ಟ್ರಿನಿಡಾಡ್ ಮತ್ತು ಟೊಬಾಗೋದ ಮೊದಲ ಮಹಿಳಾ ಪ್ರಧಾನಿ ಕಮಲಾಗೂ ಭಾರತಕ್ಕೂ ಏನು ನಂಟು?

ಪ್ರಧಾನಿ ನರೇಂದ್ರ ಮೋದಿ(Narendra Modi)  ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಅಲ್ಲಿ ಭಾಷಣದ ವೇಳೆ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಉದ್ಘರಿಸಿದ್ದಾರೆ. ಹಾಗಾದರೆ ಕಮಲಾ ಪ್ರಸಾದ್​​ಗೂ ಭಾರತಕ್ಕೂ ಇರುವ ನಂಟೇನು ಎಂಬುದನ್ನು ತಿಳಿಯೋಣ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಭೇಟಿಯ ಎರಡನೇ ಹಂತದಲ್ಲಿ ಗುರುವಾರ ಟ್ರಿನಿಡಾಡ್ ಮತ್ತು ಟೊಬಾಗೋಗೆ ತಲುಪಿದ್ದಾರೆ. ಅಲ್ಲಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರು ಪಿಯಾರ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರಿದರು. ಟ್ರಿನಿಡಾಡ್ ಪ್ರಧಾನ ಮಂತ್ರಿಯವರ ಆಹ್ವಾನದ ಮೇರೆಗೆ ಪ್ರಧಾನಿಯವರ ಈ ಭೇಟಿ ನಡೆಯುತ್ತಿದೆ.

ಟ್ರಿನಿಡಾಡ್ ಮತ್ತು ಟೊಬಾಗೋದ ಮೊದಲ ಮಹಿಳಾ ಪ್ರಧಾನಿ ಕಮಲಾಗೂ ಭಾರತಕ್ಕೂ ಏನು ನಂಟು?
ಮೋದಿ-ಕಮಲಾ

Updated on: Jul 04, 2025 | 10:26 AM

ಟ್ರಿನಿಡಾಡ್, ಜುಲೈ 04: ಪ್ರಧಾನಿ ನರೇಂದ್ರ ಮೋದಿ(Narendra Modi)  ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಅಲ್ಲಿ ಭಾಷಣದ ವೇಳೆ ಅಲ್ಲಿನ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಉದ್ಘರಿಸಿದ್ದಾರೆ. ಹಾಗಾದರೆ ಕಮಲಾ ಪ್ರಸಾದ್​​ಗೂ ಭಾರತಕ್ಕೂ ಇರುವ ನಂಟೇನು ಎಂಬುದನ್ನು ತಿಳಿಯೋಣ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಭೇಟಿಯ ಎರಡನೇ ಹಂತದಲ್ಲಿ ಗುರುವಾರ ಟ್ರಿನಿಡಾಡ್ ಮತ್ತು ಟೊಬಾಗೋಗೆ ತಲುಪಿದ್ದಾರೆ. ಅಲ್ಲಿ ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರು ಪಿಯಾರ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ಕೋರಿದರು. ಟ್ರಿನಿಡಾಡ್ ಪ್ರಧಾನ ಮಂತ್ರಿಯವರ ಆಹ್ವಾನದ ಮೇರೆಗೆ ಪ್ರಧಾನಿಯವರ ಈ ಭೇಟಿ ನಡೆಯುತ್ತಿದೆ.

ಜುಲೈ 3 ರಿಂದ 4 ರವರೆಗೆ ಪ್ರಧಾನಿ ಮೋದಿ ಅವರ ಭೇಟಿಯ ಸಮಯದಲ್ಲಿ, ಅವರು ಟ್ರಿನಿಡಾಡ್ ಮತ್ತು ಟೊಬಾಗೋ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲು ಮತ್ತು ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಕೆರಿಬಿಯನ್ ದೇಶ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರು ಬಿಹಾರದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ . ಅವರು ಪ್ರಧಾನಿಯಾದ ನಂತರ, ಅಲ್ಲಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬಿಹಾರದ ಭೇಲುಪುರ ಗ್ರಾಮದಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆ ನಡೆದಿತ್ತು.

