದಲ್ಲಿ ಇರುವುದು ಮಾದಕವ್ಯಸನಿ ಮತ್ತು ನವನಾಜಿಗಳ ಗುಂಪೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಹೀಗಳೆದಿದ್ದರು. ಅಲ್ಲದೆ, ಉಕ್ರೇನ್ನಲ್ಲಿರುವ ಈ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಸೇನೆಗೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್ ಅಧ್ಯಕ್ಷ ಈ ಮಾತುಗಳನ್ನಾಡಿದ್ದಾರೆ. ಅದಕ್ಕೂ ಮೊದಲು ಮಾತನಾಡಿದ್ದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಜಗತ್ತು ದೂರದಿಂದ ಗಮನಿಸುತ್ತಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವೂ ಕೂಡ ದೂರದಿಂದಲೇ ನೋಡುತ್ತಿದೆ ಹೊರತು ಯಾರೂ ಬರುತ್ತಿಲ್ಲ. ನಾವು ಏಕಾಂಗಿಯಾಗಿ ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಯುಎಸ್ ಸೇರಿ ಜಗತ್ತಿನ ಇತರ ರಾಷ್ಟ್ರಗಳು ರಷ್ಯಾದ ಮೇಲೆ ಹೇರುತ್ತಿರುವ ನಿರ್ಬಂಧಗಳ ಪ್ರಮಾಣ ಸಾಕಾಗುತ್ತಿಲ್ಲ ಎಂದಿದ್ದರು.
ಇದನ್ನೂ ಓದಿ: ಧರ್ಮಸ್ಥಳದ ಕನ್ಯಾಡಿ ಬಳಿ ದಿನೇಶ್ ಕೊಲೆ ಪ್ರಕರಣ; ಟಿವಿ9ಗೆ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯ ಲಭ್ಯ
Published On - 8:28 am, Sat, 26 February 22