Elephant Yoga: ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿ ಆನೆಗಳಿಗೆ ಯೋಗಾಭ್ಯಾಸ

|

Updated on: Jun 05, 2023 | 11:49 AM

ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿರುವ ಆನೆಗಳು ತಮ್ಮ ಆರೋಗ್ಯ ಕಾಪಾಡಲು ಯೋಗ ಮಾಡುತ್ತದೆ. ಪ್ರತಿ ದಿನವೂ ಆನೆಗಳು ಹಿಂಡುಗಳು ಯೋಗವನ್ನು ಮಾಡುತ್ತದೆ. ಇದು ಪ್ರತಿದಿನ "ಆನೆ ಯೋಗ" ಎಂಬ ಅವಧಿಗಳನ್ನು ಮಾಡಿರುವುದು ಈ ಮೃಗಾಲಯದ ವಾಡಿಕೆಯಾಗಿದೆ.

Elephant Yoga: ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿ ಆನೆಗಳಿಗೆ ಯೋಗಾಭ್ಯಾಸ
ಆನೆಗಳಿಗೆ ಯೋಗ
Follow us on

ಮನುಷ್ಯರು ಮಾತ್ರ ಯೋಗಾಸನ ಮಾಡುದಲ್ಲ, ಪ್ರಾಣಿಗಳು ಕೂಡ ತಮ್ಮ ಆರೋಗ್ಯಕ್ಕಾಗಿ ಯೋಗಾಸನ ಮಾಡುವುದು ಮುಖ್ಯ, ಪ್ರಾಣಿಗಳು ಹೇಗೆ? ಯೋಗ ಮಾಡುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಅದರಲ್ಲೂ ಆನೆಗಳು ಯೋಗ ಮಾಡುತ್ತ ಎಂಬ ಅಚ್ಚರಿಯಾಗಬಹುದು, ಆನೆಗಳು ದೈತ್ಯ ಆಕಾರವಾಗಿರುತ್ತದೆ. ಅವುಗಳು ಆರೋಗ್ಯ ಮುಖ್ಯವಾಗಿರುತ್ತದೆ. ಹೌದು ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿರುವ ಆನೆಗಳು ತಮ್ಮ ಆರೋಗ್ಯ ಕಾಪಾಡಲು ಯೋಗ ಮಾಡುತ್ತದೆ. ಪ್ರತಿ ದಿನವೂ ಆನೆಗಳು ಹಿಂಡುಗಳು ಯೋಗವನ್ನು ಮಾಡುತ್ತದೆ. ಇದು ಪ್ರತಿದಿನ “ಆನೆ ಯೋಗ” ಎಂಬ ಅವಧಿಗಳನ್ನು ಮಾಡಿರುವುದು ಈ ಮೃಗಾಲಯದ ವಾಡಿಕೆಯಾಗಿದೆ. ಇದು ಆನೆಗಳ ಆರೋಗ್ಯ ಕಾಪಾಡಲು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಟೆಸ್ ಎಂಬ 40 ವರ್ಷ ವಯಸ್ಸಿನ ಆನೆಯು ಹ್ಯಾಂಡ್‌ಸ್ಟ್ಯಾಂಡ್ ಮಾಡುತ್ತದೆ. ತನ್ನ 6,500-ಪೌಂಡ್ ದೇಹವನ್ನು ತನ್ನ ಮುಂಭಾಗದ ಎರಡು ಕಾಲುಗಳ ಮೇಲೆ ಎತ್ತುತ್ತದೆ ಎಂದು ಹೂಸ್ಟನ್ ಮೃಗಾಲಯದ ಆನೆ ವ್ಯವಸ್ಥಾಪಕ ಕ್ರಿಸ್ಟನ್ ವಿಂಡಲ್ ದಿ ಹೂಸ್ಟನ್ ಕ್ರಾನಿಕಲ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆನೆಗಳನ್ನು ಇಲ್ಲಿ ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಅವುಗಳ ಬೆಳವಣಿಗೆ ಜತೆಗೆ ಅವುಗಳ ಆರೋಗ್ಯವು ಕೂಡ ಅಗತ್ಯವಾಗಿರುತ್ತದೆ, ಯೋಗ ಮಾಡಿದ ಆನೆಗಳು ತುಂಬಾ ಮೃದು ಸ್ವಭಾವವನ್ನು ಹೊಂದಿದ್ದು, ಅವುಗಳು ದೇಹ ಆಕಾರಗಳು ಕೂಡ ಸುಂದರವಾಗಿರುತ್ತದೆ. ಅವುಗಳ ಚರ್ಮ ಕೂಡ ಸುಂದರವಾಗಿ ರೂಪುಗೊಂಡಿರುತ್ತದೆ. ಅವುಗಳ ಚಲವಲನಗಳ ಬಗ್ಗೆ ಗಮನಿಸಲಾಗುತ್ತದೆ ಎಂದು ಮೃಗಾಲಯದ ಮ್ಯಾನೇಜರ್ ಹೇಳಿದ್ದಾರೆ.

