ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ.
ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ.
ಗಣಿ ಚಟುವಟಿಕೆಯ ಮುಕ್ತಾಯವನ್ನು ಸೂಚಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಗೈಲ್ ಉದ್ಯೋಗಿಗಳು ಮತ್ತು ಸ್ಥಳೀಯ ಭೂಮಾಲೀಕರು ಭಾಗವಹಿಸಿದರು. 37 ವರ್ಷ ಪುರಾತನವಾದ ಗಣಿಯನ್ನು ಸಂಪೂರ್ಣವಾಗಿ ಬಂದ್ ಮಾಡಲು ಐದು ವರ್ಷಗಳು ತೆಗೆದುಕೊಳ್ಳುಲಿದೆ ಎಂದು ಕಂಪನಿ ತಿಳಿಸಿದೆ.
Published On - 6:47 pm, Wed, 4 November 20