ಕ್ರೂರಿ ಕೊರೊನಾದಿಂದ ಅಮೆರಿಕ ಪರದಾಟ, ಫ್ಲಾರಿಡಾದಲ್ಲಿ ಕಾಡ್ಗಿಚ್ಚಿನ ಕಾಟ

ಅತ್ತ ಕೊರೊನಾ ವಿರುದ್ಧ ಹೋರಾಡಲು ಅಮೆರಿಕ ಪರದಾಡುತ್ತಿರುವ ಸಂದರ್ಭದಲ್ಲೇ, ಫ್ಲಾರಿಡಾದಲ್ಲಿ ಹಬ್ಬಿರುವ ಬೆಂಕಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶವನ್ನ ಭಸ್ಮ ಮಾಡಿದೆ. ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಸೋಂಕಿನ ಜೊತೆ ಟ್ರಂಪ್​ಗೆ ಹೊಸ ತಲೆನೋವು ಶುರುವಾಗಿದೆ. 13 ಲಕ್ಷ ಜನರಿಗೆ ‘ಕೊರೊನಾ’: ಅಮೆರಿಕದಲ್ಲಿ ನಿನ್ನೆಯೂ ಕೂಡ ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿನಿಂದ ಜೀವ ಬಿಟ್ಟಿದ್ದಾರೆ. ಈಗಾಗ್ಲೇ 78 ಸಾವಿರ ಅಮೆರಿಕನ್ನರು ಕೊರೊನಾ ಸೋಂಕಿನಿಂದ ಉಸಿರು ಚೆಲ್ಲಿದ್ರೆ 13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು […]

ಕ್ರೂರಿ ಕೊರೊನಾದಿಂದ ಅಮೆರಿಕ ಪರದಾಟ, ಫ್ಲಾರಿಡಾದಲ್ಲಿ ಕಾಡ್ಗಿಚ್ಚಿನ ಕಾಟ
Follow us
ಸಾಧು ಶ್ರೀನಾಥ್​
|

Updated on: May 09, 2020 | 8:32 AM

ಅತ್ತ ಕೊರೊನಾ ವಿರುದ್ಧ ಹೋರಾಡಲು ಅಮೆರಿಕ ಪರದಾಡುತ್ತಿರುವ ಸಂದರ್ಭದಲ್ಲೇ, ಫ್ಲಾರಿಡಾದಲ್ಲಿ ಹಬ್ಬಿರುವ ಬೆಂಕಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶವನ್ನ ಭಸ್ಮ ಮಾಡಿದೆ. ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಸೋಂಕಿನ ಜೊತೆ ಟ್ರಂಪ್​ಗೆ ಹೊಸ ತಲೆನೋವು ಶುರುವಾಗಿದೆ.

13 ಲಕ್ಷ ಜನರಿಗೆ ‘ಕೊರೊನಾ’: ಅಮೆರಿಕದಲ್ಲಿ ನಿನ್ನೆಯೂ ಕೂಡ ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿನಿಂದ ಜೀವ ಬಿಟ್ಟಿದ್ದಾರೆ. ಈಗಾಗ್ಲೇ 78 ಸಾವಿರ ಅಮೆರಿಕನ್ನರು ಕೊರೊನಾ ಸೋಂಕಿನಿಂದ ಉಸಿರು ಚೆಲ್ಲಿದ್ರೆ 13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಅಟ್ಯಾಕ್ ಆಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ.

ಲ್ಯಾಟಿನ್ ಅಮೆರಿಕ ಪರಿಸ್ಥಿತಿ ಭೀಕರ: ಲ್ಯಾಟಿನ್ ಅಮೆರಿಕದಲ್ಲೂ ಕೊರೊನಾ ಭೀಕರವಾಗಿ ಹಬ್ಬಿದ್ದು, ಬ್ರೆಜಿಲ್​ನಲ್ಲಿ ಸುಮಾರು 10 ಸಾವಿರ ಸೋಂಕಿತರು ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ನಿನ್ನೆ ಕೂಡ 800ಕ್ಕೂ ಹೆಚ್ಚು ಬ್ರೆಜಿಲ್ ನಿವಾಸಿಗಳನ್ನ ಕೊರೊನಾ ಬಲಿಪಡೆದಿದೆ. ಸರಿಯಾದ ಚಿಕಿತ್ಸೆ ಸಿಗದೆ ಸಾವಿರಾರು ಜನ ಬಳಲುವಂತಾಗಿದೆ.

ಚೀನಿ ಪ್ರಜೆಗಳ ಕಿರಿಕ್: ನೇಪಾಳದ ಕಠ್ಮಂಡುವಿನಲ್ಲಿ ಲಾಕ್​​​ಡೌನ್ ನಿಯಮ ಉಲ್ಲಂಘಿಸಿದ ಚೀನಿ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ. ಲಾಕ್​​​ಡೌನ್ ರೂಲ್ಸ್ ಬ್ರೇಕ್ ಮಾಡಿದ್ದು ಅಲ್ಲದೇ ಚೀನಿಯರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ನೇಪಾಳ ಪೊಲೀಸರು ಲಾಠಿಚಾರ್ಜ್ ಮಾಡಿ ಎಲ್ಲರನ್ನೂ ಅರೆಸ್ಟ್ ಮಾಡಿದ್ದಾರೆ.

ಪುಟಿನ್​ಗೆ ಹೊಸ ತಲೆನೋವು..! ರಷ್ಯಾದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಒಂದೇ ಸಮನೆ ಹೆಚ್ಚಾಗುತ್ತಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಜನಕ್ಕೆ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಮೊದಲು ಕೊರೊನಾ ಭೀತಿಯಿಂದ ರಷ್ಯಾ ಲಾಕ್​ಡೌನ್ ಆಗಿತ್ತು. ಆದ್ರೆ ಮತ್ತೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದ ಪರಿಣಾಮ ಭೀಕರ ಪರಿಸ್ಥಿತಿ ಎದುರಾಗಿದೆ.

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು