Audi Q5 limited edition: ಆಕರ್ಷಕ ಬಣ್ಣದೊಂದಿಗೆ ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ಬಿಡುಗಡೆ

|

Updated on: Sep 18, 2023 | 6:25 PM

ಆಡಿ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕ್ಯೂ5 ಎಸ್ ಯುವಿ ಆವೃತ್ತಿಯಲ್ಲಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದೆ.

Audi Q5 limited edition: ಆಕರ್ಷಕ ಬಣ್ಣದೊಂದಿಗೆ ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ಬಿಡುಗಡೆ
ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ಬಿಡುಗಡೆ
Follow us on

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಆಡಿ ಇಂಡಿಯಾ(Audi India) ಕಂಪನಿಯು ತನ್ನ ಜನಪ್ರಿಯ ಎಸ್ ಯುವಿ ಮಾದರಿಯಾದ ಕ್ಯೂ5(Q5) ಆವೃತ್ತಿಯಲ್ಲಿ ಲಿಮಿಟೆಡ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಲಿಮೆಟೆಡ್ ಎಡಿಷನ್(Limited Edition) ಎಕ್ಸ್ ಶೋರೂಂ ಪ್ರಕಾರ ರೂ. 69.72 ಲಕ್ಷ ಬೆಲೆ ಹೊಂದಿದೆ.

ಮಧ್ಯಮ ಗಾತ್ರದ ಐಷಾರಾಮಿ ಎಸ್ ಯುವಿ ಕಾರು ಮಾರಾಟದಲ್ಲಿ ಕ್ಯೂ5 ಆವೃತ್ತಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಹೊಸ ಕಾರಿನಲ್ಲಿ ಆಡಿ ಕಂಪನಿಯು ವಿಶೇಷ ಬಣ್ಣದ ಆಯ್ಕೆ ಮತ್ತು ಹಲವು ಹೊಸ ಫೀಚರ್ಸ್ ಹೊಂದಿರುವ ಲಿಮಿಟೆಡ್ ಎಡಿಷನ್ ಪರಿಚಯಿಸಲಾಗಿದೆ. ಹೊಸ ಆವೃತ್ತಿಯಲ್ಲಿ ಮೈಥೊಸ್ ಬ್ಲ್ಯಾಕ್ ಬಣ್ಣದ ಆಯ್ಕೆ ನೀಡಲಾಗಿದ್ದು, ಗ್ರಿಲ್, ರೂಫ್ ರೈಲ್ಸ್ ಕೂಡಾ ಬ್ಲ್ಯಾಕ್ ಔಟ್ ಬಣ್ಣ ಪಡೆದುಕೊಂಡಿವೆ.

ಕ್ಯೂ5 ಹೊಸ ಲಿಮಿಟೆಡ್ ಎಡಿಷನ್ ಒಳಭಾಗದಲ್ಲೂ ಕೂಡಾ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದ್ದು, ಓಕಾಪಿ ಬ್ರೌನ್ ಬಣ್ಣ ಹೊಂದಿರುವ ಲೆದರ್ ಆಸನಗಳು, ಫ್ರಂಟ್ ಸೆಂಟರ್ ಆರ್ಮ್ ರೆಸ್ಟ್, ಡೋರ್ ಪ್ಯಾನೆಲ್ ನೀಡಲಾಗಿದೆ. ಇದರ ಹೊರತಾಗಿ ಹೊಸ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್ ಗಳನ್ನು ಮುಂದುವರಿಸಲಾಗಿದ್ದು, ಎಂಜಿನ್ ಆಯ್ಕೆಯಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಇದನ್ನೂ ಓದಿ: ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ

ಹೊಸ ಲಿಮೆಟೆಡ್ ಎಡಿಷನ್ ಕ್ಯೂ5 ಕಾರಿನ ಟೆಕ್ನಾಲಜಿ ವೆರಿಯೆಂಟ್ ಆಧರಿಸಿದ್ದು, ಇದು ಆಕರ್ಷಕ ಬಣ್ಣದೊಂದಿಗೆ ಸ್ಟ್ಯಾಂಡರ್ಡ್ ಮಾದರಿಗಿಂತಲೂ ರೂ. 1.50 ಲಕ್ಷದಷ್ಟು ದುಬಾರಿಯಾಗಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಕ್ಯೂ5 ಎಸ್ ಯುವಿ ಮಾದರಿಯಲ್ಲಿ ಆಡಿ ಕಂಪನಿಯು 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಇದು ಆಡಿ ಕ್ವಾಡ್ರೊ ಆಲ್ ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಹೊಂದಿದೆ. ಈ ಮೂಲಕ ಇದು 265 ಹಾರ್ಸ್ ಪವರ್ ಮತ್ತು 370 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಚಾಲನಾ ಆದ್ಯತೆಗೆ ಅನುಗುಣವಾಗಿ ವಿವಿಧ ಆರು ಡ್ರೈವ್ ಮೋಡ್ ನೀಡಲಾಗಿದೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಆವೃತ್ತಿಯು ಕ್ಯೂ5 ಕಾರಿನ ಟೆಕ್ನಾಲಜಿ ವೆರಿಯೆಂಟ್ ಆಧರಿಸಿದ್ದು, ಇದರಲ್ಲಿ 10.1 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 19 ಸ್ಪೀಕರ್ಸ್ ಒಳಗೊಂಡಿರುವ ಬ್ಯಾಂಗ್ ಅಂಡ್ ಒಲ್ಪೊಸೆನ್ ಸೌಂಡ್ ಸಿಸ್ಟಂ, ವೈರ್ ಲೆಸ್ ಚಾರ್ಜರ್, ಪನೊರಮಿಕ್ ಸನ್ ರೂಫ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, 12.3 ಇಂಚಿನ ಆಡಿ ವರ್ಚುವಲ್ ಕಾಕ್ ಪಿಟ್, 64 ಆಂಬಿಯೆಂಟ್ ಲೈಟಿಂಗ್ಸ್ ಮತ್ತು ಸುರಕ್ಷತೆಗಾಗಿ 8 ಏರ್ ಬ್ಯಾಗ್ ಸೇರಿದಂತೆ ಹಲವಾರು ಫೀಚರ್ಸ್ ಹೊಂದಿದೆ.