AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Citroen Basalt: ಅಚ್ಚರಿಯ ಬೆಲೆಗೆ ಭರ್ಜರಿ ಫೀಚರ್ಸ್ ಹೊಂದಿರುವ ಸಿಟ್ರನ್ ಬಸಾಲ್ಟ್ ಬಿಡುಗಡೆ

ಸಿಟ್ರನ್ ಕಂಪನಿಯ ಭಾರತದಲ್ಲಿ ತನ್ನ ಹೊಸ ಬಸಾಲ್ಟ್ ಕೂಪೆ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ಅಚ್ಚರಿಯ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Citroen Basalt: ಅಚ್ಚರಿಯ ಬೆಲೆಗೆ ಭರ್ಜರಿ ಫೀಚರ್ಸ್ ಹೊಂದಿರುವ ಸಿಟ್ರನ್ ಬಸಾಲ್ಟ್ ಬಿಡುಗಡೆ
ಸಿಟ್ರನ್ ಬಸಾಲ್ಟ್
Praveen Sannamani
|

Updated on: Aug 09, 2024 | 3:36 PM

Share

ಭಾರತದಲ್ಲಿ ಬಜೆಟ್ ಬೆಲೆಯ ಪ್ರೀಮಿಯಂ ಕಾರುಗಳ ಮೂಲಕ ಹೊಸ ಸಂಚಲನ ಮೂಡಿಸಿರುವ ಸಿಟ್ರನ್ (Citroen) ಕಂಪನಿಯು ತನ್ನ ಬಹುನೀರಿಕ್ಷಿತ ಬಸಾಲ್ಟ್ ಕೂಪೆ ಎಸ್‌ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 7.99 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹೊಸ ಬಸಾಲ್ಟ್ ಬಿಡುಗಡೆಯೊಂದಿಗೆ ಸದ್ಯ ಆರಂಭಿಕ ಮಾದರಿಯ ಬೆಲೆಯನ್ನು ಮಾತ್ರ ಘೋಷಣೆ ಮಾಡಿರುವ ಸಿಟ್ರನ್ ಕಂಪನಿಯು ಅಕ್ಟೋಬರ್ 31ರ ಒಳಗಾಗಿ ಸಂಪೂರ್ಣ ಬೆಲೆ ಮಾಹಿತಿ ಬಹಿರಂಗಪಡಿಸಲಿದ್ದು, ಸಂಪೂರ್ಣ ಬೆಲೆ ಮಾಹಿತಿಯೊಂದಿಗೆ ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

Citroen Basalt (1)

ಭಾರತದಲ್ಲಿ ಸದ್ಯ ಸಿ3, ಇಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿಯು ಇದೀಗ ಬಸಾಲ್ಟ್ ಎಸ್ ಯುವಿ ಕೂಪೆ ಪರಿಚಯಿಸಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿ3 ಏರ್ ಕ್ರಾಸ್ ಆಧರಿಸಿ ನಿರ್ಮಾಣಗೊಂಡಿದೆ. ಹೊಸ ಕಾರು ಟಾಟಾ ಕರ್ವ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಿಂತಲೂ ರೂ. 1 ಲಕ್ಷಕ್ಕಿಂತಲೂ ಕಡಿಮೆ ಆರಂಭಿಕ ಬೆಲೆ ಹೊಂದಿದೆ.

Citroen Basalt (2)

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿರುವ ಹೊಸ ಬಸಾಲ್ಟ್ ಕಾರಿನಲ್ಲಿ ಸಿ3 ಏರ್ ಕ್ರಾಸ್ನಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ಸ್ಪೋರ್ಟಿ ಲುಕ್ ನೊಂದಿಗೆ ಕ್ರೋಮ್ ಲೈನ್ ಹೊಂದಿರುವ ಚೆವರಾನ್ ಲೊಗೊ, ಎರಡು ಹಂತಗಳಲ್ಲಿ ವಿಭಾಗಗೊಂಡಿರುವ ಫ್ರಂಟ್ ಗ್ರೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರನ್ನಿಂಗ್ ಲ್ಯಾಂಪ್ಸ್, ಕ್ಲಾಡಿಂಗ್ ಹೊಂದಿರುವ ವ್ಹೀಲ್ ಆರ್ಚ್, 17 ಇಂಚಿನ ಅಲಾಯ್ ವ್ಹೀಲ್ ಗಳು, ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳುವ ಡೋರ್ ಗಳು, ಹಾಲೋಜೆನ್ ಟೈಲ್ ಲ್ಯಾಂಪ್ಸ್, 3ಡಿ ಎಫೆಕ್ಟ್ ಹೊಂದಿರುವ ಸ್ಪೋರ್ಟಿ ಡ್ಯುಯಲ್ ಟೋನ್ ಬಂಪರ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.

Citroen Basalt (4)

ಹಾಗೆಯೇ ಹೊಸ ಕಾರಿನ ಒಳಭಾಗದ ಫೀಚರ್ಸ್ ಗಳು ಸಹ ಗ್ರಾಹಕರನ್ನು ಸೆಳೆಯಲಿದ್ದು, ಸಿ3 ಏರ್ ಕ್ರಾಸ್ ನಲ್ಲಿರುವಂತೆ ಹೊಸ ವಿನ್ಯಾಸದ ಹ್ವಾಕ್ ಪ್ಯಾನೇಲ್ ನೊಂದಿಗೆ ಟಾಂಗಲ್ ಸ್ವಿಚ್ ಗಳು, ಆಟೋಮ್ಯಾಟಿಕ್ ಎಸಿ, ಅತ್ಯುತ್ತಮವಾಗಿ ಆರ್ಮ್ ರೆಸ್ಟ್, ಹೊಂದಾಣಿಕೆ ಮಾಡಬಹುದಾದ ಹಿಂಬದಿಯ ಆಸನಗಳ ಹೆಡ್ ರೆಸ್ಟ್, ರಿಯರ್ ಎಸಿ ವೆಂಟ್ಸ್ ಜೊತೆಗೆ 470 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ. ಜೊತೆಗೆ ಕನೆಕ್ಟಿವಿ ಸೌಲಭ್ಯಕ್ಕಾಗಿ 10..25 ಇಂಚಿನ ಪ್ಲೊಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಆಲ್ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಮತ್ತು ತ್ರಿ ಸ್ಪೋಕ್ ಸ್ಟೀರಿಂಗ್ ವ್ಹೀಲ್ ನೀಡಲಾಗಿದೆ.

Citroen Basalt (3)

ಇದರೊಂದಿಗೆ ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಗ್ರಾಹಕರು ಇದರಲ್ಲಿ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಮಾಡಬಹುದಾಗಿದೆ. ಮೊದಲನೇದಾಗಿ ಆರಂಭಿಕ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 82 ಹಾರ್ಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಟಾಪ್ ಎಂಡ್ ಟರ್ಬೊ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿದ್ದು, ಇದು 110 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಗೆ ಇದು 18 ಕಿ.ಮೀ ನಿಂದ 19.5 ಕಿ.ಮೀ ಮೈಲೇಜ್ ನೀಡಲಿದೆ.

ಇನ್ನು ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿಯು ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಇಎಸ್ ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಗಳಿದ್ದು, ಇದು ಕ್ರ್ಯಾಶ್ ಟೆಸ್ಟಿಂಗ್ ನಲ್ಲೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವ ನೀರಿಕ್ಷೆಯಲ್ಲಿದೆ.