ಇಂದು ವಿಶ್ವ ಜನಸಂಖ್ಯೆ 800 ಕೋಟಿ ದಾಟುವ ಸಾಧ್ಯತೆ: ಇನ್ನೊಂದು ವರ್ಷದಲ್ಲಿ ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚಾಗಲಿದೆ

| Updated By: ಆಯೇಷಾ ಬಾನು

Updated on: Nov 15, 2022 | 7:25 AM

ವಿಶ್ವ ಜನಸಂಖ್ಯಾ ದಿನದಂದು ಸೋಮವಾರ ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟ್ ವರದಿಯು ಜಾಗತಿಕ ಜನಸಂಖ್ಯೆಯು 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಇಂದು ವಿಶ್ವ ಜನಸಂಖ್ಯೆ 800 ಕೋಟಿ ದಾಟುವ ಸಾಧ್ಯತೆ: ಇನ್ನೊಂದು ವರ್ಷದಲ್ಲಿ ಭಾರತದ ಜನಸಂಖ್ಯೆ ಚೀನಾಕ್ಕಿಂತಲೂ ಹೆಚ್ಚಾಗಲಿದೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಭಾರತ ಮೊದಲ ಸ್ಥಾನಕ್ಕೆ ಏರುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಈ ವರ್ಷದ ವಿಶ್ವ ಜನಸಂಖ್ಯಾ ದಿನದಂದು(World Population Day) ವಿಶ್ವಸಂಸ್ಥೆ(United Nations) ಬಿಡುಗಡೆ ಮಾಡಿದ ವರದಿಯಲ್ಲಿ ವಿಶ್ವದ ಜನಸಂಖ್ಯೆಯು ನ.15, 2022ರಂದು 8 ಶತಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕಾರ 2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕೆ ವಿಶ್ವದ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶವಾಗಲಿದೆ. ಇದು ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸುತ್ತದೆ.

ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ, 2050 ರಲ್ಲಿ 9.7 ಶತಕೋಟಿ ಮತ್ತು 2080 ರಲ್ಲಿ ಸುಮಾರು 10.4 ಶತಕೋಟಿ ಬೆಳೆಯಬಹುದು. 2100ರವರೆಗೆ ಅದೇ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 2022 ರ ಜನವರಿಯಿಂದ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.62 ಕೋಟಿ, ಕಳೆದ 75 ವರ್ಷಗಳಲ್ಲಿ ಇದೇ ಹೆಚ್ಚು

ವಿಶ್ವ ಜನಸಂಖ್ಯಾ ದಿನದಂದು ಸೋಮವಾರ ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟ್ ವರದಿಯು ಜಾಗತಿಕ ಜನಸಂಖ್ಯೆಯು 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 1960 ರ ದಶಕದ ಆರಂಭದಲ್ಲಿ ಒಂದು ಉತ್ತುಂಗದ ನಂತರ, ವಿಶ್ವದ ಜನಸಂಖ್ಯೆ ಬೆಳವಣಿಗೆಯ ದರವು ದಿಢೀರ್ ಕಡಿಮೆಯಾಗಿದೆ. ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ 1962 ರಿಂದ 1965ರ ವರೆಗೆ ಗರಿಷ್ಠ ಶೇ. 2.1 ಇತ್ತು. ಅದು 2020 ರಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಾಗಿದೆ. 2050ರ ವೇಳೆಗೆ ಆ ಅಂಕಿಅಂಶವು ಸುಮಾರು ಶೇ. 0.5ಕ್ಕೆ ಕುಸಿಯಬಹುದು. ಏಕೆಂದರೆ ಫಲವತ್ತತೆ ದರಗಳಲ್ಲಿನ ನಿರಂತರ ಕುಸಿತ ಜನಸಂಖ್ಯೆ ಬೆಳವಣಿಗೆ ದರ ಕಡಿಮೆಯಾಗಲು ಕಾರಣವಾಗಿದೆ ಎಂದಿದೆ.

2022 ರಲ್ಲಿ, ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳು ಏಷ್ಯಾದಲ್ಲಿವೆ. ಅವುಗಳೆಂದರೆ ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ 2.3 ಶತಕೋಟಿ ಜನರಿದ್ದು ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ 2.1 ಶತಕೋಟಿ ಜನರಿದ್ದಾರೆ. ಚೀನಾ ಮತ್ತು ಭಾರತ, ತಲಾ 1.4 ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ. 2050 ರವರೆಗಿನ ಜಾಗತಿಕ ಜನಸಂಖ್ಯೆಯ ಯೋಜಿತ ಹೆಚ್ಚಳದ ಅರ್ಧಕ್ಕಿಂತ ಹೆಚ್ಚಿನವು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ. ವಿಶ್ವದ ಅತಿದೊಡ್ಡ ದೇಶಗಳ ನಡುವಿನ ವಿಭಿನ್ನ ಬೆಳವಣಿಗೆ ದರಗಳು ಗಾತ್ರದ ಮೂಲಕ ತಮ್ಮ ಶ್ರೇಯಾಂಕವನ್ನು ಮರು-ಕ್ರಮಗೊಳಿಸುತ್ತವೆ ಎಂದಿದೆ.