Video: ಮೋದಿ ಸ್ವಾಗತಕ್ಕೆಂದು ಏರ್ಪೋರ್ಟ್ಗೆ ಟ್ರಿನಿಡಾಡ್ ಮತ್ತು ಟೊಬಾಗೋ ಸರ್ಕಾರದಿಂದ ಎಷ್ಟು ಜನ ಬಂದಿದ್ರು ನೋಡಿ
ಪ್ರಧಾನಿ ನರೇಂದ್ರ ಮೋದಿ ಟ್ರಿನಿಡಾಡ್ ಹಾಗೂ ಟೊಬಾಗೋ ಭೇಟಿಗೆ ತೆರಳಿದ್ದಾರೆ. ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಪ್ರಧಾನಿ ಕಮಲಾ, 38 ಸಚಿವರು ನಾಲ್ಕು ಸಂಸದರು ಮೋದಿ ಸ್ವಾಗತಕ್ಕೆಂದು ಏರ್ಪೋರ್ಟ್ ತೆರಳಿದ್ದರು. ಇದು ಭಾರತ ಹಾಗೂ ಈ ದೇಶದ ನಡುವಿನ ಸಂಬಂಧ ಹೇಗಿದೆ ಎಂಬುದನ್ನು ತೋರಿಸುತ್ತದೆ. ಇಡೀ ಸಚಿವ ಸಂಪುಟವೇ ಮೋದಿ ಸ್ವಾಗತಕ್ಕೆಂದು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು ಎಂದು ಕರೆದಿದ್ದಾರೆ.

ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಮೋದಿ, ಕಮಲಾ ಅವರ ಪೂರ್ವಜರು ಬಿಹಾರದ ಬಕ್ಸಾರ್ನವರು ಅವರೂ ಕೂಡ ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು. ಕಾಮನ್ವೆಲ್ತ್ ರಾಷ್ಟ್ರಗಳ ಅಧ್ಯಕ್ಷರಾದ ಮೊದಲ ಮಹಿಳೆ ಕೆರಿಬಿಯನ್ ದೇಶದ ಮೊದಲ ಮಹಿಳಾ ಪ್ರಧಾನಿ. ಪ್ರಧಾನಿ ಮೋದಿ ಅವರು 25 ವರ್ಷಗಳ ಹಿಂದಿನ ತಮ್ಮ ಭೇಟಿಯನ್ನು ನೆನಪಿಸಿಕೊಂಡರು, ಅಂದಿನಿಂದ ಕೆರಿಬಿಯನ್ ದೇಶ ಮತ್ತು ಭಾರತದ ನಡುವಿನ ಸ್ನೇಹ ಹೇಗೆ ಬಲಗೊಂಡಿದೆ ಎಂಬುದನ್ನು ಗಮನಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