ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಟ್ವಿಟರ್ ಖಾತೆಗೆ ಬಂತು ಕುತ್ತು

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಟ್ವಿಟರ್ ಖಾತೆಗೆ ಬಂತು ಕುತ್ತು

ದೇಶದ ಹಲವು ನಾಯಕರು ಸಾಮಾನ್ಯವಾಗಿ ಟ್ವಿಟರ್ ಹಾಗೂ ಫೇಸ್​ಬುಕ್​ ಹೆಚ್ಚಾಗಿ ಬಳಸುತ್ತಾರೆ. ಕಾರಣ ಅವರು ಮಾಡುವ ಕಮೆಂಟುಗಳು. ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ನಾಯಕರ ಅಭಿಪ್ರಾಯಗಳನ್ನು ತಿಳಿಯಲು ಇದು ಸಹಾಯಕವಾಗಿರುತ್ತದೆ. ಮಂಗಳವಾರ ಟ್ವಿಟರ್​ನ ಚೀಫ್ ಎಕ್ಸಿಕ್ಯೂಟಿವ್ ಜಾಕ್ ಡಾರ್ಸೆ ಮಾತನಾಡಿ, ಸಾಮಾಜಿಕ ಜಾಲತಾಣವಾದ ಟ್ವಿಟರ್ನಿಂದ ಟ್ರಂಪ್ ಅವರ ಟ್ವೀಟ್ಗಳನ್ನ ತೆಗೆಯಲಾಗುವುದು ಎಂದು ಎಚ್ಚರಿಸಿದ್ದಾರೆ. ನಾವು ಕೆಲವು ಪಾಲಿಸಿಗಳನ್ನು ದೇಶದ ನಾಯಕರಿಗೆಂದೇ ನೀಡಿದ್ದೇವೆ. ಒಂದು ವೇಳೆ ಟ್ವಿಟ್ನ ನಿಯಮಗಳನ್ನು ಪಾಲಿಸದಿದ್ದರೆ ಮತ್ತು ನಮ್ಮ ನಿಯಮಕ್ಕೆ ಧಕ್ಕೆ ಉಂಟಾದಲ್ಲಿ […]

sadhu srinath

|

Nov 18, 2020 | 1:30 PM

ದೇಶದ ಹಲವು ನಾಯಕರು ಸಾಮಾನ್ಯವಾಗಿ ಟ್ವಿಟರ್ ಹಾಗೂ ಫೇಸ್​ಬುಕ್​ ಹೆಚ್ಚಾಗಿ ಬಳಸುತ್ತಾರೆ. ಕಾರಣ ಅವರು ಮಾಡುವ ಕಮೆಂಟುಗಳು. ರಾಜಕೀಯ ಅಥವಾ ಸಾಮಾಜಿಕ ವಿಷಯಗಳ ಬಗ್ಗೆ ನಾಯಕರ ಅಭಿಪ್ರಾಯಗಳನ್ನು ತಿಳಿಯಲು ಇದು ಸಹಾಯಕವಾಗಿರುತ್ತದೆ. ಮಂಗಳವಾರ ಟ್ವಿಟರ್​ನ ಚೀಫ್ ಎಕ್ಸಿಕ್ಯೂಟಿವ್ ಜಾಕ್ ಡಾರ್ಸೆ ಮಾತನಾಡಿ, ಸಾಮಾಜಿಕ ಜಾಲತಾಣವಾದ ಟ್ವಿಟರ್ನಿಂದ ಟ್ರಂಪ್ ಅವರ ಟ್ವೀಟ್ಗಳನ್ನ ತೆಗೆಯಲಾಗುವುದು ಎಂದು ಎಚ್ಚರಿಸಿದ್ದಾರೆ. ನಾವು ಕೆಲವು ಪಾಲಿಸಿಗಳನ್ನು ದೇಶದ ನಾಯಕರಿಗೆಂದೇ ನೀಡಿದ್ದೇವೆ. ಒಂದು ವೇಳೆ ಟ್ವಿಟ್ನ ನಿಯಮಗಳನ್ನು ಪಾಲಿಸದಿದ್ದರೆ ಮತ್ತು ನಮ್ಮ ನಿಯಮಕ್ಕೆ ಧಕ್ಕೆ ಉಂಟಾದಲ್ಲಿ ಅಂತಹ ಟ್ವೀಟ್ಗಳನ್ನು ತೆಗೆಯುವುದಾಗಿ ತಿಳಿಸಿದರು.

