Auto Tips: ಕಾರು ರನ್ನಿಂಗ್​ನಲ್ಲಿರುವಾಗ ಸನ್‌ರೂಫ್ ತೆರೆಯುವುದು ಸರಿಯೇ?: ತಪ್ಪಿಯೂ ಹೀಗೆ ಮಾಡಬೇಡಿ

ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಸನ್‌ರೂಫ್ ಅನ್ನು ತೆರೆಯುವುದು ಮಾತ್ರವಲ್ಲದೆ ಅದರ ಮೂಲಕ ಹೊರಗೆ ಇಣುಕಿ ನೋಡುವವರಿ ಇರುತ್ತಾರೆ. ಆದರೆ, ಇದೆಲ್ಲ ಒಳ್ಳೆಯದಾ?, ಇಂದು ನಾವು ಸನ್‌ರೂಫ್ ತೆರೆದರೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಹೇಳಲಿದ್ದೇವೆ.

Auto Tips: ಕಾರು ರನ್ನಿಂಗ್​ನಲ್ಲಿರುವಾಗ ಸನ್‌ರೂಫ್ ತೆರೆಯುವುದು ಸರಿಯೇ?: ತಪ್ಪಿಯೂ ಹೀಗೆ ಮಾಡಬೇಡಿ
ಕಾರು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 09, 2024 | 11:37 AM

ನಿಮ್ಮ ಕಾರಿನಲ್ಲಿ ತೆರೆಯುವ ಸನ್‌ರೂಫ್ ಹೊಂದಿದ್ದರೆ, ಮೊದಲು ನೀವು ಅದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು. ಇಂದು ಹೆಚ್ಚಿನ ಜನರು ಸನ್‌ರೂಫ್ ತೆರೆಯುವ ಮೂಲಕ ಕಾರನ್ನು ಓಡಿಸಬೇಕು ಎಂದು ಎಂದು ಭಾವಿಸುತ್ತಾರೆ. ಇದೊಂದು ಕ್ರೇಜ್ ಆಗಿದೆ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವಾಗ ಸನ್‌ರೂಫ್ ಅನ್ನು ತೆರೆಯುವುದು ಮಾತ್ರವಲ್ಲದೆ ಅದರ ಮೂಲಕ ಹೊರಗೆ ಇಣುಕಿ ನೋಡುತ್ತಾರೆ. ಆದರೆ, ಇದೆಲ್ಲ ಒಳ್ಳೆಯದಾ?, ಇಂದು ನಾವು ಸನ್‌ರೂಫ್ ತೆರೆದರೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಹೇಳಲಿದ್ದೇವೆ.

ಸನ್‌ರೂಫ್ ತೆರೆಯುವ ಪ್ರಯೋಜನಗಳು:

ತಾಜಾ ಗಾಳಿ: ಸನ್‌ರೂಫ್ ಅನ್ನು ತೆರೆಯುವುದರಿಂದ ಕ್ಯಾಬಿನ್‌ ಒಳಗೆ ಹೆಚ್ಚು ತಾಜಾ ಗಾಳಿಯನ್ನು ಬರುತ್ತದೆ, ಇದು ಕಾರಿನ ಒಳಗೆ ತಾಜಾ ಅನುಭವ ನೀಡುತ್ತದೆ.

ನೈಸರ್ಗಿಕ ಬೆಳಕು: ಇದು ಕ್ಯಾಬಿನ್‌ಗೆ ನೈಸರ್ಗಿಕ ಬೆಳಕನ್ನು ತರುತ್ತದೆ, ಕಾರಿನ ಒಳಾಂಗಣವನ್ನು ಹೆಚ್ಚು ಗಾಳಿ ಮತ್ತು ಪ್ರಕಾಶಮಾನವಾಗಿ ಮಾಡುತ್ತದೆ.

