2023 MG Hector: ಬಿಡುಗಡೆಯಾಗಲಿರುವ ಹೊಸ ಎಂಜಿ ಹೆಕ್ಟರ್ ಎಸ್ ಯುವಿ ಹೀಗಿರಲಿದೆ ನೋಡಿ..

ಎಂಜಿ ಮೋಟಾರ್‌ ಕಂಪನಿಯು ತನ್ನ ಹೊಸ ಹೆಕ್ಟರ್ ಎಸ್ ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬಿಡುಗಡೆಗೂ ಮುನ್ನ ಹೊಸ ಕಾರಿನ ಅಧಿಕೃತ ಚಿತ್ರಗಳು ಮತ್ತು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

2023 MG Hector: ಬಿಡುಗಡೆಯಾಗಲಿರುವ ಹೊಸ ಎಂಜಿ ಹೆಕ್ಟರ್ ಎಸ್ ಯುವಿ ಹೀಗಿರಲಿದೆ ನೋಡಿ..
ಎಂಜಿ ಹೆಕ್ಟರ್ ಎಸ್ ಯುವಿ
Follow us
Praveen Sannamani
|

Updated on:Dec 01, 2022 | 4:14 PM

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಮೋಟಾರ್(MG Motors) ಕಂಪನಿಯು 2023ರ ಹೆಕ್ಟರ್(Hector) ಎಸ್ ಯುವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೊಸ ಕಾರು ಮಾದರಿಯು ಮುಂಬರುವ 2023ರ ಜನವರಿ 5ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಮಾದರಿಗಾಗಿ ಈಗಾಗಲೇ ಬುಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಎಂಜಿ ಮೋಟಾರ್ ಹೆಕ್ಟರ್ ಕಾರು ಮಾದರಿಯು ಈ ಬಾರಿ ಗುರುತರ ಬದಲಾವಣೆ ಪಡೆದುಕೊಂಡಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ. ಹೊಸ ಕಾರಿನಲ್ಲಿ ಬದಲಾವಣೆಗೊಳಿಸಿದ ಫ್ರಂಟ್ ಗ್ರಿಲ್, ಡೈಮಂಡ್ ಶೇಫ್ ಕ್ರೋಮ್ ಇನ್ಸರ್ಟ್ ಮತ್ತು ಗ್ಲಾಸ್ ಬ್ಲಾಕ್ ಸರೌಂಡ್ ಸೌಲಭ್ಯಗಳಿವೆ. ಜೊತೆಗೆ ಹೊಸ ಕಾರಿನಲ್ಲಿ ಸ್ಪೋರ್ಟಿಯಾಗಿರುವ ಫ್ಲಕ್ಸ್ ಸ್ಕಿಡ್ ಪ್ಲೇಟ್, ಡೈಮಂಡ್ ಕಟ್ ಅಲಾಯ್ ವ್ಹೀಲ್, ಮರುವಿನ್ಯಾಸಗೊಳಿಸಲಾದ ರಿಯರ್ ಬಂಪರ್ ಮತ್ತು ಹೆಕ್ಟರ್ ಬ್ಯಾಡ್ಜಿಂಗ್ ನೀಡಲಾಗಿದೆ.

ಹೊಸ ಕಾರಿನಲ್ಲಿ ಹೊರಭಾಗದಲ್ಲಿ ಮಾತ್ರವಲ್ಲ ಒಳಭಾಗದಲ್ಲೂ ಗುರುತರ ಬದಲಾವಣೆ ತರಲಾಗಿದ್ದು, ಡಬಲ್ ಲೇಯರ್ ಡ್ಯಾಶ್ ಬೋರ್ಡ್, ಡಿ ಶೇಫ್ ಹೊಂದಿರುವ ಹಾರಿಜಂಟಲ್ ಎಸಿ ವೆಂಟ್ಸ್, ಹೊಂದಾಣಿಕೆ ಮಾಡಬಹುದಾದ 14 ಇಂಚಿನ ಹೆಚ್ ಡಿ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟುಮೆಂಟ್ ಕ್ಲಸ್ಟರ್, ಆ್ಯಂಬಿಯೆಂಟ್ ಲೈಟಿಂಗ್ ಸ್ಟ್ರೀಪ್ ಸೌಲಭ್ಯಗಳಿವೆ.

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸುಧಾರಿತ 360 ಡಿಗ್ರಿ ಕ್ಯಾಮೆರಾ, ವೈರ್ ಲೆಸ್ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ಪವರ್ಡ್ ಫ್ರಂಟ್ ಸೀಟ್ ಹೊಂದಾಣಿಕೆ, ಹೊಸ ಆಡಿಯೋ ಸಿಸ್ಟಂ, ಟಿಲ್ಟ್ ಅಂಡ್ ಟೆಲಿಸ್ಕೊಪಿಕ್ ಸ್ಟೀರಿಂಗ್ ವ್ಹೀಲ್, ಕೂಲ್ಡ್ ಗ್ಲೋ ಬಾಕ್ಸ್, ಪನೊರಮಿಕ್ ಸನ್ ರೂಫ್ ಮತ್ತು ಆರಾಮದಾಯಕವಾದ ಲೆದರ್ ಆಸನ ಸೌಲಭ್ಯವಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಎಂಜಿ ಮೋಟಾರ್ ಕಂಪನಿಯು ಮೊದಲ ಬಾರಿಗೆ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ಸೌಲಭ್ಯವನ್ನು ನೀಡಲಾಗಿದ್ದು, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಸೇರಿದಂತೆ ಹಲವು ಫೀಚರ್ಸ್ ಗಳಿವೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೆಕ್ಟರ್ ಹೊಸ ಮಾದರಿಯಲ್ಲಿ ಎಂಜಿ ಮೋಟಾರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿನ ಎಂಜಿನ್ ಆಯ್ಕೆ ಮುಂದುವರಿಸಿದ್ದು, 2.0 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿರಲಿದೆ. ಇದರಲ್ಲಿ ಡೀಸೆಲ್ ಮಾದರಿಯು 167.75 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 141 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Published On - 4:14 pm, Thu, 1 December 22