ಮಗನಿಗಾಗಿ ಡೀಪ್​ ಫ್ರೈಡ್​ ಚಿಕನ್​​ ಆರ್ಡರ್ ಮಾಡಿದ ಮಹಿಳೆ; ಬಾಕ್ಸ್ ತೆರೆದಾಗ ಅಲ್ಲಿದ್ದಿದ್ದು ಫ್ರೈಡ್​ ಹ್ಯಾಂಡ್​ ಟವೆಲ್​ !

| Updated By: Lakshmi Hegde

Updated on: Jun 07, 2021 | 3:21 PM

ಪೆರೆಜ್​ ಪೋಸ್ಟ್ ಮಾಡಿದ ವಿಡಿಯೋ ಇಲ್ಲಿಯವರೆಗೆ 2.6 ಮಿಲಿಯನ್​​ಗಳಷ್ಟು ವೀವ್ಸ್​ ಪಡೆದಿದೆ. ಮೇಲೆಲ್ಲೆ ಫ್ರೈಡ್​ ಹಿಟ್ಟು ಇರುವ, ಅಡಿಯಲ್ಲಿ ನೀಲಿ ಬಣ್ಣದ ಟವೆಲ್​ ಇರುವುದನ್ನು ಇದರಲ್ಲಿ ನೋಡಬಹುದು. ಇದನ್ನು ನೋಡಿದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಗನಿಗಾಗಿ ಡೀಪ್​ ಫ್ರೈಡ್​  ಚಿಕನ್​​ ಆರ್ಡರ್ ಮಾಡಿದ ಮಹಿಳೆ; ಬಾಕ್ಸ್ ತೆರೆದಾಗ ಅಲ್ಲಿದ್ದಿದ್ದು ಫ್ರೈಡ್​ ಹ್ಯಾಂಡ್​ ಟವೆಲ್​ !
ಫ್ರೈಡ್​ ಟವೆಲ್​​
Follow us on

ಮಹಿಳೆಯೊಬ್ಬರು ಆನ್​​ಲೈನ್​​ನಲ್ಲಿ ಡೀಪ್​ ಫ್ರೈಡ್​ ಚಿಕನ್​ ಆರ್ಡರ್​ ಮಾಡಿದ್ದರು. ಆದರೆ ನಂತರ ಬಂದ ತಿನಿಸನ್ನು ನೋಡಿ ಅಕ್ಷರಶಃ ಕಂಗಾಲಾಗಿದ್ದಾರೆ. ಪಿಲಿಫೈನ್ಸ್​​ನ ಮಹಿಳೆಗೆ ವಿಶಿಷ್ಟ ಅನುಭವವೊಂದು ಆಗಿದೆ. ಖ್ಯಾತ ಫಾಸ್ಟ್​ಫುಡ್​ ರೆಸ್ಟೋರೆಂಟ್​ ಜೊಲ್ಲಿಬೀಯಿಂದ ಈ ಫ್ರೈಡ್​ ಚಿಕನ್​ ಆರ್ಡರ್​ ಮಾಡಿದ್ದರು. ಆದರೆ ಅದು ಮನೆಗೆ ಡೆಲಿವರಿ ಆದ ಬಳಿಕ ಬಾಕ್ಸ್​ ತೆರೆದಾಗ ಬರೀ ನಿರಾಸೆಯಾಗಿದ್ದಷ್ಟೇ ಅಲ್ಲ, ಶಾಕ್​ ಆಯಿತು ಎಂದೂ ಹೇಳಿಕೊಂಡಿದ್ದಾರೆ.

