Vayve Eva: ಬೆಲೆ ಕೇವಲ 3.25 ಲಕ್ಷ: ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ: ಬುಕಿಂಗ್ ಪ್ರಾರಂಭ

ಈ ಸೋಲಾರ್ ಎಲೆಕ್ಟ್ರಿಕ್ ಕಾರಿನ ಹೆಸರು ಇವಾ. ಇದು ಸೌರ ಶಕ್ತಿಯಿಂದ ಚಲಿಸುತ್ತದೆ. ನೀವು ಈ ಕಾರನ್ನು ಮುಂಗಡವಾಗಿ ಬುಕ್ ಮಾಡಲು ಬಯಸಿದರೆ, ಇದಕ್ಕಾಗಿ ನೀವು ಕೇವಲ 5 ಸಾವಿರ ರೂ. ಪಾವತಿಸಿದರೆ ಸಾಕು. ಹೀಗೆ ಮಾಡಿದರೆ ಕೂಡಲೇ ಈ ಕಾರನ್ನು ನಿಮಗಾಗಿ ಕಾಯ್ದಿರಿಸಲಾಗುತ್ತದೆ. ಆದರೆ, ನೀವು 2026 ರಲ್ಲಿ ಈ ಕಾರಿನ ವಿತರಣೆಯನ್ನು ಪಡೆಯಬಹುದಷ್ಟೆ.

Vayve Eva: ಬೆಲೆ ಕೇವಲ 3.25 ಲಕ್ಷ: ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ: ಬುಕಿಂಗ್ ಪ್ರಾರಂಭ
Vayve Eva
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on: Jan 21, 2025 | 6:42 PM

ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರು ಆಟೋ ಎಕ್ಸ್‌ಪೋ 2025ಕ್ಕೆ ಪ್ರವೇಶಿಸಿದೆ. ಈ ಸೋಲಾರ್ ಎಲೆಕ್ಟ್ರಿಕ್ ಕಾರಿನ ಹೆಸರು ಇವಾ. ಇದು ಸೌರ ಶಕ್ತಿಯಿಂದ ಚಲಿಸುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 3.25 ಲಕ್ಷ ರೂ. ಆಗಿದೆ. ಕಂಪನಿಯು ಇವಾವನ್ನು ಮೂರು ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಇದು 9 kWh, 12 kWh ಮತ್ತು 18 kWh ಅನ್ನು ಒಳಗೊಂಡಿದೆ. ಕಾರಿನ ಬೆಲೆ 3.25 ಲಕ್ಷ ರೂ. ನಿಂದ ಪ್ರಾರಂಭವಾಗಿ 5.99 ಲಕ್ಷ ರೂ. ವರೆಗೆ ಇದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಬ್ಯಾಟರಿ ಆಯ್ಕೆಯನ್ನು ಆಯ್ಕೆ ಮಾಡಬಹುದು. ಕಂಪನಿಯು ಈ ಕಾರಿನ ಮುಂಗಡ ಬುಕ್ಕಿಂಗ್ ಅನ್ನು ಸಹ ಪ್ರಾರಂಭಿಸಿದೆ.

ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರಿನ ಮುಂಗಡ ಬುಕಿಂಗ್:

ನೀವು ಈ ಕಾರನ್ನು ಮುಂಗಡವಾಗಿ ಬುಕ್ ಮಾಡಲು ಬಯಸಿದರೆ, ಇದಕ್ಕಾಗಿ ನೀವು ಕೇವಲ 5 ಸಾವಿರ ರೂ. ಪಾವತಿಸಿದರೆ ಸಾಕು. ಹೀಗೆ ಮಾಡಿದರೆ ಕೂಡಲೇ ಈ ಕಾರನ್ನು ನಿಮಗಾಗಿ ಕಾಯ್ದಿರಿಸಲಾಗುತ್ತದೆ. ಆದರೆ, ನೀವು 2026 ರಲ್ಲಿ ಈ ಕಾರಿನ ವಿತರಣೆಯನ್ನು ಪಡೆಯಬಹುದಷ್ಟೆ. ಈ ಕಾರನ್ನು ಬುಕ್ ಮಾಡುವ ಮೊದಲ 25,000 ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಇದು ವಿಸ್ತೃತ ಬ್ಯಾಟರಿ ವಾರಂಟಿ, ಮೂರು ವರ್ಷಗಳ ಉಚಿತ ವಾಹನ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ.

