
ಅಬುಧಾಬಿ, ಅಕ್ಟೋಬರ್ 3: ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಓಮನ್ ಕೋ-ಪೈಲಟ್ನಿಂದ ದಾಳಿಗೆ ಒಳಗಾಗಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತನ್ನ ಪ್ರಾಣವನ್ನು ಒತ್ತೆಯಿಟ್ಟು 174 ಪ್ರಯಾಣಿಕರ ಜೀವ ಕಾಪಾಡಿದ್ದರು. ದುಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚರ್ ಅವರನ್ನು ಭೇಟಿಯಾದ ಯುಎಇ ಉಪ ಪ್ರಧಾನಿ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್, ಅವರ ಧೈರ್ಯ, ಜವಾಬ್ದಾರಿ ಹಾಗೂ ಜನರ ಮೇಲಿನ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಗುಜರಾತ್ ಮೂಲದ ಸ್ಮಿತ್ ಮಚ್ಚರ್ ಈ ಮೊದಲು ಭಾರತದ ಸ್ಪೈಸ್ಜೆಟ್ ಪೈಲಟ್ ಆಗಿದ್ದರು. ಫ್ಲೈದುಬೈ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು ತಮ್ಮ ವಿಮಾನದಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ತೋರಿದ ಸಾಹಸ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾಲ್ ಮಾಡಿ ಸ್ಮಿತ್ ಮಚ್ಚರ್ ಜೊತೆ ಮಾತನಾಡಿ, ಅಭಿನಂದಿಸಿದ್ದರು. ಆದರೆ, ವಿಪಕ್ಷಗಳು ಸ್ಮಿತ್ ಮಚ್ಚರ್ ಧೈರ್ಯ, ಶೌರ್ಯದ ಬಗ್ಗೆ ಒಂದು ಅಭಿನಂದನಾ ಪೋಸ್ಟ್ ಕೂಡ ಹಾಕದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲ್ ಪ್ರಧಾನಿ ನೆತನ್ಯಾಹು ಸೇರಿದಂತೆ ಜಗತ್ತಿನಾದ್ಯಂತ ಹಲವು ನಾಯಕರು ಸ್ಮಿತ್ ಮಚ್ಚರ್ ಅವರನ್ನು ಹೀರೋ ಎಂದು ಕೊಂಡಾಡಿದ್ದಾರೆ.
قبلة من سمو الشيخ حمدان بن محمد ولي عهد دبي وزير الدفاع على رأس الكابتن سميت ماتشهار طيار فلاي دبي تختصر الكثير هكذا تُقدّر الإمارات الأبطال وهكذا يُعطى الفضل لأهله
شكراً للكابتن سميت ماتشهار وشكراً لطاقم فلاي دبي الذين كان لهم الفضل في حماية الركاب والطائرة pic.twitter.com/XlQBOKSH07
— Mohammed Taqi (@MohdTaqi11) October 3, 2026
ಇಂದು ತಮ್ಮ ಆಸ್ಪತ್ರೆ ಭೇಟಿಯ ಫೋಟೋವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಯುಎಇ ಉಪ ಪ್ರಧಾನಿ ಶೇಖ್ ಹಮ್ದಾನ್, “ಧೈರ್ಯ, ಜವಾಬ್ದಾರಿ ಹಾಗೂ ಮಾನವ ಜೀವದ ಮೇಲಿನ ಕಾಳಜಿಯ ಅತ್ಯುನ್ನತ ಮೌಲ್ಯಗಳನ್ನು ಪ್ರದರ್ಶಿಸಿದ ಫ್ಲೈದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಭೇಟಿಯ ಸಮಯದಲ್ಲಿ ನಮ್ಮಿಂದ ಹಾಗೂ ದೇಶದ ನಾಯಕತ್ವದಿಂದ ಅವರಿಗೆ ಭಾರೀ ಮೆಚ್ಚುಗೆ ಮತ್ತು ಪ್ರಶಂಸೆಗಳನ್ನು ಸಲ್ಲಿಸಲಾಯಿತು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ
“ಅವರು ನಮ್ಮ ತಂಡದ ಭಾಗವಾಗಿರುವುದಕ್ಕೆ, ನಮ್ಮ ರಾಷ್ಟ್ರದ ಕಥೆಯ ಭಾಗವಾಗಿರುವುದಕ್ಕೆ ಮತ್ತು ಯುಎಇ ಪ್ರತಿನಿಧಿಸುವ ಕರುಣೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
During a visit to Captain Smit Machchhar… the flydubai pilot who embodied the highest degrees of courage, responsibility, and care for human life.
