AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ನಡೆಸುತ್ತಿರುವ ಭಯೋತ್ಪಾದಕರನ್ನು ಕಿತ್ತೊಗೆದು ಅಧಿಕಾರ ಕೈಗೆತ್ತಿಕೊಳ್ಳಿ: ಉಕ್ರೇನ್ ಸೈನಿಕರನ್ನು ಆಗ್ರಹಿಸಿದ ಪುಟಿನ್

ಶುಕ್ರವಾರದಂದು ರಷ್ಯಾ ರಾಷ್ಟ್ರೀಯ ಟೆಲಿವಿಷನ್ ಮೂಲಕ ಉಕ್ರೇನಿನ ಸೇನೆಯನ್ನು ಉದ್ದೇಶಿಸಿ ಮಾತಾಡಿದ ಪುಟಿನ್, ‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ,’ ಅಂತ ಅಗ್ರಹಿಸಿದರು.

ಸರ್ಕಾರ ನಡೆಸುತ್ತಿರುವ ಭಯೋತ್ಪಾದಕರನ್ನು ಕಿತ್ತೊಗೆದು ಅಧಿಕಾರ ಕೈಗೆತ್ತಿಕೊಳ್ಳಿ: ಉಕ್ರೇನ್ ಸೈನಿಕರನ್ನು ಆಗ್ರಹಿಸಿದ ಪುಟಿನ್
ವ್ಲಾದಿಮಿರ್ ಪುಟಿನ್
TV9 Web
| Updated By: shivaprasad.hs|

Updated on:Feb 26, 2022 | 8:18 AM

Share

ಮಾಸ್ಕೋ: ಉಕ್ರೇನಲ್ಲಿ ಅಧಿಕಾರದಲ್ಲಿರುವ ಸರ್ಕಾರದ ನಾಯಕರನ್ನು ಭಯೋತ್ಪಾದಕರು ಮತ್ತು ಮಾದಕವ್ಯಸನಿ (drug addicts) ಹಾಗೂ ನವ-ನಾಜಿಗಳ (Neo-Nazi) ಗುಂಪೆಂದು ಹೀಗಳೆದಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin), ಅಂಥವರನ್ನೊಳಗೊಂಡ ಧೂರ್ತ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಉಕ್ರೇನಿನ ಸೇನೆಯನ್ನು ಆಗ್ರಹಿಸಿದ್ದಾರೆ. ‘ಉಕ್ರೇನ್ ರಾಷ್ಟ್ರವಾದಿಗಳು’ ರಷ್ಯಾದ ಸೇನೆಯನ್ನು ಕೆಣಕಲು ಪ್ರಮುಖ ನಗರಗಳ ವಸತಿ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸತ್ತಿದ್ದಾರೆ, ರಷ್ಯಾದ ಆಕ್ರಮಣದಿಂದ ನಾಗರಿಕರು ಸಾವು ನೋವುಗಳನ್ನು ಅನುಭವಿಸಿದ್ದಾರೆ ಎಂದು ಜನರಲ್ಲಿ ನಂಬಿಕೆ ಹುಟ್ಟಿಸಲು ಅವರು ಹಾಗೆ ಮಾಡುತ್ತಿದ್ದಾರೆ ಅಂತಲೂ ಪುಟಿನ್ ಹೇಳಿದರು. ಶುಕ್ರವಾರದಂದು ರಷ್ಯಾ ರಾಷ್ಟ್ರೀಯ ಟೆಲಿವಿಷನ್ ಮೂಲಕ ಉಕ್ರೇನಿನ ಸೇನೆಯನ್ನು ಉದ್ದೇಶಿಸಿ ಮಾತಾಡಿದ ಪುಟಿನ್, ‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ,’ ಅಂತ ಅಗ್ರಹಿಸಿದರು.

‘ಮಾದಕವ್ಯಸನಿ ಹಾಗೂ ನವ-ನಾಜಿಗಳ ಗುಂಪಿನೊಂದಿಗಿಂತ ನಿಮ್ಮೊಂದಿಗೆ ಮಾತುಕತೆಗೆ ಕೂರುವುದು ಹೆಚ್ಚು ಸೂಕ್ತ ಎಂದು ನನಗನ್ನಿಸುತ್ತಿದೆ,’ ಎಂದು ಯಹೂದಿ ಧರ್ಮೀಯರಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ನಾಯಕತ್ವದ ಸರ್ಕಾರದ ಉದ್ದೇಶವನ್ನು ಉದ್ದೇಶಿಸಿ ಪುಟಿನ್ ಹೇಳಿದರು.