Car Engine Tips: ಕಾರಿನ ಎಂಜಿನ್ ಉತ್ತಮವಾಗಿರಲು ಏನೆಲ್ಲ ಮಾಡಬೇಕು?: ಇಲ್ಲಿದೆ ಸಿಂಪಲ್ ಟಿಪ್ಸ್

ಈ ವೈಶಿಷ್ಟ್ಯಗಳು EVA ನಲ್ಲಿ ಲಭ್ಯವಿದೆ:

ಇವಾ ಎರಡು ಆಸನಗಳ ಸಿಟಿ ಕಾರ್ ಆಗಿದೆ. ಇದನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಟ್ರಾಫಿಕ್ ತುಂಬಿದ ರಸ್ತೆಗಳಲ್ಲಿನ ಸವಾಲುಗಳನ್ನು ಎದುರಿಸಲು ಈ ಆಯ್ಕೆಯು ಉತ್ತಮವಾಗಿದೆ ಎಂದು ಸಾಬೀತುಪಡಿಸಬಹುದು. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಇದು 250 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ನೀಡುತ್ತದೆ. ಕಾರಿನಲ್ಲಿ ಲಿಕ್ವಿಡ್ ಬ್ಯಾಟರಿ ಕೂಲಿಂಗ್, ಲ್ಯಾಪ್‌ಟಾಪ್ ಚಾರ್ಜರ್, ಆ್ಯಪಲ್ ಕಾರ್ ಪ್ಲೇ TM, ಪನೋರಮಿಕ್ ಗ್ಲಾಸ್ ಸನ್‌ರೂಫ್ ಮತ್ತು ಆಂಡ್ರಾಯ್ಡ್ ಆಟೋ TM ಇದೆ. ಈ ಕಾಂಪ್ಯಾಕ್ಟ್ ಗಾತ್ರದ ಸೋಲಾರ್ ಕಾರು ಪೆಟ್ರೋಲ್ ಕಾರಿಗೆ ಪರ್ಯಾಯವಾಗಬಹುದು. ಇದರ ನಿರ್ವಹಣಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 0.5 ರೂ. ಆಗಿದೆಯಷ್ಟೆ. ಇದು ಪೆಟ್ರೋಲ್ ಹ್ಯಾಚ್‌ಬ್ಯಾಕ್‌ಗಿಂತ ತುಂಬಾ ಅಗ್ಗವಾಗಿದೆ.

ಇವಾ ಸೌರ ಫಲಕಗಳು:

ಇವಾ ಸೌರ ಫಲಕಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಿಗೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಬಹುದು. ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋ ಮೀಟರ್ ಎಂದು ಕಂಪನಿ ಹೇಳಿದೆ. ಇದು 5 ಸೆಕೆಂಡುಗಳಲ್ಲಿ ಗಂಟೆಗೆ 0-40 ಕಿಲೋಮೀಟರ್‌ಗಳಿಂದ ವೇಗವನ್ನು ಪಡೆಯಬಹುದು. ಈ ಸಮಯದಲ್ಲಿ, ಐಚ್ಛಿಕ ಸೌರ ಛಾವಣಿಯು 3,000 ಕಿಲೋಮೀಟರ್‌ ಗಳವರೆಗೆ ಚಾರ್ಜಿಂಗ್ ಅನ್ನು ಸಹ ನೀಡುತ್ತದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ದರೋಡೆಕೋರನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ರಾಜ್ಯಾಧ್ಯಕ್ಷನ ಚುನಾವಣೆಯನ್ನು ಶಿವರಾಜ್ ಚೌಹಾನ್ ನೋಡಿಕೊಳ್ಳುತ್ತಾರೆ: ಅಶೋಕ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ವರಿಷ್ಠರು ದೆಹಲಿಗೆ ತೆರಳಬೇಕಿದ್ದರಿಂದ ಬೇಗ ಭಾಷಣ ಮುಗಿಸಿದ ಸಿದ್ದರಾಮಯ್ಯ
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಅಮೆರಿಕದಲ್ಲಿನ ಅಭಿಮಾನಿಗಳ ಎದುರು ಹಾಡು ಹೇಳಿ ರಂಜಿಸಿದ ಶಿವರಾಜ್​ಕುಮಾರ್
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಪ್ರಧಾನ ಮಂತ್ರಿ ಹುದ್ದೆಯನ್ನೇ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು: ಖರ್ಗೆ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