Citroen Discounts: ಸಿಟ್ರನ್ ಸಿ3 ಮತ್ತು ಸಿ3 ಏರ್‌ಕ್ರಾಸ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
ಸಿಟ್ರನ್ ಇಂಡಿಯಾ ಕಂಪನಿಯ ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ರೂ. 3.50 ಲಕ್ಷದ ತನಕ ಡಿಸ್ಕೌಂಟ್ ಪಡೆಯಬಹುದಾಗಿದೆ.
ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಸಿಟ್ರನ್ ಇಂಡಿಯಾ (Citroen India) ಕಂಪನಿಯು ತನ್ನ ಹೊಸ ಕಾರುಗಳ ಖರೀದಿ ಮೇಲೆ ಫೆಬ್ರವರಿ ಅವಧಿಯ ಡಿಸ್ಕೌಂಟ್ ನೀಡುತ್ತಿದ್ದು, ಹೊಸ ಆಫರ್ ಗಳು ಸಿ3 ಮೈಕ್ರೊ ಎಸ್ ಯುವಿ, ಸಿ3 ಏರ್‌ಕ್ರಾಸ್ ಮತ್ತು ಸಿ5 ಏರ್‌ಕ್ರಾಸ್ ಕಾರುಗಳ ಮೇಲೆ ಲಭ್ಯವಿವೆ.
ಹೊಸ ಆಫರ್ ಗಳಲ್ಲಿ ಸಿಟ್ರನ್ ಸಿ3 ಕಾರಿನ ಮೇಲೆ ರೂ. 1.50 ಲಕ್ಷದ ತನಕ ಆಫರ್ ನೀಡಲಾಗುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 6.16 ಲಕ್ಷದಿಂದ ರೂ. 9.08 ಲಕ್ಷ ಬೆಲೆ ಹೊಂದಿದೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಸಿ3 ಕಾರು ಎಂಟ್ರಿ ಲೆವಲ್ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿದೆ. ಇದು ಮಾರುತಿ ಸುಜುಕಿ ಇಗ್ನಿಸ್, ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ ಟರ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಎಡಿಎಎಸ್ ಸೌಲಭ್ಯ ಹೊಂದಿರುವ ಕಾರುಗಳಿವು!
ಸಿಟ್ರನ್ ಕಂಪನಿಯು ಸಿ3 ಏರ್‌ಕ್ರಾಸ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಖರೀದಿಯ ಮೇಲೆ ರೂ. 1.90 ಲಕ್ಷದ ತನಕ ಆಫರ್ ನೀಡಲಾಗುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 14.27 ಲಕ್ಷ ಬೆಲೆ ಹೊಂದಿದೆ. 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಸಿ3 ಏರ್‌ಕ್ರಾಸ್ ಕಾರು ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಜೊತೆಗೆ ಸಿ3 ಏರ್‌ಕ್ರಾಸ್ ಕಾರು 5 ಸೀಟರ್ ಮತ್ತು 7 ಸೀಟರ್ ಆಯ್ಕೆ ಹೊಂದಿದ್ದು, ಇದು ಕ್ರೆಟಾಗೆ ಉತ್ತಮ ಪೈಪೋಟಿಯಾಗಿದೆ.
ಹೊಸ ಸಿ3 ಏರ್‌ಕ್ರಾಸ್ ನಲ್ಲಿ ಸಿಟ್ರನ್ ಕಂಪನಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಿದ್ದು, ಇದು 110 ಹಾರ್ಸ್ ಪವರ್ ಮತ್ತು 190 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 5 ಸೀಟರ್ ಮಾದರಿಗಿಂತ 7 ಸೀಟರ್ ಮಾದರಿಗಾಗಿ ರೂ. 35 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರುತ್ತವೆ.
ಇದನ್ನೂ ಓದಿ: ಈ ತಿಂಗಳು ಬಿಡುಗಡೆಯಾಗಲಿರುವ ಟಾಪ್ 5 ಹೊಸ ಕಾರುಗಳಿವು!
ಇನ್ನು ಸಿಟ್ರನ್ ಕಂಪನಿಯು ಸಿ5 ಏರ್‌ಕ್ರಾಸ್ ಫುಲ್ ಸೈಜ್ ಎಸ್ ಯುವಿ ಖರೀದಿಯ ಮೇಲೂ ಅತ್ಯತ್ತಮ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ರೂ. 3.50 ಲಕ್ಷ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೈ ಎಂಡ್ ಮಾದರಿಯ ಮೇಲೆ ಹೆಚ್ಚಿನ ಉಳಿತಾಯ ಆಯ್ಕೆ ನೀಡಲಾಗಿದೆ. ಸಿ5 ಏರ್‌ಕ್ರಾಸ್ ಕಾರು ಸದ್ಯ ರೂ. 36.91 ಲಕ್ಷದಿಂದ ರೂ. 37.67 ಲಕ್ಷ ಬೆಲೆ ಹೊಂದಿದ್ದು, ಇದು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುತ್ತದೆ.
Published On - 10:11 pm, Thu, 8 February 24