S Jaishankar Russia Visit: ವಿದೇಶಾಂಗ ಸಚಿವ ಎಸ್ ಜೈಶಂಕರ್ ನವೆಂಬರ್ 8ರಂದು ರಷ್ಯಾಗೆ ಭೇಟಿ
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನವೆಂಬರ್ 8 ರಂದು ಮಾಸ್ಕೋಗೆ ಭೇಟಿ ನೀಡಲಿದ್ದಾರೆ. ರಷ್ಯಾದ ಜೊತೆಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನವೆಂಬರ್ 8 ರಂದು ರಷ್ಯಾಕ್ಕೆ ಭೇಟಿ ನೀಡಲಿದ್ದು ಅಲ್ಲಿನ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಘೋಷಣೆ ಮಾಡಿದ ರಷ್ಯಾ, ದ್ವಿಪಕ್ಷೀಯ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಇವರಿಬ್ಬರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಈ ಭೇಟಿಯು ನಡೆಯುತ್ತಿರುವ ಉಕ್ರೇನ್ ಯುದ್ಧದಲ್ಲಿ ನಿರ್ಣಾಯಕ ಹಂತದಲ್ಲಿ ಬರುತ್ತದೆ. ಅಲ್ಲಿ ಮಾಸ್ಕೋ ಮತ್ತು ಕೈವ್, ರೇಡಿಯೊ ಆಕ್ಟಿವ್ ಡರ್ಟಿ ಬಾಂಬ್ ಅನ್ನು ಬಳಸಲು ಯೋಜಿಸುತ್ತಿದೆ ಎಂದು ಪರಸ್ಪರ ಆರೋಪಿಸಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಆಡಳಿತವು ರೇಡಿಯೊ ಆಕ್ಟಿವ್ ಡರ್ಟಿ ಬಾಂಬ್ ಅನ್ನು ಅಭಿವೃದ್ಧಿಪಡಿಸಲು ಆದೇಶಿಸಿದೆ ಎಂದು ಆರೋಪಿಸಿದ ಸ್ವಲ್ಪ ಸಮಯದ ನಂತರ ಮಾಸ್ಕೋ ತನ್ನ ಪರಮಾಣು ಪಡೆಗಳ ವಾರ್ಷಿಕ ಅಭ್ಯಾಸ ಕೈಗೊಳ್ಳಲು ಯೋಜಿಸಿದೆ ಎಂದು ಹೇಳಿದೆ. ಅವರು ಉಕ್ರೇನ್‌ನ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಬೆಂಬಲವನ್ನು ಹೊಂದಿರಬಹುದು ಎಂದು ಅದು ಹೇಳಿದೆ.
On November 8 in Moscow, Russian Foreign Minister Sergey Lavrov will have talks with EAM Dr S Jaishankar. The Ministers will discuss the current state of bilateral relations and the international agenda: Russian Foreign Ministry Spokeswoman Maria Zakharova
(File photo) pic.twitter.com/MMZBpU4uUO
— ANI (@ANI) October 27, 2022
ಭಾನುವಾರ ರಷ್ಯಾದ ರಕ್ಷಣಾ ಸಚಿವರು ಈ ವಿಷಯವನ್ನು ಚರ್ಚಿಸಲು NATO ನಲ್ಲಿರುವ ತಮ್ಮ ಸಹವರ್ತಿಗಳನ್ನು ಕರೆದಿದ್ದಾರೆ. ಉಕ್ರೇನ್ ಅನ್ನು ಬೆಂಬಲಿಸುವ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಹೇಳಿಕೆಯನ್ನು ತಳ್ಳಿಹಾಕಿದ್ದು ರಷ್ಯಾ ಭಯ ಉಂಟು ಮಾಡುತ್ತಿದೆ ಎಂದಿವೆ.
ಯುದ್ಧವನ್ನು ಉಲ್ಬಣಗೊಳಿಸಲು ರಷ್ಯಾದ ನೆಪ ಇದು ಎಂದು ಉಕ್ರೇನ್ ಹೇಳಿದೆ.
ಉಕ್ರೇನ್ ಯುದ್ಧದಲ್ಲಿ ಯಾವುದೇ ಕಡೆಯಿಂದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಾರದು ಎಂದು ನಿನ್ನೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಸಹವರ್ತಿ ಸರ್ಗೆಯ್ ಶೋಯಿಗು ಅವರಿಗೆ ಹೇಳಿದ್ದಾರೆ.
Published On - 6:15 pm, Thu, 27 October 22