ಎಥೆನಾಲ್‌ ಪ್ರೇರಿತ ವಾಹನಗಳ ಬಿಡುಗಡೆಗೆ ದಿನಗಣನೆ: ನಿತಿನ್ ಗಡ್ಕರಿ

ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಪರಿಸರ ಸ್ನೇಹಿ ವಾಹನಗಳ ಮಾದರಿಗಳ ಬಳಕೆಯತ್ತ ಹೆಚ್ಚಿನ ಆದ್ಯತೆ ನೀಡಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.

ಎಥೆನಾಲ್‌ ಪ್ರೇರಿತ ವಾಹನಗಳ ಬಿಡುಗಡೆಗೆ ದಿನಗಣನೆ: ನಿತಿನ್ ಗಡ್ಕರಿ
ಎಥೆನಾಲ್‌ ಪ್ರೇರಿತ ವಾಹನಗಳ ಬಿಡುಗಡೆಗೆ ದಿನಗಣನೆ: ನಿತಿನ್ ಗಡ್ಕರಿ
Follow us
Praveen Sannamani
|

Updated on:Jun 30, 2023 | 9:32 PM

ಸಾಂಪ್ರದಾಯಿಕ ವಾಹನಗಳ ಬಳಕೆ ತಗ್ಗಿಸುವುದರ ಜೊತೆಗೆ ಪರಿಸರ ಸ್ನೇಹಿ ವಾಹನಗಳ ಬಳಕೆ ಹೆಚ್ಚಿಸುವತ್ತ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಶೇಕಡಾ 100ರಷ್ಟು ಪರ್ಯಾಯ ಇಂಧನವಾದ ಎಥೆನಾಲ್‌ನಿಂದಲೇ ಚಲಿಸುವ ವಾಹನಗಳ ಬಿಡುಗಡೆಯಾಗುತ್ತಿರುವುದಾಗಿದ ಮಾಹಿತಿ ಹಂಚಿಕೊಂಡಿದೆ.

ಸಂಪೂರ್ಣ ಎಥೆನಾಲ್‌ ಚಾಲಿತ ವಾಹನಗಳ ಬಿಡುಗಡೆ ಕುರಿತಾಗಿ ಮಾತನಾಡಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮುಂಬರುವ ಆಗಸ್ಟ್‌ ವೇಳೆಗೆ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಎಥೆನಾಲ್‌ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಾಹನಗಳ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿ ಹೊಸ ದಾಖಲೆ ಸೃಷ್ಠಿಸಿದ ಭಾರತ!

ಮಾಲಿನ್ಯ ಮುಕ್ತ ಮಾಡುವುದರ ಜೊತೆಗೆ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಎಥೆನಾಲ್‌ ಚಾಲಿತ ವಾಹನಗಳನ್ನು ಬಿಡುಗಡೆಗೆ ಪ್ರೋತ್ಸಾಹಿಸಲಾಗುತ್ತಿದ್ದು, ಇವು ಸಾಮಾನ್ಯ ವಾಹನಗಳಿಂತಲೂ ಕಡಿಮೆ ವೆಚ್ಚದಾಯಕ ಮಾದರಿಯಾಗಿರುವುದರ ಜೊತೆಗೆ ಪರಿಸರ ಸ್ನೇಹಿ ವಾಹನಗಳಾಗಿವೆ.

ಪ್ರಸುತ್ತ ಮಾರುಕಟ್ಟೆಯಲ್ಲಿ ಎಥೆನಾಲ್‌ ಪ್ರತಿ ಲೀಟರ್‌ಗೆ 66 ರೂ. ದರವಿದ್ದು, ಅದೇ ರೀತಿಯಾಗಿ ಪೆಟ್ರೋಲ್ ಪ್ರತಿ ಲೀಟರ್ ಗೆ 108 ರೂ. ಬೆಲೆ ಹೊಂದಿದೆ. ಹೀಗಾಗಿ ಪೆಟ್ರೋಲ್ ಬೆಲೆ ಹೋಲಿಕೆ ಮಾಡಿದ್ದಲ್ಲಿ ಎಥೆನಾಲ್‌ ಅಗ್ಗವಾಗಿದ್ದು, ಇವು ಪೆಟ್ರೋಲ್ ನಷ್ಟೇ ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘಕಾಲಿಕ ಎಂಜಿನ್ ಬಾಳ್ವಿಕೆಗೆ ಹಿಂದಿರುಗಿಸುತ್ತದೆ.

ಸದ್ಯ ಭಾರತದಲ್ಲಿ ಎಥೆನಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪಡೆದುಕೊಳ್ಳಲಾಗುತ್ತಿದ್ದು, ಇದು ಒಂದು ರೀತಿಯ ಆಲ್ಕೋಹಾಲ್ ಸಾಂದ್ರತೆ ಹೊಂದಿರುತ್ತದೆ. ಇದನ್ನು ಪೆಟ್ರೋಲ್‌ನೊಂದಿಗೆ ಬೆರೆಸುವ ಮೂಲಕ ವಾಹನಗಳಲ್ಲಿ ಬಳಸಬಹುದಾಗಿದ್ದು, ಕಬ್ಬಿನ ರಸದಿಂದ ಮಾತ್ರವಲ್ಲದೇ ಪಿಷ್ಟ ಒಳಗೊಂಡಿರುವ ಇತರೆ ಬೆಳೆಗಳು ಮತ್ತು ತರಕಾರಿಯಿಂದಲೂ ಎಥೆನಾಲ್ ಅನ್ನು ಉತ್ಪಾದಿಸಬಹುದಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ವಿಶ್ವಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅವಲಂಬನೆ ತಗ್ಗಿಸಲು ಪರಿಸರ ಸ್ನೇಹಿ ವಾಹನಗಳ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಭಾರತ ಸರ್ಕಾರವು ಸಹ ಎಥೆನಾಲ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ನೋಡಲಾಗುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇವಿ ವಾಹನಗಳ ಖರೀದಿಗೆ ಹೆಚ್ಚಿನ ಮಟ್ಟದ ಸಬ್ಸಡಿ ಸೇರಿದಂತೆ ವಿವಿಧ ಪ್ರೋತ್ಸಾಹ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಇವಿ ವಾಹನಗಳು ಸಾಂಪ್ರಾದಾಯಿಕ ವಾಹನಗಳಿಂತಲೂ ಬೆಲೆಯಲ್ಲಿ ದುಬಾರಿ ಎನ್ನಿಸಿರುವುದಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಇವಿ ವಾಹನಗಳ ಜೊತೆಯಲ್ಲಿ ಕಡಿಮೆ ವೆಚ್ಚ ಜೊತೆ ಪರಿಸರ ಸ್ನೇಹಿಯಾಗಿರುವ ಪರ್ಯಾಯ ಇಂಧನ ಪ್ರೇರಿತ ವಾಹನಗಳಿಗೂ ಆದ್ಯತೆ ನೀಡುತ್ತಿದೆ.

Published On - 9:31 pm, Fri, 30 June 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್