AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಅಡ್ವೆಂಚರ್ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಹೊಸ ಕ್ರೆಟಾ ಅಡ್ವೆಂಚರ್ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಬಿಡುಗಡೆ ಮಾಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಹ್ಯುಂಡೈ ಕ್ರೆಟಾ ಅಡ್ವೆಂಚರ್ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಬಿಡುಗಡೆ
ಹ್ಯುಂಡೈ ಕ್ರೆಟಾ ಅಡ್ವೆಂಚರ್ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಬಿಡುಗಡೆ
Praveen Sannamani
|

Updated on:Aug 07, 2023 | 8:05 PM

Share

ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ(Hyundai) ಇಂಡಿಯಾ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಕ್ರೆಟಾ ಅಡ್ವೆಂಚರ್(Creta Adventure) ಮತ್ತು ಅಲ್ಕಾಜರ್ ಅಡ್ವೆಂಚರ್(Alcazar Adventure) ಹೊಸ ಆವೃತ್ತಿಗಳನ್ನು ಪರಿಚಯಿಸಿದ್ದು, ಹೊಸ ಕಾರು ಆವೃತ್ತಿಗಳು ವಿಶೇಷ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಕ್ರೆಟಾ ಅಡ್ವೆಂಚರ್ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.17 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.89 ಲಕ್ಷ ಬೆಲೆ ಹೊಂದಿದ್ದು, ನೈಟ್ ಎಡಿಷನ್ ಆಧರಿಸಿ ಬಿಡುಗಡೆಯಾಗಿದೆ. ಹಾಗೆಯೇ ಅಲ್ಕಾಜರ್ ಅಡ್ವೆಂಚರ್ ಆವೃತ್ತಿಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19.03 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 21.23 ಲಕ್ಷ ಬೆಲೆ ಹೊಂದಿದೆ.

Hyundai Creta Adventure (1)

ಅಡ್ವೆಂಚರ್ ಎಡಿಷನ್ ವಿಶೇಷತೆಗಳೇನು? ಕ್ರೆಟಾ ಮತ್ತು ಅಲ್ಕಾಜರ್ ಅಡ್ವೆಂಚರ್ ಎಡಿಷನ್ ಗಳು ಆಕರ್ಷಕವಾಗಿರುವ ಖಾಕಿ ಬಣ್ಣದೊಂದಿಗೆ ಬ್ಲ್ಯಾಕ್ ರೂಫ್ ಹೊಂದಿದ್ದು, ಅಡ್ವೆಂಚರ್ ಎಡಿಷನ್ ಬ್ಯಾಡ್ಜ್ ಸ್ಪೋರ್ಟಿಯಾಗಿದೆ. ಜೊತೆಗೆ ಬ್ಲ್ಯಾಕ್ ಔಟ್ ಗ್ರಿಲ್, ರಿಯರ್ ಮತ್ತು ಸೈಡ್ ಸ್ಕಿಡ್ ಪ್ಲೇಟ್, ವಿಂಗ್ ಮಿರರ್, 17 ಇಂಚಿನ ಅಲಾಯ್ ವ್ಹೀಲ್ ಗಳು, ಟೈಲ್ ಗೇಟ್ ಗಾರ್ನಿಶ್, ಫಾಗ್ ಲ್ಯಾಂಪ್ ಹೌಸಿಂಗ್ ಮತ್ತು ಕ್ರೆಟಾ ಕಾರಿನಲ್ಲಿ ಸಿ ಪಿಲ್ಲರ್ ಟ್ರಿಮ್ ಜೋಡಣೆ ಹೊಂದಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ

