Honda Dio H-Smart: ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ

Honda Dio H-Smart: ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ

Honda Dio H-Smart: ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್  ಬಿಡುಗಡೆ
ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ
Follow us
Praveen Sannamani
|

Updated on: Jun 09, 2023 | 9:44 PM

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿರುವ ಹೋಂಡಾ ಟು ವ್ಹೀಲರ್(Honda 2 Wheelers India) ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಹೆಚ್-ಸ್ಮಾರ್ಟ್(H-Smart)ವೆರಿಯೆಂಟ್ ಬಿಡುಗಡೆ ಮಾಡುತ್ತಿದ್ದು, ಇದೀಗ ಜನಪ್ರಿಯ ಡಿಯೋ(Dio) ಸ್ಕೂಟರ್ ನಲ್ಲೂ ಕೂಡಾ ಹೆಚ್-ಸ್ಮಾರ್ಟ್ ವೆರಿಯೆಂಟ್ ಪರಿಚಯಿಸಿದೆ.

ವಿಶೇಷ ಫೀಚರ್ಸ್ ಹೊಂದಿರುವ ಡಿಯೋ ಹೆಚ್-ಸ್ಮಾರ್ಟ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77,712 ಬೆಲೆ ಹೊಂದಿದ್ದು, ಇದು ಈ ಹಿಂದೆ ಬಿಡುಗಡೆಯಾದ ಆಕ್ಟೀವಾ 6ಜಿ ಹೆಚ್-ಸ್ಮಾರ್ಟ್ ಮಾದರಿಯಲ್ಲಿ ಹೊಸ ಫೀಚರ್ಸ್ ಪಡೆದುಕೊಂಡಿದೆ.

ಡಿಯೋ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಇದೀಗ ಹೋಂಡಾ ಕಂಪನಿಯು ಡಿಲಕ್ಸ್ ವೆರಿಯೆಂಟ್ ಆಧರಿಸಿ ಹೆಚ್-ಸ್ಮಾರ್ಟ್ ವೆರಿಯೆಂಟ್ ಪರಿಚಯಿಸಿದೆ. ಹೊಸ ಆವೃತ್ತಿಯು ಡಿಲಕ್ಸ್ ವೆರಿಯೆಂಟ್ ಗಿಂತಲೂ ರೂ. 3,500 ಹೆಚ್ಚುವರಿ ಬೆಲೆ ಹೊಂದಿದ್ದು, ವಿಶೇಷ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: 2023ರ ಹೀರೋ ಪ್ಯಾಶನ್ ಪ್ಲಸ್ ಬೈಕ್ ಬಿಡುಗಡೆ

ಹೆಚ್-ಸ್ಮಾರ್ಟ್ ವೆರಿಯೆಂಟ್ ವಿಶೇಷತೆಗಳೇನು? ಹೋಂಡಾ ಕಂಪನಿಯು ಗ್ರಾಹಕರಿಗೆ ವಿಭಿನ್ನ ಚಾಲನಾ ಅನುಭವ ನೀಡುವುದರ ಜೊತೆಗೆ ವಾಹನಗಳ ಸುರಕ್ಷತೆ ಹೆಚ್ಚಿಸಲು ನಿಟ್ಟಿನಲ್ಲಿ ಹೊಸದಾಗಿ ಹೆಚ್-ಸ್ಮಾರ್ಟ್ ಫೀಚರ್ಸ್ ಹೊಂದಿರುವ ವೆರಿಯೆಂಟ್ ಪರಿಚಯಿಸುತ್ತಿದ್ದು, ಹೊಸ ವೆರಿಯೆಂಟ್ ನಲ್ಲಿ ಹಲವಾರು ಸ್ಮಾರ್ಟ್ ಫೀಚರ್ಸ್ ಒಳಗೊಂಡ ಪ್ಯಾಕೇಜ್ ನೀಡಲಾಗುತ್ತಿದೆ.

ಹೆಚ್-ಸ್ಮಾರ್ಟ್ ಪ್ಯಾಕೇಜ್ ನಲ್ಲಿ ಸ್ಮಾರ್ಟ್ ಸೇಫ್, ಸ್ಮಾರ್ಟ್ ಅನ್ ಲಾಕ್, ಸ್ಮಾರ್ಟ್ ಫೈಂಡ್ ಜೊತೆಗೆ ಸುಧಾರಿತ ಡಿಸ್ ಪ್ಲೇ ಸೌಲಭ್ಯ ಜೋಡಣೆ ಮಾಡಲಾಗಿದ್ದು, ಹೊಸ ಡಿಸ್ ಪ್ಲೇ ನಲ್ಲಿ ಇದೀಗ ರಿಯಲ್ ಟೈಮ್ ಮೈಲೇಜ್ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿಆ್ಯಂಟಿ ಥೆಫ್ಟ್ ಮತ್ತು ರೀಮೊಟ್ ಕೀ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಇವು ಹೊಸ ವಾಹನಕ್ಕೆ ಹೆಚ್ಚಿನ ಸುರಕ್ಷತೆ ನೀಡುವುದರ ಜೊತೆ ಗ್ರಾಹಕರಿಗೆ ವಿಭಿನ್ನ ಅನುಭವ ನೀಡಲಿವೆ.

ಇದನ್ನೂ ಓದಿ:  ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಹೊಸ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ 7.65 ಹಾರ್ಸ್ ಪವರ್ ಉತ್ಪಾದನೆ ಪ್ರೇರಿತ 109.51 ಸಿಸಿ ಎಂಜಿನ್ ಜೋಡಿಸಲಾಗಿದ್ದು, ಇದು ಕಳೆದ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡದೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್