ಭಾರತೀಯರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬಗ್ಗೆ ಗೂಗಲ್​​ನಲ್ಲಿ ಹುಡುಕಿದ್ದೇನನ್ನು?

ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ರಿಷಿ ಜಾತಿ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದ್ದು ऋषि सुनक CAST 'Rishi Sunak caste name ಕೂಡ ಗೂಗಲ್‌ನಲ್ಲಿ ಹೆಚ್ಚು ಜನರು ಹುಡುಕಿದ ಪದವಾಗಿದೆ.

ಭಾರತೀಯರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬಗ್ಗೆ ಗೂಗಲ್​​ನಲ್ಲಿ ಹುಡುಕಿದ್ದೇನನ್ನು?
ರಿಷಿ ಸುನಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 27, 2022 | 7:53 PM

ರಿಷಿ ಸುನಕ್ (Rishi Sunak), ಭಾರತೀಯ ಮೂಲದ ಬ್ರಿಟನ್‌ನ ಮೊದಲ ಪ್ರಧಾನ ಮಂತ್ರಿಯಾಗುವ ಮೂಲಕ ಇತಿಹಾಸವನ್ನು ಬರೆದಾಗ ಹೆಚ್ಚಿನ ಭಾರತೀಯ ಪತ್ರಿಕೆಗಳ ಮೊದಲ ಪುಟಗಳಲ್ಲಿನ ಪ್ರಮುಖ ಸುದ್ದಿಯಾಗಿತ್ತು ಅದು. ಟಿ20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಗೆಲುವು , ದೀಪಾವಳಿ ಆಚರಣೆ, ರಿಷಿ ಸುನಕ್ ಬ್ರಿಟನ್ (Britain) ಪ್ರಧಾನಿಯಾಗುವುದು ಎಲ್ಲ ಆ ದಿನ ಪ್ರಮುಖ ಸುದ್ದಿಗಳೇ. ರಿಷಿ ಪ್ರಧಾನಿ ಹುದ್ದೆಗೇರುವ ಈ ಸುದ್ದಿಗಾಗಿ ಭಾರತೀಯರು ಸ್ವಲ್ಪ ಸಮಯದಿಂದ ಕಾಯುತ್ತಿದ್ದರು. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಲಿಜ್ ಟ್ರಸ್ ಬದಲಿಗೆ ಅವರ ಪ್ರತಿಸ್ಪರ್ಧಿಗಳಾದ ಬೋರಿಸ್ ಜಾನ್ಸನ್  (Boris Johnson)ಮತ್ತು ಪೆನ್ನಿ ಮೊರ್ಡಾಂಟ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಹುದ್ದೆಗೇರಿದ್ದರು.ರಿಷಿ ಬ್ರಿಟನ್ ಪ್ರಧಾನಿಯಾಗುತ್ತಿದ್ದಂತೆ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಅನೇಕ ಭಾರತೀಯರು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ರೀತಿ ಗೂಗಲ್ ನಲ್ಲಿ ಕೇಳಿದ ಕೆಲವು ಪ್ರಶ್ನೆಗಳೆಂದರೆ  Does Rishi Sunak eat beef?,  What is Rishi Sunak caste name?. ಯಾವ ರಾಜ್ಯದಿಂದ ಜನರು ಯಾವ ರೀತಿಯ ಪ್ರಶ್ನೆಗಳನ್ನು ಕೇಳಿದರು ಎಂಬುದರ ಬಗ್ಗೆ ಬೂಮ್ ಲೈವ್ ವರದಿ ಮಾಡಿದೆ

ರಿಷಿ ಸುನಕ್ ಅವರ ಜಾತಿ ಯಾವುದು?

ಭಾರತದಲ್ಲಿನ ಜನರಿಗೆ ಸರ್ವೇಸಾಮಾನ್ಯವಾಗಿರುವ ಕುತೂಹಲ ಇದು. ಬ್ರಿಟನ್ ಪ್ರಧಾನಿಯಾಗಿ ರಿಷಿ ಏನು ಮಾಡಲು ಯೋಜಿಸುತ್ತಿದ್ದಾರೆ ಎನ್ನುವುದಕ್ಕಿಂತ ಅವರ ವಂಶಾವಳಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ಅವರಲ್ಲಿ ಹೆಚ್ಚಿನವರು ಆಸಕ್ತಿ ಹೊಂದಿದ್ದಾರೆ. “ರಿಷಿ ಸುನಕ್ ಅವರ ಜಾತಿ ಯಾವುದು?” ಎಂಬುದು Google ನಲ್ಲಿ ಟ್ರೆಂಡಿಂಗ್ ಆಗಿರುವ ಮತ್ತೊಂದು ಹುಡುಕು ಪದ. ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯಿಂದ ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿಕೊಂಡಿದೆ. ಇತಿಹಾಸದ ಮಟ್ಟಿಗೆ ಹೇಳುವುದಾದರೆ, ಪ್ರಾಚೀನ ಭಾರತದಲ್ಲಿ ಜಾತಿ ವ್ಯವಸ್ಥೆಯು ತನ್ನ ಬೇರುಗಳನ್ನು ಹೊಂದಿದ್ದರೂ, ಬ್ರಿಟಿಷ್ ವಸಾಹತುಶಾಹಿಗಳು 19 ನೇ ಶತಮಾನದಲ್ಲಿ ತಮ್ಮ ಆಡಳಿತ ವ್ಯವಸ್ಥೆಗಾಗಿ ಭಾರತೀಯ ಸಾಮಾಜಿಕ ಗುರುತನ್ನು ನಿರ್ಮಿಸಿದರು. ಅವರು ಕೆಲವು ಜಾತಿಗಳು ಮತ್ತು ಸಮುದಾಯಗಳಿಗೆ ಸೇರಿದವರಿಗೆ ಆಡಳಿತಾತ್ಮಕ ಉದ್ಯೋಗಗಳು ಮತ್ತು ಹಿರಿಯ ನೇಮಕಾತಿಗಳನ್ನು ನೀಡಿದ್ದರು. ಈ ಜಾತಿ ವ್ಯವಸ್ಥೆ, ಧರ್ಮದ ತಾರತಮ್ಯ ಇಂದಿಗೂ ಭಾರತದಲ್ಲಿ ಮುಂದುವರಿದೆ ಎಂಬುದನ್ನೂ ಈ ಗೂಗಲ್ ಟ್ರೆಂಡ್ಸ್ ತೋರಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಈ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದ್ದು ऋषि सुनक CAST ‘Rishi Sunak caste name ಕೂಡ ಗೂಗಲ್‌ನಲ್ಲಿ ಹೆಚ್ಚು ಜನರು ಹುಡುಕಿದ ಪದವಾಗಿದೆ.

