AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kia Seltos: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದ 2023ರ ಕಿಯಾ ಸೆಲ್ಟೊಸ್

ಕಿಯಾ ಇಂಡಿಯಾ ಕಂಪನಿ ತನ್ನ ಜನಪ್ರಿಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿಯ ಫೇಸ್ ಲಿಫ್ಟ್ ಆವೃತ್ತಿಯೊಂದಿಗೆ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

Kia Seltos: ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹೊಸ ದಾಖಲೆ ನಿರ್ಮಿಸಿದ 2023ರ ಕಿಯಾ ಸೆಲ್ಟೊಸ್
ಹೊಸ ದಾಖಲೆ ನಿರ್ಮಿಸಿದ 2023ರ ಕಿಯಾ ಸೆಲ್ಟೊಸ್
Praveen Sannamani
|

Updated on: Sep 20, 2023 | 4:33 PM

Share

ಕಿಯಾ ಸೆಲ್ಟೊಸ್ ಫೇಸ್ ಲಿಫ್ಟ್(Kia Seltos facelift) ವಿವಿಧ ವೆರಿಯೆಂಟ್ ಗಳೊಂದಿಗೆ ಹಲವಾರು ಹೊಸ ಫೀಚರ್ಸ್ ಮತ್ತು ಬಲಿಷ್ಠ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಟ್ಟಿದ್ದು, ಹೊಸ ಆವೃತ್ತಿಯು ಬಿಡುಗಡೆಯಾದ ಕೇವಲ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಯುನಿಟ್ ಗಳಿಗಾಗಿ ಬುಕಿಂಗ್ ಪಡೆದುಕೊಂಡಿದೆ.

ಸೆಲ್ಟೊಸ್ ಕಂಪ್ಯಾಕ್ಟ್ ಎಸ್ ಯುವಿ ಕಾರು ಹೆಚ್ ಟಿಇ, ಹೆಚ್ ಟಿಕೆ, ಹೆಚ್ ಟಿಕೆ ಪ್ಲಸ್, ಹೆಚ್ ಟಿಎಕ್ಸ್, ಹೆಚ್ ಟಿಎಕ್ಸ್ ಪ್ಲಸ್, ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10.90 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಆವೃತ್ತಿಯು ರೂ.20 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ ಭರ್ಜರಿ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಗೆ ಶೇ.77 ರಷ್ಟು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಎಡಿಎಎಸ್ ಫೀಚರ್ಸ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹರಿದುಬಂದಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ರೂ. 10 ಲಕ್ಷ ಬಜೆಟ್ ಒಳಗಿನ ಕಾರುಗಳಿವು!

ಹೊಸ ಸೆಲ್ಟೊಸ್ ಕಾರಿನಲ್ಲಿ ಕಿಯಾ ಕಂಪನಿಯು 1.5 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಇದರಲ್ಲಿ ಪೆಟ್ರೋಲ್ ಟರ್ಬೊ ಆವೃತ್ತಿಯು ಡ್ಯುಯಲ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 158 ಹಾರ್ಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಉತ್ಪಾದಿಸುತ್ತೆ. ಹಾಗೆಯೇ ಸಾಮಾನ್ಯ ಎನ್ಎ ಪೆಟ್ರೋಲ್ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ನೊಂದಿಗೆ 113 ಹಾರ್ಸ್ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಕಾರಿನಲ್ಲಿರುವ 1.5 ಲೀಟರ್ ಟರ್ಬೊ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 6-ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 114 ಹಾರ್ಸ್ ಪವರ್ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ.

ಇನ್ನು ಹೊಸ ಸೆಲ್ಟೊಸ್ ಆವೃತ್ತಿಯಲ್ಲಿ ಕಿಯಾ ಕಂಪನಿಯು ಬದಲಾವಣೆಗೊಳಿಸಲಾದ ಸ್ಪೋರ್ಟಿ ಮುಂಭಾಗದ ವಿನ್ಯಾಸದೊಂದಿಗೆ ಬಂಪರ್, ಗ್ರಿಲ್ ಮತ್ತು ಆಲ್ ಎಲ್ಇಡಿ ಲೈಟಿಂಗ್ಸ್, ಅಲಾಯ್ ವ್ಹೀಲ್, ಲೈಟ್ ಬಾರ್ ನೀಡಿದ್ದು, ಕಾರಿನ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಒಳಭಾಗದಲ್ಲಿ ಡ್ಯುಯಲ್ ಕನೆಕ್ಟ್ ಡಿಸ್ ಪ್ಲೇ, ಹೊಸ ಡ್ಯಾಶ್ ