ಇಂದು (ಜೂನ್ 3) ತಾರೀಕು ವಿಶ್ವ ಸೈಕಲ್ ಅಥವಾ ಬೈಸಿಕಲ್ ದಿನವನ್ನು ಆಚರಿಸಲಾಗುತ್ತಿದೆ. ಸೈಕಲ್ ತುಳಿಯುವುದರಿಂದ ಎಲ್ಲಾ ವಯಸ್ಸಿನವರ ಆರೋಗ್ಯ ವೃದ್ಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಸಂಸ್ಥೆ ಗೊತ್ತುಪಡಿಸಿದ ಈ ದಿನವನ್ನು ವಿಶ್ವ ಸೈಕಲ್ ದಿನ ಎಂದು ಆಚರಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪ್ರಯಾಣದ ಜತೆ ನಮ್ಮ ಉತ್ತಮ ಆರೋಗ್ಯವನ್ನು ಪಡೆಯಲು ಇರುವ ಒಂದೇ ಒಂದು ವಾಹನವಿದು.
ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಎಲ್ಲರೂ ಮನೆಯಲ್ಲಿಯೇ ಸಿಲುಕಿಕೊಂಡಿರುವ ಪರಿಸ್ಥಿತಿ ಎದುರಾಯಿತು. ಹೀಗಿರುವಾಗ ಜನರು ಮಾನಸಿಕ ಸಮಸ್ಯೆ, ಕೀಲು ನೋವು, ಬೊಜ್ಜು ಉಂತಾದ ಸಮಸ್ಯೆಗಳಿಗೆ ಒಳಗಾಗಿರಬಹುದು. ದೇಹದ ತೂಕವೂ ಹೆಚ್ಚಾಗಿರಬಹುದು. ಹೀಗಿರುವಾಗ ಇನ್ನೇಕೆ ತಡ? ನಿಮ್ಮ ಮನೆಯ ಅಂಗಳದಲ್ಲಿಯೇ ಸೈಕಲ್ ತುಳಿದರೂ ಸಾಕು. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಹೊರಬರಬಹುದು.
ವಿಶ್ವ ಸೈಕಲ್ ದಿನವನ್ನು ಏಕೆ ಆಚರಿಸಲಾಗುತ್ತದೆ?
ಕಡಿಮೆ ಪರಿಸರ ಮಾಲಿನ್ಯ
ಸೈಕಲ್ ಯಾವುದೇ ವಿಷಕಾರಕ ಅನಿಲವನ್ನು ಹೊರಸೂಸುವುದಿಲ್ಲ. ಸೈಕಲ್ ಪರಿಸರ ಸ್ನೇಹಿ. ದೇಹದ ಆರೋಗ್ಯವನ್ನೂ, ಮಾನಸಿಕ ಸದೃಢತೆಯ ಜತೆಗೆ ಸುತ್ತಮುತ್ತಲಿನ ವಾತಾವಣಕ್ಕೂ ಯಾವುದೇ ಹಾನಿ ಮಾಡದೇ ಸುರಕ್ತಿತವಾಗಿ ಪ್ರಯಾಣ ಕೈಗೊಳ್ಳಬಹುದಾದ ಸಾಧನವೇ ಸೈಕಲ್.
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ
ಸೈಕಲ್ ತುಳಿಯುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ದೇಹದ ಎಲ್ಲಾ ಸ್ನಾಯುಗಳ ಸದೃಢತೆಗೆ ಉತ್ತ ಮಾರ್ಗವೆಂದರೆ ವಾಕಿಂಗ್ ಮತ್ತು ಸೈಕಲಿಂಗ್. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತೀರಿ ಎಂದಾದರೆ ಒಮ್ಮೆ ಸೈಕ್ಲಿಂಗ್ ಮಾಡಿ, ಮಾನಸಿಕ ನೆಮ್ಮದಿ ಪಡೆಯಲು ಸೈಕ್ಲಿಂಗನ್ನಷ್ಟು ಒಳ್ಳೆಯ ಮಾರ್ಗ ಮತ್ತೊಂದಿಲ್ಲ.
ಹಣವನ್ನು ಉಳಿಸುತ್ತದೆ
ಸೈಕ್ಲಿಂಗ್, ಉಚಿತ ಹಾಗೂ ಒತ್ತಡ ರಹಿತ ಪ್ರಯಾಣವಾಗಿದೆ. ಸೈಕಲ್ ಖರೀದಿಸುವ ಖರ್ಚು ಬಿಟ್ಟರೆ ಇನ್ನಿತರ ದೊಡ್ಡ ಖರ್ಚು ಯಾವುದೂ ಇಲ್ಲ. ಯಾವುದೇ ಇಂಧನದ ಬಳಕೆ ಇಲ್ಲದಿರುವುದರಿಂದ ಅದಕ್ಕೊಂದಿಷ್ಟು ಹಣ ಸುರಿಯುವ ಜಂಜಾಟವಿರುವುದಿಲ್ಲ. ದಿನವಿಡೀ ಚಟುವಟಿಕೆಯಿಂದಿರಲು ಹಾಗೂ ಮಾನಸಿಕ ಸದೃಢತೆಯ ಜತೆ ನೆಮ್ಮದಿ ಕಂಡುಕೊಳ್ಳಲು ಸೈಕಲಿಂಗ್ ಅತ್ಯತ್ತಮ ಮಾರ್ಗವಾಗಿದೆ.
ಕೇವಲ ಇವಿಷ್ಟೇ ಅಲ್ಲದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಮಹತ್ವದ್ದಾಗಿದೆ. ಹೀಗಿರುವಾಗ ಸೈಕಲಿಂಗ್ನಿಂದ ಏನೇನು ಪ್ರಯೋಜನಗಳು ಎಂಬ ಕುರಿತಾಗಿ ತಿಳಿಯೋಣ.
* ತೂಕ ನಿರ್ವಹಣೆಗೆ ಸಹಾಯಕಾರಿ
* ಸ್ನಾಯುಗಳ ಬಲ ಹೆಚ್ಚಿಸಿಕೊಳ್ಳಬಹುದು
* ದೇಹದ ಕೊಬ್ಬು ಕರಗಿಸುತ್ತದೆ
* ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು
* ದಿನವಿಡೀ ಚೈತನ್ಯದಿಂದಿರಲು ಸಹಾಯಕ
ಇದನ್ನೂ ಓದಿ:
Published On - 8:38 am, Thu, 3 June 21