27 ವರ್ಷಗಳ ಹಿಂದೆ ಪ್ರಧಾನಿ ಮೋದಿ ಸ್ವಭಾವ ಹೇಗಿತ್ತು? ಟ್ರಿನಿಡಾಡ್ ಉದ್ಯಮಿ ಮಿತ್ತಲ್ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಮೊದಲ ಬಾರಿಗೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಆದರೆ ಇದು ಅವರ ಎರಡನೇ ಭೇಟಿಯಾಗಿದೆ. 27 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಧಾನಿ ಮೋದಿ ಟ್ರಿನಿಡಾಡ್ನಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದ ವಿಚಾರದ ಕುರಿತು ಉಕ್ಕಿನ ಉದ್ಯಮಿ ಎಂಎಲ್ ಮಿತ್ತಲ್ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜುಲೈ 2ರಿಂದ 10ರವರೆಗೆ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಘಾನಾ ಬಳಿಕ ಎರಡನೇ ಭಾಗವಾಗಿ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ.

ಟ್ರಿನಿಡಾಡ್, ಜುಲೈ 04: ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಧಾನಿಯಾಗಿ ಮೊದಲ ಬಾರಿಗೆ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಮೋದಿಯವರನ್ನು ಸರಳ, ಸಜ್ಜನ ವ್ಯಕ್ತಿ ಎಂದು ಉಕ್ಕಿನ ಉದ್ಯಮಿ ಎಂಎಲ್ ಮಿತ್ತಲ್ ಕೊಂಡಾಡಿದ್ದಾರೆ. ಹಾಗೆಯೇ 1998ರ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ. 27 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಧಾನಿ ಮೋದಿ ಟ್ರಿನಿಡಾಡ್ನಲ್ಲಿರುವ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದ ವಿಚಾರದ ಕುರಿತು ಮಿತ್ತಲ್ ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜುಲೈ 2ರಿಂದ 10ರವರೆಗೆ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಘಾನಾ ಬಳಿಕ ಎರಡನೇ ಭಾಗವಾಗಿ ಟ್ರಿನಿಡಾಡ್ ಮತ್ತು ಟೊಬಾಗೋಗೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಟ್ರಿನಿಡಾಡ್‌ನ ಪೋರ್ಟ್-ಆಫ್-ಸ್ಪೇನ್‌ನಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದರು.
ಆ ಭೇಟಿಯನ್ನು ನೆನಪಿಸಿಕೊಂಡಿರುವ ಉಕ್ಕಿನ ಉದ್ಯಮಿ ಮಿತ್ತಲ್ ಮೋದಿಯವರ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ. ಅಂದು ಮೋದಿ ಮಿತ್ತಲ್ ಅವರ ಮನೆಯಲ್ಲಿ ಉಳಿದಿಕೊಂಡಿದ್ದರಂತೆ. ಮೋದಿಯವರ ಸ್ವಭಾವ ಕಿಂಚಿತ್ತೂ ಬದಲಾಗಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: ಟ್ರಿನಿಡಾಡ್ ಮತ್ತು ಟೊಬಾಗೋದ ಮೊದಲ ಮಹಿಳಾ ಪ್ರಧಾನಿ ಕಮಲಾಗೂ ಭಾರತಕ್ಕೂ ಏನು ನಂಟು?
ಮೋದಿಯವರ ಸರಳತೆ ಹಾಗೂ ಶಿಸ್ತು ಸದಾ ನೆನಪಿನಲ್ಲಿಡುವಂಥದ್ದು, ಮಿತ್ತಲ್ ಅವರ ಮನೆಗೆ ಭೇಟಿ ನೀಡಿದ್ದಾಗ ಅವರು ಮಾಸ್ಟರ್ ಬೆಡ್ರೂಮ್ನಲ್ಲಿ ಮಲಗುವಂತೆ ಮೋದಿಯವರನ್ನು ಕೇಳಿಕೊಂಡಿದ್ದರು, ಅಥವಾ ಹೋಟೆಲ್ ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದರು. ಆದರೆ ಮೋದಿ ಮನೆಯಲ್ಲಿರುವ ಸಣ್ಣ ಕೋಣೆಯನ್ನು ಆರಿಸಿಕೊಂಡಿದ್ದರು. ಅದೇ ಮೋದಿ ಸರಳತೆಗೆ ಒಂದು ಉದಾಹರಣೆ ಎಂದು ಹೇಳಿದ್ದಾರೆ. ಎಸಿ ಮತ್ತು ಅಟ್ಯಾಚ್ಡ್ ಬಾತ್ರೂಮ್ ಇಲ್ಲದ ಸಣ್ಣ ಕೋಣೆ ಅದಾಗಿತ್ತು. ಆದರೆ ಮೋದಿ ಅದನ್ನು ಇಷ್ಟಪಟ್ಟರು ಮತ್ತು ಅವರಿಗೆ ಯಾವುದೇ ಅನನುಕೂಲತೆ ಇಲ್ಲ ಎಂದು ಹೇಳಿದ್ದರು.
