ಇಸ್ಲಮಾಬಾದ್: ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಸೋಮವಾರ ಇಮ್ರಾನ್ ಖಾನ್, ಅವರ ಪತ್ನಿ ಬುಶ್ರಾ ಬೀಬಿ, ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಾಪುರ್ ಮತ್ತು ಇತರ 93 ಮಂದಿಗೆ ಇಸ್ಲಾಮಾಬಾದ್‌ನಲ್ಲಿ ಕಳೆದ ವಾರ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ರಹಿತ ಬಂಧನ ವಾರಂಟ್‌ಗಳನ್ನು ಹೊರಡಿಸಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರಮುಖ ಪ್ರತಿಭಟನೆಯು ಘರ್ಷಣೆಯಲ್ಲಿ ಕೊನೆಗೊಂಡಿತು. ಇದರಲ್ಲಿ 12 ಪಿಟಿಐ ಬೆಂಬಲಿಗರು ಕೊಲ್ಲಲ್ಪಟ್ಟರು, ನೂರಾರು ಮಂದಿಯನ್ನು ಬಂಧಿಸಲಾಯಿತು.
ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಪ್ರತಿಭಟನೆಯು ಇಸ್ಲಾಮಾಬಾದ್‌ನಲ್ಲಿ ಸಂಚಲನ ಸೃಷ್ಟಿಸಿತು. ನಗರದಲ್ಲಿ ಹಿಂಸಾಚಾರ, ಬೆಂಕಿ ಹಚ್ಚುವಿಕೆ ಮತ್ತು ಬಂಧನಗಳ ಘಟನೆಗಳು ವರದಿಯಾಗಿವೆ. ಈ ಗುಂಪಿನಲ್ಲಿ ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಕೂಡ ಇದ್ದರು. ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನ ಮುಖ್ಯ ಸೂತ್ರಧಾರರಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ: Imran Khan:ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ 8 ದಿನಗಳ ಕಾಲ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ದಳದ ವಶಕ್ಕೆ
ಪಂಜಾಬ್‌ನ ಭೂಮಾಲೀಕ ಕುಟುಂಬದಿಂದ ಬಂದ 2018ರಲ್ಲಿ ಇಮ್ರಾನ್ ಖಾನ್ ಅವರೊಂದಿಗಿನ ವಿವಾಹದ ಮೊದಲು ಬುಶ್ರಾ ರಿಯಾಜ್ ವಟ್ಟೂ ಅಥವಾ ಬುಶ್ರಾ ಬೀಬಿ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮೊದಲು ಕಸ್ಟಮ್ಸ್ ಅಧಿಕಾರಿ ಖಾವರ್ ಮನೇಕಾ ಅವರನ್ನು ವಿವಾಹವಾಗಿದ್ದ ಬೀಬಿ ಬುಶ್ರಾ, ಸೂಫಿಸಂನಲ್ಲಿ ಅವರ ಜಂಟಿ ಆಸಕ್ತಿಯ ಬಗ್ಗೆ ಇಮ್ರಾನ್ ಖಾನ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಇವರಿಬ್ಬರೂ ಆಗಾಗ ಭೇಟಿಯಾಗಲಾರಂಭಿಸಿದರು. ಬಳಿಕ ಬುಶ್ರಾ ಮತ್ತು ಅವರ ಪತಿ 2017ರ ನವೆಂಬರ್ 14ರಂದು ವಿಚ್ಛೇದನ ಪಡೆದರು. ಫೆಬ್ರವರಿ 2018ರಲ್ಲಿ ಇಮ್ರಾನ್ ಖಾನ್ ಅವರನ್ನು ಬೀಬಿ ಬುಶ್ರಾ ರಹಸ್ಯ ಸಮಾರಂಭದಲ್ಲಿ ವಿವಾಹವಾದರು. ತಮ್ಮ ಮದುವೆಯ ನಂತರ ಬುಶ್ರಾ ಅವರ ಮುಖವನ್ನು ಯಾರಿಗೂ ತೋರಿಸಿಲ್ಲ ಎಂಬುದು ಕುತೂಹಲದ ಸಂಗತಿ.