ಫಿಲಿಪೈನ್ಸ್​​ನ ಅಲೆಕ್​ ಪೆರೆಜ್​ ಎಂಬುವರಿಗೆ ಈ ಅನುಭವ ಆಗಿದೆ. ಚಿಕನ್​ ಜಾಯ್​ ಊಟ ಆರ್ಡರ್​ ಮಾಡಿದ್ದ ಆದರೆ ಬಂದಿದ್ದು ‘ಫ್ರೈಡ್​ ಟವೆಲ್​’ ಎಂದು ಪೆರೆಜ್​ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಣ್ಣ ಟವೆಲ್​​ನ್ನು ಸೇಮ್​ ಫ್ರೈಡ್​ ಚಿಕನ್​ನಂತೆ ಮಾಡಿ ಕಳಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಪೆರೆಜ್​ ಅವರಿಗೆ ಆನ್​​ಲೈನ್​ನಲ್ಲಿ ಬಂದ ಡೀಪ್​ ಫ್ರೈಡ್​ ಟವೆಲ್​​ನ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಫುಲ್​ ಖುಷಿಯಿಂದ ಬಾಕ್ಸ್ ತೆಗೆದೆ. ಆದರೆ ಮೇಲಿಂದ ನೋಡಿದರೆ ಅದು ಫ್ರೈಡ್​ ಚಿಕನ್​​ನಂತೆ ಇತ್ತು. ಅದನ್ನು ಕಟ್​ ಮಾಡಲು ಮುಂದಾದಾಗ ಅದ್ಯಾಕೋ ಬೇರೆ ತರ ಇದೆ ಎನ್ನಿಸಿತು. ಬಿಡಿಸಿ ನೋಡಿದರೆ ಅಲ್ಲೊಂದು ಹ್ಯಾಂಡ್​ಟವೆಲ್​ ಇತ್ತು ಎಂದು ಪೆರೆಜ್​ ವಿವರಿಸಿದ್ದಾರೆ. ನನ್ನ ಮಗನಿಗಾಗಿ ಚಿಕನ್ ಆರ್ಡರ್ ಮಾಡಿದ್ದೆ. ಜೊಲ್ಲಿಬೀ ರೆಸ್ಟೋರೆಂಟ್​​ನಿಂದ ಗ್ರಾಬ್​​ನಲ್ಲಿ ಆರ್ಡರ್​ ಮಾಡಿದ್ದಾಗಿತ್ತು ಎಂದೂ ತಮ್ಮ ಫೇಸ್​​ಬುಕ್​​ನಲ್ಲಿ ಹೇಳಿಕೊಂಡಿದ್ದಾರೆ.

ಪೆರೆಜ್​ ಪೋಸ್ಟ್ ಮಾಡಿದ ವಿಡಿಯೋ ಇಲ್ಲಿಯವರೆಗೆ 2.6 ಮಿಲಿಯನ್​​ಗಳಷ್ಟು ವೀವ್ಸ್​ ಪಡೆದಿದೆ. ಮೇಲೆಲ್ಲೆ ಫ್ರೈಡ್​ ಹಿಟ್ಟು ಇರುವ, ಅಡಿಯಲ್ಲಿ ನೀಲಿ ಬಣ್ಣದ ಟವೆಲ್​ ಇರುವುದನ್ನು ಇದರಲ್ಲಿ ನೋಡಬಹುದು. ಇದನ್ನು ನೋಡಿದ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದ್ಯಾರು ಇಷ್ಟು ತಾಳ್ಮೆಯಿಂದ ಸಿದ್ಧ ಮಾಡಿದ್ದಾರೋ ಗೊತ್ತಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಹಾಗೇ, ನಿಜಕ್ಕೂ ಇದೊಂದು ಅಸಹ್ಯ ಎಂದೂ ಮತ್ತೊಬ್ಬರು ಹೇಳಿದ್ದಾರೆ. ಈ ವಿಷಯವನ್ನು ಜೊಲ್ಲಿಬೀ ಫುಡ್​ ಕಾರ್ಪೋರೇಶನ್​ ಗಮನಕ್ಕೂ ತರಲಾಗಿದ್ದು,ಇಂಥ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ನೌಕರರನ್ನು ವಜಾ ಮಾಡುವುದಾಗಿ ಜೊಲ್ಲಿಬೀ ಹೇಳಿದೆ ಎಂದು ಮೆಟ್ರೋ ನ್ಯೂಸ್ ವರದಿ ಮಾಡಿದೆ.

Published On - 3:15 pm, Mon, 7 June 21