ವಿಶ್ವದ ಅತ್ಯಂತ ಎತ್ತರದ ಕುದುರೆ ಎನ್ನಿಸಿಕೊಂಡಿದ್ದ ಬಿಗ್ ಜೇಕ್ ಮೃತಪಟ್ಟಿದೆ. ಅದಕ್ಕೆ 20 ವರ್ಷ ವಯಸ್ಸಾಗಿತ್ತು. ಯುಎಸ್ನ ವಿಸ್ಕಾನ್ಸಿನ್ನ ಪೊಯೆನೆಟ್ನಲ್ಲಿರುವ ಸ್ಮೋಕಿ ಹೊಲೋ ಫಾರ್ಮ್ನಲ್ಲಿ ಇತ್ತು. ಬಿಗ್ ಜೇಕ್ ಮೃತಪಟ್ಟಿದ್ದನ್ನು ಫಾರ್ಮ್ನ ಮಾಲೀಕ ಜೆರಿ ಗಿಲ್ಬರ್ಟ್ ಪತ್ನಿ ವ್ಯಾಲಿಸಿಯಾ ಗಿಲ್ಬರ್ಟ್ ದೃಢಪಡಿಸಿದ್ದಾರೆ. ಎರಡು ವಾರಗಳ ಹಿಂದೆಯೇ ಕುದುರೆ ಮೃತಪಟ್ಟಿದ್ದಾಗಿ ಹೇಳಿರುವ ವ್ಯಾಲಿಸಿಯಾ ಅದು ಸತ್ತ ನಿಖರ ದಿನಾಂಕವನ್ನು ತಿಳಿಸಲು ಹಿಂದೇಟು ಹಾಕಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ.
ಬಿಗ್ ಜೇಕ್ ಮೃತಪಟ್ಟಿದ್ದು ನಮ್ಮ ಕುಟುಂಬಕ್ಕೆ ಅತ್ಯಂತ ದುಃಖ ತಂದ ವಿಚಾರವಾಗಿದೆ. ಅದನ್ನು ಪದೇಪದೆ ನೆನಪಿಸಿಕೊಳ್ಳಲು ನಾವು ಇಷ್ಟಪಡುವುದಿಲ್ಲ ಎಂದು ವ್ಯಾಲಿಸಿಯಾ ತಿಳಿಸಿದ್ದಾರೆ. ಬಿಗ್ ಜೇ ಕುದುರೆ 6 ಅಡಿ 10 ಇಂಚು ಅಂದರೆ ಸುಮಾರು 201 ಮೀಟರ್ ಎತ್ತರ ಇತ್ತು. 1,136 ಕೆಜಿ ತೂಕವಿತ್ತು. ವಿಶ್ವದ ಅತ್ಯಂತ ಎತ್ತರದ ಕುದುರೆ ಎಂದು 2020ರಲ್ಲಿ ಗಿನ್ನೀಸ್ ವಿಶ್ವದಾಖಲೆ ಸೃಷ್ಟಿಸಿತ್ತು. ಇದರ ಬಗ್ಗೆ ಮಾತನಾಡಿದ ಸ್ಮೋಕಿ ಹೊಲೋ ಫಾರ್ಮ್ನ ಮಾಲೀಕ ಬಿಗ್ ಜೇಕ್ ಒಬ್ಬ ಸೂಪರ್ ಸ್ಟಾರ್. ಇದು ಹುಟ್ಟಿದ್ದು ನೆಬ್ರಾಸ್ಕಾದಲ್ಲಿ ಮತ್ತು ಹುಟ್ಟುವಾಗಲೇ 109 ಕೆಜಿ ತೂಕ ಇತ್ತು. ಎತ್ತರಕ್ಕೆ, ದಷ್ಟಪುಷ್ಟವಾಗಿದ್ದ ಈ ಪ್ರಾಣಿಯನ್ನು ನೋಡಲು ತುಂಬ ಖುಷಿಯಾಗುತ್ತಿತ್ತು ಎಂದು ಹೇಳಿದ್ದಾರೆ.
ಬಿಗ್ ಜೇಕ್ನನ್ನು ಕಟ್ಟಲಾಗುತ್ತಿದ್ದ ಸ್ಥಳವನ್ನು ಖಾಲಿ ಬಿಡಲಾಗುವುದು. ಅಲ್ಲಿ ಇಟ್ಟಿಗೆಯನ್ನು ಹಾಕಿ, ಹೊರಗಡೆ ಕುದುರೆಯ ಚಿತ್ರ ಮತ್ತು ಹೆಸರು ಇರುವ ಪೋಸ್ಟರ್ ಹಾಕುತ್ತೇವೆ. ಜೆಕ್ ಇಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ. ಅವನಿಲ್ಲದೆ ದೊಡ್ಡ ಶೂನ್ಯ ಆವರಿಸಿದೆ ಎಂದು ಜೆರಿ ಗಿಲ್ಬರ್ಟ್ ನೋವು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ ಪಲ್ಟಿ: ಹಾಲ್ ಟಿಕೆಟ್ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು
Worlds tallest horse Big Jake dies In US