AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kia India: ಭಾರತದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಇಂಡಿಯಾ

ಭಾರತದಲ್ಲಿ ಕಾರು ಮಾರಾಟದ ಆರಂಭಿಸಿದ ಕೇವಲ 5 ವರ್ಷಗಳಲ್ಲಿ ಕಿಯಾ ಕಂಪನಿಯು ಹಲವು ಹೊಸ ಮಾರಾಟ ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.

Kia India: ಭಾರತದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಕಿಯಾ ಇಂಡಿಯಾ
ಕಿಯಾ ಇಂಡಿಯಾ
Praveen Sannamani
|

Updated on: Aug 12, 2024 | 10:43 PM

Share

ಮಧ್ಯಮ ಗಾತ್ರದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ (Kia India) ಕಂಪನಿಯು ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಕೇವಲ ಕೇವಲ 5 ವರ್ಷಗಳಲ್ಲಿ ಬರೋಬ್ಬರಿ 10 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. 2019-20ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ್ದ ಕಿಯಾ ಕಂಪನಿಯ ವಿವಿಧ ಐದು ಕಾರು ಮಾದರಿಗಳೊಂದಿಗೆ ಹೊಸ ಮಾರಾಟ ಮೈಲಿಗಲ್ಲು ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಿಯಾ ಕಂಪನಿಯು ಭಾರತದಲ್ಲಿ ಸೆಲ್ಟೋಸ್, ಸೊನೆಟ್, ಕಾರೆನ್ಸ್, ಕಾರ್ನಿವಾಲ್ ಮತ್ತು ಇವಿ6 ಮಾದರಿಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, 4.92 ಲಕ್ಷ ಯುನಿಟ್ ನೊಂದಿಗೆ ಸೆಲ್ಟೋಸ್ ಕಾರು ಅಗ್ರಸ್ಥಾನದಲ್ಲಿದೆ. ತದನಂತರ ಸೊನೆಟ್ ಮತ್ತು ಕಾರೆನ್ಸ್ ಕೂಡಾ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವು ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಸದ್ದುಮಾಡುತ್ತಿವೆ.

ಭಾರತದಿಂದ ಕಿಯಾ ಕಂಪನಿಯು ಇದುವರೆಗೆ ಬರೋಬ್ಬರಿ 2.58 ಲಕ್ಷ ಕಾರುಗಳನ್ನು ರಫ್ತು ಮಾಡಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆಯ ನೀರಿಕ್ಷೆಯಲ್ಲಿದೆ. ಇದಕ್ಕಾಗಿ ಭಾರತದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಹ್ಯುಂಡೈ ಕಂಪನಿಯ ಜೊತೆಗೂಡಿ ಹಲವು ತಾಂತ್ರಿಕ ಸೌಲಭ್ಯಗಳ ಎರವಲು ಪ್ರಕ್ರಿಯೆಯೊಂದಿಗೆ ಮುನ್ನಗುತ್ತಿದೆ.

ಇನ್ನು ಕಿಯಾ ಕಂಪನಿಯು ಶೀಘ್ರದಲ್ಲಿಯೇ ತನ್ನ ಜನಪ್ರಿಯ ಕಾರೆನ್ಸ್ ಎಂಪಿವಿಯಲ್ಲಿ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಹಲವಾರು ಬದಲಾವಣೆಗಳೊಂದಿಗೆ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಕಾರು ಸೆಲ್ಟೊಸ್ ನಲ್ಲಿರುವ ಹಲವು ಫೀಚರ್ಸ್ ಹೊಂದಿರಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ ಜೋಡಣೆ ಹೊಂದಿರಲಿದೆ.

ಹೊಸ ಆವೃತ್ತಿಗಾಗಿ ಕಿಯಾ ಕಂಪನಿಯು ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಲಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದೆ. ಆದರೆ ಎಂಜಿನ್ ಆಯ್ಕೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವಂತೆ ಮುಂದುವರೆಯುವ ಸಾಧ್ಯತೆಗಳಿದ್ದು, ಎಡಿಎಎಸ್ ಫೀಚರ್ಸ್ ನೊಂದಿಗೆ ತುಸು ದುಬಾರಿಯಾಗಿರಲಿದೆ ಎನ್ನಲಾಗಿದೆ. ಹೊಸ ಆವೃತ್ತಿಯು 2024ರ ಕೊನೆಯಲ್ಲಿ ಇಲ್ಲವೇ 2025ರ ಆರಂಭದಲ್ಲಿ ಬಿಡುಗಡೆಯ ಸಾಧ್ಯತೆಗಳಿವೆ.