Namratha Gowda: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ

|

Updated on: Apr 14, 2024 | 9:07 PM

ಬಿಗ್ ಬಾಸ್ ಸೀಸನ್ 10ರಲ್ಲಿ ಗಮನ ಸೆಳೆದಿದ್ದ ನಟಿ ನಮ್ರತಾ ಗೌಡ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದು, ಇವಿ ಕಾರು ವಿತರಣೆಯ ಚಿತ್ರಗಳು ಸಾಮಾಜಿಕ ಜಾಲತಾಣ ಸದ್ದುಮಾಡುತ್ತಿವೆ.

Namratha Gowda: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ
ನಟಿ ನಮ್ರತಾ ಗೌಡ
Follow us on

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ನಮ್ರತಾ ಗೌಡ (Namratha Gowda) ಅವರು ತಮ್ಮ ಕನಸಿನ ಕಾರು ಖರೀದಿಸುವ ಮೂಲಕ ಖುಷಿ ವ್ಯಕ್ತಪಡಿಸಿದ್ದು, ನಟಿ ಖರೀದಿಸಿರುವ ಹೊಸ ಎಲೆಕ್ಟ್ರಿಕ್ ಕಾರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ನಾಗಿಣಿ 2 ನಂತರ ಬಿಗ್ ಬಾಸ್ ಸೀಸನ್ 10 ಶೋ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂಡಿರುವ ನಟಿ ನಮ್ರತಾ ಗೌಡ ಸದ್ಯ ನಟನೆ ಜೊತೆಗೆ ವಿವಿಧ ಜಾಹೀರಾತುಗಳಲ್ಲೂ ನಟಿಸುತ್ತಿದ್ದಾರೆ. ಈ ನಡುವೆ ತಮ್ಮ ನೆಚ್ಚಿನ ಇವಿ ಕಾರು ಖರೀದಿಸಿದ್ದು, ಹೊಸ ಇವಿ ಕಾರನ್ನು ತಮ್ಮ ತಂದೆ ತಾಯಿ ಜೊತೆಗೆ ವಿತರಣೆ ಪಡೆದುಕೊಂಡಿದ್ದಾರೆ.

ಹೌದು, ನಮ್ರತಾ ಗೌಡ ಎಂಜಿ ಮೋಟಾರ್ ನಿರ್ಮಾಣದ ಕಾಮೆಟ್ ಇವಿ ಕಾರು ಖರೀದಿಸಿದ್ದು, ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ಇನ್ನು ಹೊಸ ಎಂಜಿ ಕಾಮೆಟ್ ಎಲೆಕ್ಟ್ರಿಕ್ ಕಾರು ಹಲವಾರು ವಿಶೇಷತೆಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಾಮೆಟ್ ಇವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಪೇಸ್, ಪ್ಲೇ ಮತ್ತು ಪ್ಲಶ್ ಎನ್ನುವ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಪೇಸ್ ವೆರಿಯೆಂಟ್ ರೂ. 6.99 ಲಕ್ಷ ಬೆಲೆ ಹೊಂದಿದ್ದರೆ ಪ್ಲೇ ವೆರಿಯೆಂಟ್ ರೂ. 7.88 ಲಕ್ಷ ಮತ್ತು ಟಾಪ್ ಎಂಡ್ ಪ್ಲಶ್ ವೆರಿಯೆಂಟ್ ರೂ. 9.24 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಸಣ್ಣಗಾತ್ರದ ಎಲೆಕ್ಟ್ರಿಕ್ ಕಾರುಗಳಲ್ಲಿಯೇ ವಿಶೇಷ ಸೌಲಭ್ಯಗಳನ್ನು ಹೊಂದಿರುವ ಕಾಮೆಟ್ ಇವಿ ಕಾರು ಸದ್ಯ 17.3kWh ಬ್ಯಾಟರಿ ಪ್ಯಾಕ್ ಜೊತೆಗೆ ಪ್ರತಿ ಚಾರ್ಜ್ ಗೆ ಗರಿಷ್ಠ 230 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಬಾಕ್ಸಿ ಡಿಸೈನ್ ನೊಂದಿಗೆ ಆಕರ್ಷಕ ಫೀಚರ್ಸ್ ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಜೊತೆಗೆ ಹೊಸ ಸ್ಮಾರ್ಟ್ ಎಲೆಕ್ಟ್ರಿಕ್ ಕಾರಿನಲ್ಲಿ ಹಲವಾರು ಫೀಚರ್ಸ್ ನೀಡಲಾಗಿದ್ದು, ಇದರಲ್ಲಿ 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ 3.3kW ಹೋಂ ಚಾರ್ಜರ್ ನೀಡಲಾಗಿದ್ದು, ಇದರೊಂದಿಗೆ ಸೊನ್ನೆಯಿಂದ 100% ಬ್ಯಾಟರಿ ಚಾರ್ಜ್ ಆಗಲು 7 ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಅದೇ ರೀತಿ 7.4 kW ಚಾರ್ಜರ್ ಉಪಯೋಗ ಮಾಡಿ ಜಾರ್ಜ್ ಮಾಡಿದ್ದಲ್ಲಿ ಸೊನ್ನೆಯಿಂದ 100% ಬ್ಯಾಟರಿ ಚಾರ್ಜ್ ಆಗುವುದಕ್ಕೆ ಕೇವಲ 3.5 ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್‌ ಗಳ ಸುರಕ್ಷತೆ ಹೊಂದಿರುವ ಕಾರುಗಳು!

ಎಂಜಿ ಕಾಮೆಟ್ ಕಾರು ಸಣ್ಣ ಗಾತ್ರದ ಕಾರು ಮಾದರಿಯಾಗಿದ್ದರೂ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಇದರಲ್ಲಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ ಸೇರಿದಂತೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸೌಲಭ್ಯಗಳಿವೆ.