ಬೆಳಗ್ಗೆ 5 ಗಂಟೆಗೆ ಎದ್ದು, ಸಿಬ್ಬಂದಿ ಬರುವ ಮೊದಲೇ ತಾವೇ ಚಹಾ ಮಾಡಿ, ಎಲ್ಲರಿಗೂ ಉಪಾಹಾರ ಸಿದ್ಧಪಡಿಸಿದ್ದರು ಎಂದು ಮಿತ್ತಲ್ ಹೇಳುತ್ತಾರೆ. ಆ ಸಮಯದಲ್ಲಿ ಯಾವುದೇ ನಾಯಕರಲ್ಲಿ ಕಾಣದ ಶಿಸ್ತು ಮತ್ತು ನಮ್ರತೆ ಇವರಲ್ಲಿ ಕಂಡಿದ್ದೆ. ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಮಿತ್ತಲ್ ಮೋದಿ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಮೋದಿ ಒಂದು ಸಣ್ಣ ಹಾಸಿಗೆ, ಬಾಟಲಿ ಮತ್ತು ಅದೇ ಸರಳ ಜೀವನ, ಸಾಧಾರಣ ವಸತಿಗೃಹದಲ್ಲಿ ವಾಸಿಸುತ್ತಿರುವುದನ್ನು ನೋಡಿ ಬೆರಗಾಗಿದ್ದೆ ಎಂದಿದ್ದಾರೆ.
ಆಗಸ್ಟ್ 2000 ದಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವು ಪ್ರೇಕ್ಷಕರನ್ನು ಬೆಚ್ಚಿಬೀಳಿಸಿತ್ತು. ಸಮ್ಮೇಳನವು ಟ್ರಿನಿಡಾಡ್ ರಾಜಧಾನಿಯಲ್ಲಿ ನಡೆಯಿತು, ಇದರಲ್ಲಿ ಸಾವಿರಾರು ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಸ್ಥ ಕೆ. ಸುದರ್ಶನ್, ಅಶೋಕ್ ಸಿಂಘಾಲ್, ಬಸ್ದೇವ್ ಪಾಂಡೆ ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
#WATCH | Around 25 years ago, as the national leader of the BJP, PM Narendra Modi visited Trinidad and Tobago. He stayed at the home of industrialist ML Mittal.
ML Mittal recalls, “I first met Narendra Modi ji in New York in 1998… He came with some RSS workers and stayed in my… pic.twitter.com/f5F6lTu9VC
— ANI (@ANI) July 3, 2025
ಹಿಂದೂ ಧರ್ಮ ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳು ಕುರಿತು ನರೇಂದ್ರ ಮೋದಿ ವೇದಿಕೆ ಏರಿದಾಗ, ಗಾಳಿಯಲ್ಲಿ ಶಕ್ತಿಯ ಅಲೆಯಿತ್ತು. ತಂತ್ರಜ್ಞಾನ, ಸಮಾಜ ಮತ್ತು ಸಾಂಸ್ಕೃತಿಕ ಮೌಲ್ಯಗಳ ಕುರಿತು ಅವರ ಸ್ಪಷ್ಟ ಭಾಷಣಗಳು ಎಷ್ಟು ಪ್ರಭಾವಶಾಲಿಯಾಗಿದ್ದವೆಂದರೆ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ “ಅವರು ಸಂಘದ ಸಿಂಹ” ಎಂದು ಹೇಳಿದ್ದರು.
ಆ ಪಿಸುಮಾತಿನಲ್ಲಿ ಬದಲಾವಣೆಯ ಸಂಕೇತ ಅಡಗಿತ್ತು. ಮೋದಿ ಅವರನ್ನು ಕೇವಲ ಸಂಘಟಕರಾಗಿ ಮಾತ್ರವಲ್ಲದೆ ರಾಷ್ಟ್ರೀಯ ಭವಿಷ್ಯವಾಗಿಯೂ ನೋಡಲಾದ ಕ್ಷಣ ಅದು. ಅವರ ಭಾಷಣದ ಪ್ರತಿಧ್ವನಿ ಆ ಸಭಾಂಗಣದಲ್ಲಿ ಮಾತ್ರವಲ್ಲದೆ ಹಿಂದುತ್ವದ ಜಾಗತಿಕ ರಾಜಕೀಯದಲ್ಲಿಯೂ ಕೇಳಿಬಂತು. ಅಮೆರಿಕ, ಆಫ್ರಿಕಾ, ಯುರೋಪ್ ಮತ್ತು ಭಾರತ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಸಾವಿರಾರು ವರ್ಷಗಳ ಹಿಂದಿನಂತೆ ತಂತ್ರಜ್ಞಾನ ಯುಗದಲ್ಲೂ ಹಿಂದೂ ತತ್ವಶಾಸ್ತ್ರವು ಪ್ರಸ್ತುತವಾಗಿದೆ ಎಂದು ಮೋದಿ ಹೇಳಿದರು. ವೈಯಕ್ತಿಕ ಕಾರ್ಯಸೂಚಿಗಳನ್ನು ಬದಿಗಿಟ್ಟು ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಅವರು ನಾಯಕರನ್ನು ಒತ್ತಾಯಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Fri, 4 July 25