China: ಪರ್ವತ ಕುಸಿದು 14 ಜನರು ಸಾವು, ಐವರು ನಾಪತ್ತೆ
ಪರ್ವತ ಕುಸಿದು 14 ಜನರು ಸಾವನ್ನಪ್ಪಿದ್ದು, ಐವರು ನಾಪತ್ತೆ ಆಗಿರುವಂತಹ ದುರ್ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದೆ.
ಚೀನಾ: ಪರ್ವತ ಕುಸಿದು 14 ಜನರು ಸಾವನ್ನಪ್ಪಿದ್ದು, ಐವರು ನಾಪತ್ತೆ ಆಗಿರುವಂತಹ ದುರ್ಘಟನೆ ಭಾನುವಾರ ಚೀನಾ (China) ದ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದೆ. ನಗರದ ಜಿಂಕೌಹೆ ಜಿಲ್ಲೆಯ ಯೊಂಗ್‌ಶೆಂಗ್ ಟೌನ್‌ಶಿಪ್‌ನಲ್ಲಿರುವ ಅರಣ್ಯ ಫಾರ್ಮ್‌ನಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. 180 ಕ್ಕೂ ಹೆಚ್ಚು ಜನರನ್ನು ಒಳಗೊಂಡ ರಕ್ಷಣಾ ತಂಡವು ನಾಪತ್ತೆಯಾದವರಿಗಾಗಿ ಇನ್ನೂ ಹುಡುಕಾಟ ನಡೆಸುತ್ತಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬದುಕುಳಿದವರನ್ನು ಹುಡುಕಲು ಸಾಧ್ಯವಾದಷ್ಟು ಪ್ರಯತ್ನಿಸಿ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Odisha Train Accident: ಒಡಿಶಾ ರೈಲು ಅಪಘಾತದ ಸುದ್ದಿ ಕೇಳಿ ಮರುಗಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿರುವ ಕೆಲ ಗಣಿಗಳು ಚೀನಾದ ಕಲ್ಲಿದ್ದಲು ಉತ್ಪಾದಕಗಳಾಗಿವೆ. ಚೀನೀ ಗಣಿಗಳು ಕಳೆದ ವರ್ಷದಿಂದ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು ಆ ನಿಟ್ಟಿನಲ್ಲಿ ಸರಬರಾಜು ಮತ್ತು ಬೆಲೆ ಹೆಚ್ಚಿಸಲು ಪ್ರಯತ್ನಿಸುತ್ತಿವೆ ಎಂದು ಬಿಬಿಸಿ ವರದಿ ಮಾಡಿದೆ.
China mountain collapse: 14 killed, 5 missing in Sichuan province
Read @ANI Story | https://t.co/LcUFAUKQti#China #mountain #collapse pic.twitter.com/jSlksMrrkg
— ANI Digital (@ani_digital) June 4, 2023
ಇದೇ ವರ್ಷ ಫೆಬ್ರವರಿಯಲ್ಲಿ, ಚೀನಾದ ಉತ್ತರ ಒಳಗಿನ ಮಂಗೋಲಿಯಾ ಪ್ರದೇಶದಲ್ಲಿ ಗಣಿ ಕುಸಿದು ಕನಿಷ್ಠ ನಾಲ್ವರು ಸಾವನ್ನಪ್ಪಿದರು ಮತ್ತು 49 ಮಂದಿ ಕಾಣೆಯಾಗಿದ್ದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೂಡ ಹೆಚ್ಚಿನ ತಾಪಮಾನ ಮತ್ತು ಮಳೆಯಿಂದಾಗಿ ಚಿಲಿಯ ಪ್ಯಾಟಗೋನಿಯಾ ಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ನೇತಾಡುತ್ತಿದ್ದ ಹಿಮನದಿಯ ಒಂದು ಭಾಗವು ಮುರಿದು ಹೋಗಿತ್ತು.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:06 pm, Sun, 4 June 23