ಬುಶ್ರಾ ರಾಜಕೀಯ ಪ್ರಭಾವ:
ಬೀಬಿ ಬುಶ್ರಾ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು 2018ರಲ್ಲಿ ಪ್ರಧಾನ ಮಂತ್ರಿಯಾದಾಗ ಇಮ್ರಾನ್ ಖಾನ್ ಮೇಲೆ ಬೀಬಿ ಬುಶ್ರಾ ಅವರ ಪ್ರಭಾವವು ಬೆಳೆಯಿತು. ಪಿಟಿಐ ಸದಸ್ಯರು ಇಮ್ರಾನ್ ಖಾನ್ ಅವರೊಂದಿಗಿನ ಬುಶ್ರಾ ವಿವಾಹದಿಂದ ಅಸಹನೀಯರಾಗಿದ್ದರು. ಆತನ ಪ್ರತಿಸ್ಪರ್ಧಿಗಳು ಆಕೆಯನ್ನು ಮಾಟಮಂತ್ರ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: Imran Khan: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನೆ ಮೇಲೆ ಇಮ್ರಾನ್ ಖಾನ್ ಬೆಂಬಲಿಗರಿಂದ ದಾಳಿ
ಇಮ್ರಾನ್ ಖಾನ್‌ರ ಆಪ್ತ ಸಹಾಯಕರು ಬುಶ್ರಾ ಅವರು ಉನ್ನತ ಮಟ್ಟದ ಮಂತ್ರಿ ನೇಮಕಾತಿಗಳನ್ನು ಒಳಗೊಂಡಂತೆ ನಿರ್ಣಾಯಕ ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಹೇಳಿದ್ದಾರೆ. ಕೆಲವು ರಾಜಕೀಯ ಸಭೆಗಳಲ್ಲಿ ಅವರು ತೆರೆಯ ಮರೆಯಲ್ಲಿ ಕುಳಿತು ಇಮ್ರಾನ್ ಖಾನ್ಗೆ ಮಾರ್ಗದರ್ಶನ ಮತ್ತು ಸಲಹೆಯನ್ನು ನೀಡುತ್ತಿದ್ದರು. ಈ ರೀತಿ ಇಮ್ರಾನ್ ಖಾನ್ ಅವರನ್ನು ಬುಶ್ರಾ ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತಿದ್ದರು.
ಐಎಸ್‌ಐ ಏಜೆಂಟ್:
ಆಘಾತಕಾರಿ ಸಂಗತಿಯೆಂದರೆ ಇಮ್ರಾನ್ ಖಾನ್ ಅವರ ಸೂಚನೆಗಳನ್ನು ಕೂಡ ಬುಶ್ರಾ ಹಲವು ಬಾರಿ ನಿರಾಕರಿಸಿದ್ದಾರೆ. ಇಮ್ರಾನ್ ಖಾನ್ ತಮ್ಮ ಬೆಂಬಲಿಗರಿಗೆ ಜುಮಾನ್ ಪಾರ್ಕ್‌ಗೆ ಹೋಗುವಂತೆ ಸೂಚಿಸಿದ್ದರು. ಅದು ‘ರೆಡ್ ಝೋನ್’ ಆಗಿರುವುದರಿಂದ ಬೀಬಿ ಬುಶ್ರಾ ಅವರ ಸೂಚನೆಯನ್ನು ಕೇಳಲಿಲ್ಲ.
ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ಮಾಜಿ ಐಎಸ್‌ಐ ಮಹಾನಿರ್ದೇಶಕ ಹಮೀದ್ ಇದೇ ಬೀಬಿ ಬುಶ್ರಾ ಮೂಲಕ ಇಮ್ರಾನ್ ಖಾನ್ ಜೊತೆ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಹಮೀದ್ ಅವರು ಬುಶ್ರಾ ಜೊತೆ ಆತ್ಮೀಯರಾಗಿದ್ದರು ಎಂಬ ಆರೋಪವೂ ಇದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