ನೀವು ವಿದೇಶಕ್ಕೆ ತೆರಳಿದಾಗ ಮಾತನಾಡಲು ರಾಜಕೀಯಕ್ಕಿಂತಲೂ ಮುಖ್ಯವಾದ ವಿಷಯಗಳಿರುತ್ತವೆ ಎಂಬುದು ನೆನಪಿರಲಿ: ರಾಹುಲ್ ಗಾಂಧಿ ವಿರುದ್ಧ ಜೈಶಂಕರ್ ವಾಗ್ದಾಳಿ
ವಿದೇಶಕ್ಕೆ ತೆರಳಿದಾಗ ದೇಶದ ಬಗ್ಗೆ ಮಾತನಾಡಬೇಕೇ ವಿನಃ ರಾಜಕೀಯ ಮಾಡಬಾರದು, ದೇಶವನ್ನು ಬಿಟ್ಟು ತೆರಳಿದಾಗ ರಾಜಕೀಯಕ್ಕಿಂತ ಮಾತನಾಡಲು ಮುಖ್ಯ ವಿಷಯಗಳಿರುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್( S Jaishankar) ರಾಹುಲ್ ಗಾಂಧಿ( Rahul Gandhi) ವಿರುದ್ಧ ವಾಗ್ದಾಳಿ ನಡೆಸಿದರು.
ವಿದೇಶಕ್ಕೆ ತೆರಳಿದಾಗ ದೇಶದ ಬಗ್ಗೆ ಮಾತನಾಡಬೇಕೇ ವಿನಃ ರಾಜಕೀಯ ಮಾಡಬಾರದು, ದೇಶವನ್ನು ಬಿಟ್ಟು ತೆರಳಿದಾಗ ರಾಜಕೀಯಕ್ಕಿಂತ ಮಾತನಾಡಲು ಮುಖ್ಯ ವಿಷಯಗಳಿರುತ್ತದೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್( S Jaishankar) ರಾಹುಲ್ ಗಾಂಧಿ( Rahul Gandhi) ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸವನ್ನು ಉಲ್ಲೇಖಿಸಿದ ಅವರು , ಅದರಲ್ಲಿ ಅವರು ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಹುಲ್ ಗಾಂಧಿಯು ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಅಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ಪ್ರಧಾನಿ ಮೋದಿ ತಾವು ದೇವರೆಂದುಕೊಂಡಿದ್ದಾರೆ, ತಮಗಷ್ಟೇ ಎಲ್ಲವೂ ತಿಳಿದಿದೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ದೂರಿದ್ದರು.
ಬ್ರಿಕ್ಸ್ ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ ನಂತರ ಕೇಪ್ ಟೌನ್‌ನಲ್ಲಿ ನಡೆದ ಅನಿವಾಸಿ ಕಾರ್ಯಕ್ರಮವೊಂದರಲ್ಲಿ ಜೈಶಂಕರ್ ಅವರು ರಾಹುಲ್ ಅವರನ್ನು ಉಲ್ಲೇಖಿಸಿ ಮಾತನಾಡಿ, ತಮ್ಮ ವಿದೇಶ ಪ್ರವಾಸದ ಸಮಯದಲ್ಲಿ ಮಾತನಾಡಬೇಕು, ಆದರೆ ರಾಜಕೀಯ ಮಾಡಬಾರದು ಎಂದು ಹೇಳಿದರು.
ಮತ್ತಷ್ಟು ಓದಿ: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಕಹಿ ಸತ್ಯ: ಬಿಎಸ್ಪಿ ನಾಯಕಿ ಮಾಯಾವತಿ
ನಾನು ವಿದೇಶ ಪ್ರವಾಸದಲ್ಲಿದ್ದರೆ ಅಲ್ಲಿ ರಾಜಕೀಯ ಮಾಡುವುದಿಲ್ಲ, ನಾನು ನನ್ನ ದೇಶದಲ್ಲಿ ಚರ್ಚೆ ನಡೆಸುತ್ತೇನೆ. ನೀವು ದೇಶದಿಂದ ಹೊರಗೆ ಕಾಲಿಟ್ಟ ತಕ್ಷಣ, ರಾಜಕೀಯಕ್ಕಿಂತ ದೊಡ್ಡ ವಿಷಯಗಳಿವೆ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಬ್ರಿಕ್ಸ್ ಐದು ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪು. ಗುಂಪಿನಲ್ಲಿ ಬ್ರೆಜಿಲ್ ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಭಾಗಿಯಾಗಿವೆ.
ಭಾರತ-ದಕ್ಷಿಣ ಆಫ್ರಿಕಾ ಸಂಬಂಧಗಳು ಭಾವನಾತ್ಮಕವಾಗಿವೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿದರು. ಜೈಶಂಕರ್ ಅವರು ಕೇಪ್ ಟೌನ್‌ನಲ್ಲಿ ಸಾಗರೋತ್ತರ ಭಾರತೀಯ ಸಮುದಾಯದೊಂದಿಗಿನ ಸಂವಾದದಲ್ಲಿ ಹೇಳಿದರು. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ತಮ್ಮ ಭಾಷಣಕ್ಕೂ ಮುನ್ನ ವಿದೇಶಾಂಗ ಸಚಿವರು ಶುಕ್ರವಾರ ಸಂಜೆ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Sun, 4 June 23