ಗುರುವಾರ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಲು ರಷ್ಯಾದ ಪಡೆಗಳಿಗೆ ಆದೇಶಿಸಿದ ಪುಟಿನ್, ಉಕ್ರೇನಿಯನ್ ‘ರಾಷ್ಟ್ರವಾದಿಗಳು’ ಕೀವ್ ಮತ್ತು ಈಶಾನ್ಯ ನಗರ ಖಾರ್ಕಿವ್ ಸೇರಿದಂತೆ ಉಕ್ರೇನಿಯನ್ ನಗರಗಳ ವಸತಿ ಪ್ರದೇಶಗಳಿಗೆ ಬಹು ರಾಕೆಟ್ ಲಾಂಚರ್‌ಗಳನ್ನು ನಿಯೋಜಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಉಕ್ರೇನಿನ ನಾಯಕರು ಜಗತ್ತಿನಾದ್ಯಂತ ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ ಪುಟಿನ್, ಅವರು ಅಮಾಯಕ ನಾಗರಿಕರನ್ನು ಗುರಾಣಿಗಳಾಗಿ ಬಳಸಿ ನಂತರ ಅವರ ಸಾವುನೋವುಗಳಿಗೆ ರಷ್ಯಾವನ್ನು ದೂರುವ ಹವಣಿಕೆಯಲ್ಲಿದ್ದಾರೆ ಎಂದು ಪುಟಿನ್ ಹೇಳಿದರು.

‘ವಿದೇಶೀ ಸಲಹೆಗಾರರ ಅದರಲ್ಲೂ ಮುಖ್ಯವಾಗಿ ಅಮೇರಿಕದ ಸಲಹೆಗಾಗರ ಹಿಕ್ಮತ್ತಿನಿಂದ ಇದೆಲ್ಲ ಆಗುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ,’ ಎಂದು ಪುಟಿನ್ ಹೇಳಿದರು.

ಪುಟಿನ್ ಮತ್ತು ರಷ್ಯಾದ ಉನ್ನತ ಅಧಿಕಾರಿಗಳು ಮಾಸ್ಕೋದ ಪಡೆಗಳು ‘ಉಕ್ರೇನ್‌ನಲ್ಲಿರುವ ಉಗ್ರಗಾಮಿ-ರಾಷ್ಟ್ರವಾದಿಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿವೆ,’ ಎಂದು ಹೇಳಿದ್ದಾರೆ.

‘ಶೌರ್ಯ, ಸಾಹಸ ಮತ್ತು ವೃತ್ತಿಪರ ರೀತಿಯಲ್ಲಿ’ ರಷ್ಯಾದ ಸೇನೆ ಕಾರ್ಯನಿರ್ವಹಿಸುತ್ತಿದೆ ಎಂದು ಪುಟಿನ್ ರಷ್ಯಾದ ಸೈನ್ಯವನ್ನು ಶ್ಲಾಘಿಸಿದರು. ‘ನಮ್ಮ ಜನ ಮತ್ತು ನಮ್ಮ ಪಿತೃನಾಡಿನ ಭದ್ರತೆಗೆ ಸಂಬಂಧಿಸಿದಂತೆ ಎದುರಾಗಿದ್ದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದು ಬಹುಮುಖ್ಯ ಕಾರ್ಯವನ್ನು ನಮ್ಮ ಸೇನೆ ಯಶಸ್ವೀಯಾಗಿ ಪೂರೈಸುತ್ತಿದೆ,’ ಎಂದು ಪುಟಿನ್ ಹೇಳಿದರು.

ವಿಶೇಷ ಮಾಹಿತಿ:

ಉಕ್ರೇನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ ಪೋರ್ಟಲ್ ಸ್ಥಾಪಿಸಿದೆ. ಉಕ್ರೇನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.

ವೆಬ್ ಪೋರ್ಟಲ್ ಲಿಂಕ್: http://Ukraine.Karnataka.tech

ಇದನ್ನೂ ಓದಿ:  Russia-Ukraine War: ಉಕ್ರೇನ್​ನಲ್ಲಿ ಸಿಲುಕಿರುವ 5,000 ವಿದ್ಯಾರ್ಥಿಗಳ ಸ್ಥಳಾಂತರದ ಖರ್ಚನ್ನು ತಮಿಳುನಾಡು ಸರ್ಕಾರ ಭರಿಸಲಿದೆ; ಸಿಎಂ ಸ್ಟಾಲಿನ್

Published On - 7:20 am, Sat, 26 February 22