ಬಕ್ಸಾರ್​ ಕಮಲಾ ಅವರ ಪೂರ್ವಜರ ಗ್ರಾಮ
ಬಿಹಾರದ ಬಕ್ಸಾರ್ ಜಿಲ್ಲೆಯ ಭೇಲುಪುರ ಗ್ರಾಮವು ಕಮಲಾ ಪ್ರಸಾದ್ ಬಿಸ್ಸೆಸ್ಸರ್ ಅವರ ಪೂರ್ವಜರ ಗ್ರಾಮವಾಗಿದೆ. ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಎರಡನೇ ಬಾರಿಗೆ ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿಯಾಗಿದ್ದಾರೆ. 73 ವರ್ಷದ ಬಿಸ್ಸೆಸ್ಸರ್ ಈ ಹಿಂದೆ 2010-2015 ರವರೆಗೆ ಕೆರಿಬಿಯನ್ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಟ್ರಿನಿಡಾಡ್ ಮತ್ತು ಟೊಬಾಗೋವನ್ನು ಮುನ್ನಡೆಸಿದ ಏಕೈಕ ಮಹಿಳೆ ಅವರು.

ಮತ್ತಷ್ಟು ಓದಿ: Video: ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಕರೆದ ಪ್ರಧಾನಿ ಮೋದಿ

1834 ರಲ್ಲಿ, ಬ್ರಿಟನ್ ಆಫ್ರಿಕಾದಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸಿತು, ಇದು ಯುರೋಪಿಯನ್ ವಸಾಹತುಗಳಲ್ಲಿ ಕಾರ್ಮಿಕರ ಕೊರತೆಗೆ ಕಾರಣವಾಯಿತು. ಈ ಕೊರತೆಯನ್ನು ಪೂರೈಸಲು, ಭಾರತದಂತಹ ದೇಶಗಳಿಂದ ಕಾರ್ಮಿಕರನ್ನು ಕರೆತರಲಾಯಿತು. ಈ ಕಾರ್ಮಿಕರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರದವರಾಗಿದ್ದು, ಅವರನ್ನು 5 ರಿಂದ 7 ವರ್ಷಗಳ ಒಪ್ಪಂದದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಕಾರ್ಮಿಕರೊಂದಿಗಿನ ಈ ಒಪ್ಪಂದವನ್ನು ಆಡುಮಾತಿನಲ್ಲಿ ‘ಗಿರ್ಮಿಟಿಯಾ’ ಎಂದು ಕರೆಯಲಾಯಿತು, ಇದರಿಂದಾಗಿ ‘ಗಿರ್ಮಿಟಿಯಾ’ ಎಂಬ ಪದವು ಜನಪ್ರಿಯವಾಯಿತು. ಟ್ರಿನಿಡಾಡ್‌ನ ಪ್ರಧಾನಿ ಆ ಒಪ್ಪಂದದ ಕಾರ್ಮಿಕರ ವಂಶಸ್ಥರು. ಪ್ರಧಾನಿ ಕಮಲಾ ಅವರ ಮುತ್ತಜ್ಜ ರಾಮ್ ಲಖನ್ ಮಿಶ್ರಾ ಬಿಹಾರದ ಬಕ್ಸಾರ್ ಜಿಲ್ಲೆಯವರು.

ಬಿಹಾರದ ಪರಂಪರೆ ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೂ ಹೆಮ್ಮೆಯ ವಿಷಯವಾಗಿದೆ. ಅದು ಪ್ರಜಾಪ್ರಭುತ್ವ, ರಾಜಕೀಯ, ರಾಜತಾಂತ್ರಿಕತೆ ಅಥವಾ ಉನ್ನತ ಶಿಕ್ಷಣವಾಗಿರಬಹುದು, ಬಿಹಾರವು ಅನೇಕ ವಿಷಯಗಳಲ್ಲಿ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಿದೆ. 21 ನೇ ಶತಮಾನದಲ್ಲಿಯೂ ಸಹ, ಬಿಹಾರದ ಭೂಮಿಯಿಂದ ಹೊಸ ಸ್ಫೂರ್ತಿ ಮತ್ತು ಹೊಸ ಅವಕಾಶಗಳು ಹೊರಹೊಮ್ಮುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:16 am, Fri, 4 July 25