From us, and from the leadership of the nation, he has our full appreciation and praise.
We are proud that he is part of our… pic.twitter.com/QgpQxdcK5C
— Hamdan bin Mohammed (@HamdanMohammed) October 3, 2026
ಪ್ರಧಾನಿ ಮೋದಿ ಅವರೊಂದಿಗೆ ಕ್ಯಾಪ್ಟನ್ ಸ್ಮಿತ್ ಸಂಭಾಷಣೆ:
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ವೀಡಿಯೊ ಕರೆಯಲ್ಲಿ ದುರಂತದ ಭೀಕರ ಕ್ಷಣಗಳನ್ನು ಮೆಲಕುಹಾಕಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಗಾಯಗೊಂಡು ಕೆಳಗೆ ಬಿದ್ದಾಗಲೂ ವಿಮಾನವು ಕೆಳಕ್ಕೆ ಕುಸಿಯುತ್ತಿರುವುದು ತಮಗೆ ಅನುಭವಕ್ಕೆ ಬಂದಿತ್ತು ಎಂದು ತಿಳಿಸಿದರು.
“ನಾನು ರಕ್ತಸಿಕ್ತನಾಗಿ ಕೆಳಗೆ ಬಿದ್ದಿದ್ದಾಗ, ವಿಮಾನವು ತೀವ್ರವಾಗಿ ಕೆಳಗೆ ಕುಸಿಯುತ್ತಿರುವುದು ನನಗೆ ಅರ್ಥವಾಯಿತು. ಆಗ ನನಗೆ ಅನಿಸಿದ್ದು ಒಂದೇ: ‘ಸ್ಮಿತ್, ಇದು ನಿನ್ನ ಕೊನೆಯ ಯತ್ನ, ಹೇಗಾದರೂ ಮಾಡಿ ಕಾಕ್‌ಪಿಟ್ ಬಾಗಿಲು ತೆರೆ’ ಎಂದು. ನನ್ನ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದಾಗಲೂ ನಾನು ಬಾಗಿಲನ್ನು ಅನ್‌ಲಾಕ್ ಮಾಡುವಲ್ಲಿ ಯಶಸ್ವಿಯಾದೆ. ತಕ್ಷಣವೇ ಪ್ರಯಾಣಿಕರು ಒಳಬಂದರು. ಈ ರಕ್ಷಣಾ ಕಾರ್ಯದಲ್ಲಿ ವಿಮಾನದಲ್ಲಿದ್ದ ಮಿಕ್ಕ ಸಿಬ್ಬಂದಿ ಹಾಗೂ ಪ್ರಯಾಣಿಕರ ಪಾತ್ರವೂ ಅಷ್ಟೇ ದೊಡ್ಡದಿದೆ” ಎಂದು ಸ್ಮಿತ್ ಪ್ರಧಾನಿ ಮೋದಿಯವರಿಗೆ ವಿವರಣೆ ನೀಡಿದ್ದಾರೆ.
ಘಟನೆಯ ಹಿನ್ನೆಲೆ:
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿದ್ದಾಗ ಒಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್ ಬಾಗಿಲು ತೆರೆದಿದ್ದರಿಂದ, ಒಳಬಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ದಾಳಿಕೋರನನ್ನು ಕಟ್ಟಿಹಾಕಿದರು. ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು ಸ್ಮಿತ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ವಿಮಾನದಲ್ಲಿದ್ದ ಮತ್ತೊಂದು ಜೋಡಿ ಪೈಲಟ್‌ಗಳು ತಕ್ಷಣವೇ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು, ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದರು. ವಿಮಾನದಲ್ಲಿದ್ದ ವೈದ್ಯರು ಕ್ಯಾಪ್ಟನ್‌ಗೆ ತಕ್ಷಣದ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sat, 3 October 26