ಇದನ್ನೂ ಓದಿ:Elephant Balarama: 14 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ

ಆನೆಗಳು ಹುಟ್ಟಿದ ಕೂಡಲೇ ತರಬೇತಿ ಪ್ರಾರಂಭವಾಗುತ್ತದೆ. ಅವುಗಳ ಸ್ಪರ್ಶ ಕೂಡ ಅಷ್ಟೇ ಸೂಕ್ತವಾಗಿರುತ್ತದೆ. ಇದನ್ನೂ ಆನೆಗಳು ಕೂಡ ಸ್ಪಷ್ಟವಾಗಿ ತಿಳಿದುಕೊಂಡಿರುತ್ತದೆ, ಆನೆಗಳು ಹುಟ್ಟಿದ ತಕ್ಷಣ ಅವುಗಳಿಗೆ ಸುಲಭದ ಯೋಗಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿ ಸೆಷನ್ 30 ಸೆಕೆಂಡುಗಳಿಂದ ಐದು ನಿಮಿಷಗಳವರೆಗೆ ಇರುತ್ತದೆ. ಕೆಲವು ಹಿರಿಯ ಆನೆಗಳು ತಮ್ಮ ಕೀಲುಗಳನ್ನು ಸಡಿಲಗೊಳಿಸಲು ದಿನಕ್ಕೆ ಎರಡು ಅವಧಿಗಳನ್ನು ಮಾಡುತ್ತವೆ ಎಂದು ಮೃಗಾಲಯವು ಹೇಳಿದೆ. ಯೋಗದ ನಂತರ ಆನೆಗಳಿಗೆ ಬಾಳೆಹಣ್ಣುಗಳು ಮತ್ತು ಬ್ರೆಡ್ ಚೂರುಗಳಂತಹ ವಿಶೇಷ ಸತ್ಕಾರಗಳನ್ನು ನೀಡಲಾಗುತ್ತದೆ.

ಆನೆಗಳು ಯೋಗಗಳು ಅವುಗಳ ಕಾಲಿಗೆ ಮತ್ತು ದೇಹಕ್ಕೆ ಚಲನೆಗಳನ್ನು ನೀಡಲಾಗುತ್ತದೆ. ಆದರೆ ಅದನ್ನು ಕಾಡಿನಲ್ಲಿ ಪ್ರತಿದಿನ ಚಲನೆಗಳ ಮೂಲಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹೂಸ್ಟನ್ ಮೃಗಾಲಯದಲ್ಲಿರುವ ಪ್ರತಿಯೊಂದು ಆನೆಯು ತನ್ನದೇ ಆದ ವೈಯಕ್ತಿಕಗೊಳಿಸಿದ ದಿನಚರಿಯನ್ನು ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