ಅನುಭವ: ಹೆದ್ದಾರಿಯಲ್ಲಿ ಅಥವಾ ಉತ್ತಮ ಹವಾಮಾನದಲ್ಲಿ ಸನ್‌ರೂಫ್ ತೆರೆದು ರೈಡ್ ಮಾಡುವಾಗ ರೋಮಾಂಚಕಾರಿ ಅನುಭವ ನೀಡುತ್ತದೆ.

ಸನ್ರೂಫ್​ನ ಅನಾನುಕೂಲಗಳು:

ಗಾಳಿಯ ಒತ್ತಡ ಮತ್ತು ಶಬ್ದ: ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ ಸನ್‌ರೂಫ್ ಅನ್ನು ತೆರೆದಾಗ ಗಾಳಿಯ ಒತ್ತಡದಿಂದಾಗಿ ಕ್ಯಾಬಿನ್‌ನಲ್ಲಿ ಹೆಚ್ಚಿನ ಶಬ್ದ ಉಂಟಾಗುತ್ತದೆ, ಇದು ಡ್ರೈವಿಂಗ್ ಅನುಭವವನ್ನು ಹಾಳುಮಾಡುತ್ತದೆ ಮತ್ತು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು.

ಸುರಕ್ಷತೆಯ ಅಪಾಯ: ನಿಮ್ಮ ತಲೆ ಅಥವಾ ಕೈಗಳನ್ನು ಸನ್‌ರೂಫ್‌ನಿಂದ ಹೊರತೆಗೆಯುವುದು ತುಂಬಾ ಅಪಾಯಕಾರಿ. ಅಪಘಾತದ ಸಂದರ್ಭದಲ್ಲಿ ಇದು ಡೊಡ್ಡ ನಷ್ಟಕ್ಕೆ ಕಾರಣವಾಗಬಹುದು. ವಿಶೇಷವಾಗಿ ಮಕ್ಕಳಿಗೆ ತುಂಬಾ ಅಪಾಯಕಾರಿ.

ಧೂಳು ಮತ್ತು ಕೊಳಕು: ಸನ್‌ರೂಫ್ ಅನ್ನು ತೆರೆಯುವುದರಿಂದ ಹೊರಗಿನಿಂದ ಧೂಳು, ಕೊಳಕು ಮತ್ತು ಕಸವು ಕ್ಯಾಬಿನ್‌ಗೆ ಬರಬಹುದು, ಇದು ಸುರಕ್ಷಿತ ಚಾಲನೆಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇಂಧನ ದಕ್ಷತೆ: ನೀವು ಹೆದ್ದಾರಿಯಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುತ್ತಿದ್ದರೆ, ಸನ್‌ರೂಫ್ ಅನ್ನು ತೆರೆಯುವುದರಿಂದ ಗಾಳಿಯ ಒತ್ತಡ ಹೆಚ್ಚಾಗುತ್ತದೆ. ಇದು ವಾಹನದ ಮೇಲೆ ಪರಿಣಾಮ ಬೀರುತ್ತದೆ. ಮೈಲೇಜ್ ಕೂಡ ಕಡಿಮೆ ಆಗುತ್ತದೆ.

ಮಳೆ ಅಥವಾ ಕೆಟ್ಟ ಹವಾಮಾನ: ಸನ್‌ರೂಫ್ ತೆರೆಯುವಾಗ ಹಠಾತ್ ಮಳೆ ಅಥವಾ ಹವಾಮಾನದಲ್ಲಿ ಬದಲಾವಣೆಯಾದರೆ, ನೀರು ಒಳಗೆ ಬರಬಹುದು, ಇದು ಎಲೆಕ್ಟ್ರಾನಿಕ್ಸ್ ಮತ್ತು ಒಳಾಂಗಣಕ್ಕೆ ಹಾನಿಯನ್ನುಂಟುಮಾಡುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 9 October 24

ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ
ರಿಹರ್ಸಲ್​​ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