ಹಾಗೆಯೇ ಹೊಸ ಅಡ್ವೆಂಚರ್ ಎಡಿಷನ್ ಕಾರುಗಳ ಒಳಭಾಗವೂ ಕೂಡಾ ಸ್ಪೋರ್ಟಿಯಾಗಿದ್ದು, ಆಲ್ ಬ್ಲ್ಯಾಕ್ ಥೀಮ್ ಜೊತೆ ಗ್ರೀನ್ ಇನ್ಸರ್ಟ್ ಜೋಡಣೆ ಹೊಂದಿದೆ. ಆಲ್ ಬ್ಲ್ಯಾಕ್ ಜೊತೆಗೆ ಸ್ಪೆಷಲ್ ಮ್ಯಾಟ್, ಸಿಲ್ವರ್ ಫುಟ್ ಪೆಡಲ್, ಗ್ರೀನ್ ಸ್ಟ್ರೀಚ್ ಸೀಟುಗಳು ಮತ್ತು ಗ್ರೀನ್ ಇನ್ಸರ್ಟ್ ಎಸಿ ವೆಂಟ್ಸ್ ಪಡೆದುಕೊಂಡಿದ್ದು, ಪರ್ಫಾಮೆನ್ಸ್ ಗೆ ಇವು ಮತ್ತಷ್ಟು ಪೂರಕವಾಗಿರಲಿವೆ.

Hyundai Alcazar Adventure

ಎಂಜಿನ್ ಮತ್ತು ಪರ್ಫಾಮೆನ್ಸ್ ಹ್ಯುಂಡೈ ಕಂಪನಿಯು ಹೊಸ ಕ್ರೆಟಾ ಅಡ್ವೆಂಚರ್ ಆವೃತ್ತಿಯಲ್ಲಿ ಕೇವಲ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಮಾತ್ರ ನೀಡುತ್ತಿದ್ದು, ಅಲ್ಕಾಜರ್ ಅಡ್ವೆಂಚರ್ ನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪರಿಚಯಿಸಿದೆ. ಇದರಲ್ಲಿ ಕ್ರೆಟಾ ಅಡ್ವೆಂಚರ್ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ ಅಲ್ಕಾಜರ್ ಅಡ್ವೆಂಚರ್ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿವೆ.

Hyundai Alcazar Adventure (1)

ಇದನ್ನೂ ಓದಿ: ಪನೊರಮಿಕ್ ಸನ್ ರೂಫ್ ಹೊಂದಿರುವ ಕಾರುಗಳಿವು!

ಇನ್ನು ಸಾಮಾನ್ಯ ಕ್ರೆಟಾ ಎಸ್ ಯುವಿ ಕಾರು ಮಾದರಿಯು ಇ, ಇಎಕ್ಸ್, ಎಸ್, ಎಸ್ ಪ್ಲಸ್, ಎಸ್ಎಕ್ಸ್ ಎಕ್ಸಿಕ್ಲ್ಯೂಟಿವ್, ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್ ಗಳನ್ನು ಹೊಂದಿದ್ದು, ಇವು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 10.87 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.20 ಲಕ್ಷ ಬೆಲೆ ಪಡೆದುಕೊಂಡಿವೆ. ಹಾಗೆಯೇ ಅಲ್ಕಾಜರ್ ಕಾರು ಮಾದರಿಯು 7 ಸೀಟರ್ ಸೌಲಭ್ಯದೊಂದಿಗೆ ಪ್ರೆಸ್ಟೀಜ್ ಎಕ್ಸಿಕ್ಲ್ಯೂಟಿವ್, ಪ್ರೆಸ್ಟೀಜ್(ಒ), ಪ್ಲ್ಯಾಟಿನಂ, ಪ್ಲ್ಯಾಟಿನಂ(ಒ), ಸಿಗ್ನಿಚರ್, ಸಿಗ್ನಿಚರ್(ಒ), ಸಿಗ್ನಿಚರ್ ಡ್ಯುಯಲ್ ಟೋನ್ ಮತ್ತು ಸಿಗ್ನಿಚರ್(ಒ) ಡ್ಯುಯಲ್ ಟೋನ್ ವೆರಿಯೆಂಟ್ ಗಳನ್ನು ಹೊಂದಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 16.77 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 21.23 ಲಕ್ಷ ಬೆಲೆ ಪಡೆದುಕೊಂಡಿವೆ.

Published On - 8:01 pm, Mon, 7 August 23

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​