ರಿಷಿ ಸುನಕ್ ಗೋಮಾಂಸ ತಿನ್ನುತ್ತಾರಾ?

ರಿಷಿ ಬಗ್ಗೆ ತಿಳಿಯಲು ಭಾರತೀಯರು ಬಯಸಿದ ಪ್ರಶ್ನೆಗಳಲ್ಲಿ ಇದೂ ಒಂದು. ಜುಲೈ 30ರಂದು ರಿಷಿ ಸುನಕ್ ಮಾಡಿದ ಟ್ವೀಟೊಂದರಲ್ಲಿ ಅವರು ದೇಶದಲ್ಲಿ ಮತ್ತು ವಿದೇಶದಲ್ಲಿ ನಮ್ಮ ಜಾನುವಾರು ರೈತರನ್ನು ಬೆಂಬಲಿಸುವ ಸರ್ಕಾರವನ್ನು ನಾನು ಮುನ್ನಡೆಸುತ್ತೇನೆ”ಎಂದಿದ್ದರು. ಈ ಟ್ವೀಟ್ ರಿಷಿ ಪ್ರಧಾನಿಯಾದ ಬೆನ್ನಲ್ಲೇವೈರಲ್ ಆಗಿಗೆ. “ಅವನು ನಿಜವಾದ ಹಿಂದೂನೇ?” ಟ್ವೀಟಿಗರೊಬ್ಪರು ಕೇಳಿದ್ದರು. ಇದಕ್ಕೆ ರಿಷಿ ಗೋವನ್ನು ಪೂಜಿಸುತ್ತಾರೆ,ಅವರು ಬೀಫ್ ತಿನ್ನುತ್ತಾರೆ ಎನ್ನಲು ಸಾದ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬೀಫ್ ಟ್ರೆಂಡ್ ಆಗಲು ಆರಂಭಿಸಿತು.

ಹಾಗಾದರೆ ಸುನಕ್ ಬೀಫ್ ತಿನ್ನುತ್ತಾರಾ?

2015 ರಲ್ಲಿ ಪ್ರಕಟವಾದ ಬ್ಯುಸಿನೆಸ್ ಸ್ಟ್ಯಾಂಡರ್ಡ್‌ಗೆ ನೀಡಿದ ಸಂದರ್ಶನದಲ್ಲಿ, ರಿಷಿ ಸುನಕ್ ಅವರು ನಾನು ಗೋಮಾಂಸವನ್ನು ತಿನ್ನುವುದಿಲ್ಲ ಮತ್ತು “ಇದು ಎಂದಿಗೂ ಸಮಸ್ಯೆಯಾಗಿರಲಿಲ್ಲ” ಎಂದಿದ್ದರು .

ಆಶಿಶ್ ನೆಹ್ರಾನನ್ನೇ ರಿಷಿ ಸುನಕ್ ಎಂದ ನೆಟ್ಟಿಗರು

ಕೆಲವು ಭಾರತೀಯರು ಯುಕೆ ಪ್ರಧಾನ ಮಂತ್ರಿ ಮತ್ತು ಭಾರತೀಯ ಕ್ರಿಕೆಟಿಗ ಆಶಿಶ್ ನೆಹ್ರಾ ನಡುವೆ ಹೋಲಿಕೆಯನ್ನು ಕಂಡುಕೊಂಡರೆ ಇನ್ನೂ ಕೆಲವರು ರಿಷಿ ಸುನಕ್ ಬದಲಿಗೆ ನೆಹ್ರಾ ಫೋಟೊ ಅಪ್ಲೋಡ್ ಮಾಡಿ ಅಭಿನಂದಿಸಿದ್ದಾರೆ. ವಿರಾಟ್ ಕೊಹ್ಲಿ ಚಿಕ್ಕವನಿದ್ದಾಗ ಆತನಿಗೆ ಆಶಿಶ್ ನೆಹ್ರಾ ಬಹುಮಾನ ವಿತರಣೆ ಮಾಡುತ್ತಿರುವ ಫೋಟೊವನ್ನು ಕೆಲವರು ಟ್ವೀಟ್ ಮಾಡಿ ಕೊಹ್ಲಿಯನ್ನು ಅಭಿನಂದಿಸುತ್ತಿರುವ ರಿಷಿ ಸುನಕ್ ಎಂದಿದ್ದರೆ. ಇಂತಿರುವಾಗ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್,ಅದು ರಿಷಿ ಸುನಕ್ ಅಲ್ಲ ಆಶಿಶ್ ನೆಹ್ರಾ ಎಂದು ಹಳೇ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.