AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಚೂನರ್ ಗೆ ಪೈಪೋಟಿಯಾಗಿ ರಗಡ್ ಲುಕ್ ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎವರೆಸ್ಟ್

ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಉತ್ಪನ್ನಗಳೊಂದಿಗೆ ಮರಳಿಬರುವ ಸುಳಿವು ನೀಡಿದ್ದು, ಮೊದಲ ಹಂತದಲ್ಲಿಯೇ ತನ್ನ ಜನಪ್ರಿಯ ಎಂಡೀವರ್ ಎಸ್ ಯುವಿಯನ್ನು ಬಿಡುಗಡೆ ಮಾಡುತ್ತಿದೆ.

ಫಾರ್ಚೂನರ್ ಗೆ ಪೈಪೋಟಿಯಾಗಿ ರಗಡ್ ಲುಕ್ ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎವರೆಸ್ಟ್
ಫೋರ್ಡ್ ಎವರೆಸ್ಟ್
Praveen Sannamani
|

Updated on:Apr 13, 2024 | 6:41 PM

Share

ಭಾರತದಲ್ಲಿ ಸದ್ಯ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಫೋರ್ಡ್ (Ford) ಕಂಪನಿ ಇದೀಗ ಮತ್ತೆ ಮರಳಿ ಬರುವ ಸುಳಿವು ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಕಾರುಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಫೋರ್ಡ್ ಕಂಪನಿಯು ಇದೀಗ ಹೊಸ ಉತ್ಪನ್ನಗಳೊಂದಿಗೆ ಭಾರತಕ್ಕೆ ಮರಳಿ ಬರುತ್ತಿದ್ದು, ಮೊದಲ ಹಂತದಲ್ಲಿಯೇ ತನ್ನ ಜನಪ್ರಿಯ ಎಸ್ ಯುವಿ ಆವೃತ್ತಿಯಾಗಿದ್ದ ಎಂಡೀವರ್ ಮಾದರಿಯನ್ನು ಮಹತ್ವದ ಬದಲಾವಣೆಯೊಂದಿಗೆ ಮರುಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಫೋರ್ಡ್ ಕಂಪನಿಯು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಎವರೆಸ್ಟ್ ಎಸ್ ಯುವಿಯನ್ನೇ ಇದೀಗ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಇದು ತಾಂತ್ರಿಕವಾಗಿ ಎಂಡೀವರ್ ಎಸ್ ಯುವಿ ಆವೃತ್ತಿಯಾಗಿದೆ. ಎಂಡೀವರ್ ಕಾರು ಮಾದರಿಯು ಭಾರತವನ್ನು ಹೊರತುಪಡಿಸಿ ವಿದೇಶಿ ಮಾರುಕಟ್ಟೆಗಳಲ್ಲಿ ಸದ್ಯ ಎವರೆಸ್ಟ್ ಹೆಸರಿನಲ್ಲಿಯೇ ಮಾರಾಟವಾಗುತ್ತಿದ್ದು, ಇದೇ ಮಾದರಿಯು ಇದೀಗ ಪ್ರಮುಖ ಬದಲಾವಣೆಗಳೊಂದಿಗೆ ಮರಳಿಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಸುರಕ್ಷತೆ ವಿಚಾರದಲ್ಲಿ ಗ್ರಾಹಕರ ಆಕ್ರೋಶಕ್ಕೆ ಗುರಿಯಾದ ಸಿಟ್ರನ್ ಇಸಿ3

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎವರೆಸ್ಟ್ ಮಾದರಿಯನ್ನೇ ಆಧರಿಸಿರುವ ದೇಶಿಯ ಮಾರುಕಟ್ಟೆಯಲ್ಲಿನ ಎವರೆಸ್ಟ್ ಕಾರು ಮಾದರಿಯು ಲ್ಯಾಡರ್-ಫ್ರೇಮ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗುತ್ತಿದ್ದು, ಇದು ಈ ಹಿಂದಿನ ಎಂಡೀವರ್ ಗಿಂತಲೂ ಹೆಚ್ಚು ಸುಧಾರಿತ ವಿನ್ಯಾಸ ವೈಶಿಷ್ಟ್ಯತೆ ಮತ್ತು ಫೀಚರ್ಸ್ ಗಳ ಸೌಲಭ್ಯ ಒಳಗೊಂಡಿರಲಿದೆ.

ಟೊಯೊಟಾ ಫಾರ್ಚೂನರ್ ಗೆ ಭಾರೀ ಪೈಪೋಟಿಯಾಗಿ ಹೊಸ ಎವೆರೆಸ್ಟ್ ಕಾರು ಮಾದರಿಯನ್ನು ಈ ಬಾರಿ ಮಹತ್ವದ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿರುವ ಫೋರ್ಡ್ ಕಂಪನಿಯು ವಿವಿಧ ಎಂಜಿನ್ ಆಯ್ಕೆಗಳಲ್ಲಿ ಪರಿಚಯಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎವರೆಸ್ಟ್ ನಲ್ಲಿ ಸದ್ಯ 2.0 ಲೀಟರ್ ಸಿಂಗಲ್ ಟರ್ಬೊ ಡೀಸೆಲ್, 2.0 ಲೀಟರ್ ಟ್ವಿನ್ ಟರ್ಬೊ ಡೀಸೆಲ್ ಮತ್ತು 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗುವ ಎವರೆಸ್ಟ್ ನಲ್ಲೂ ಕೂಡಾ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ವಿವಿಧ ಎಂಜಿನ್ ಆಯ್ಕೆ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಈ ಮೂಲಕ ಭಾರತದಲ್ಲಿ ಬಿಡುಗಡೆಯಾಗಲಿರುವ ಎವರೆಸ್ಟ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ 4×2 ಮತ್ತು 4×4 ಡ್ರೈವ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಬಹುದಾಗಿದ್ದು, ಇದರಲ್ಲಿರುವ ಸುರಕ್ಷಾ ಫೀಚರ್ಸ್ ಗಳು ಸಹ ಗಮನಸೆಳೆಯಲಿವೆ. ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 9 ಏರ್ ಬ್ಯಾಗ್ ಗಳು ಸೇರಿದಂತೆ ಎಡಿಎಎಸ್ ಫೀಚರ್ಸ್ ಸಹ ನೀಡಬಹುದಾಗಿದ್ದು, ಇದು ಈ ಹಿಂದಿನ ಎಂಡೀವರ್ ಗಿಂತಲೂ ತುಸು ದುಬಾರಿಯಾಗಿರಲಿದೆ.

Published On - 6:40 pm, Sat, 13 April 24