ಜನವರಿ ತಿಂಗಳಲ್ಲಿ ಟ್ರಂಪ್ ಅವರು ಅಧಿಕಾರದಿಂದ ಹೊರಬಂದಾಗ ಕಂಪನಿಯು ಈ ನೀತಿ ವಿನಾಯಿತಿಗಳನ್ನು ಅವರಿಗೆ ನೀಡುವುದಿಲ್ಲ. ಟ್ರಂಪ್ ಅವರು ಮಾಡಿರುವ ಚುನಾವಣೆಗೆ ಎಸಗಿದ ವಂಚನೆಗೆ ಸಂಬಂಧಿಸಿದ ಟ್ವೀಟಗಳನ್ನು ತೆಗೆಯಲು ಸೂಚನೆಯನ್ನು ನೀಡಿದ್ದರೂ ಅವರು ತೆಗೆದುಹಾಕಿಲ್ಲ ಎಂದು ಜಾಕ್ ಡಾರ್ಸೆ ಹೇಳಿದರು.

ಹೆಚ್ಚಿನ ಟ್ವಿಟರ್ ಬಳಕೆದಾರರು ಬೆದರಿಕೆಗಳು, ಕಿರುಕುಳ, ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ನಿಷೇಧಿಸುವ ನಿಯಮಗಳನ್ನು ಅನುಸರಿಸಬೇಕು. ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ, ಅವರ ಟ್ವೀಟ್ಗಳನ್ನು ಅಳಿಸಬೇಕಾಗುತ್ತದೆ ಅಥವಾ ತಾತ್ಕಾಲಿಕವಾಗಿ ನಿಷೇಧಿಸಲಾಗುತ್ತದೆ.

ಟ್ವಿಟರ್ ಸೇವೆಯ ಒಂದು ನಿರ್ದಿಷ್ಟ ಗುರಿ ಎಂದರೆ, ಜನರು ತಮ್ಮ ನಾಯಕರಿಗೆ ಬಹಿರಂಗವಾಗಿ ಮತ್ತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ವೇದಿಕೆಯನ್ನು ಸೃಷ್ಟಿಸುತ್ತವೆ. ಟ್ವಿಟರ್ ತನ್ನದೇ ಆದ ನಿರ್ದಿಷ್ಟ ರೂಲ್ಸ್ ಹಾಗೂ ರೆಗ್ಯುಲೇಷನ್ಸ್ಗಳನ್ನು ಹೊಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಟ್ವೀಟ್ಗಳಿಗೆ ಪ್ರವೇಶ ಹೊಂದಲು ಸಾರ್ವಜನಿಕರ ಹಿತದೃಷ್ಟಿಯಿಂದ ಅವಕಾಶ ಕೊಟ್ಟಿದೆ ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಡಾರ್ಸೆ ಅವರು ಸಾಮಾಜಿಕ ಜಾಲತಾಣದ ಕುರಿತಾಗಿ ನಡೆದ ಸೆನೆಟ್ ಪರಿಶೀಲನಾ ಸಭೆ (senate hearing)ಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇದೇ ಸೆನೆಟ್ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಫೇಸ್ಬುಕ್ನ ಮಾರ್ಕ ಜುಕರ್ಬರ್ಗ ಅವರು ಟ್ರಂಪ್ ಅಧ್ಯಕ್ಷ ಸ್ಥಾನದಿಂದ ಇಳಿದರೂ ತಮ್ಮ ಫೇಸ್ ಬುಕ್ ಅವರ ಖಾತೆಯಲ್ಲಿ ಯಾವ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಸೆನೆಟ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸೆನೆಟರ್ ಡೊರಕೆ ಮಾತನಾಡಿ, ಇದು ಕಮ್ಯುನಿಕೇಷನ್ ಡಿಸೆನ್ಸಿ ಆ್ಯಕ್ಟ್ಗೆ ಸಂಬಂಧಿಸಿದ ವಿಷಯವಾಗಿದೆ. ಸೆಕ್ಷನ್ 230 ಕಾನೂನಿನ ಪ್ರಕಾರ ಸಾಮಾಜಿಕ ಜಾಲತಾಣವನ್ನು ಬಳಕೆದಾರರ ಪೋಸ್ಟ್ನಿಂದ ಹೊರತೆಗೆಯಲಾಗುವುದು. ನ್ಯಾಯಾಂಗ ಸಮಿತಿಯ ಚೇರ್ಮನ್ ಲಾಂಡ್ಸೆ ಗ್ರಹಾಂ, ಸೆಕ್ಷನ್ 230 ಇಂದೇ ಜಾರಿಗೊಳಿಸುವುದಾಗಿ ತಿಳಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada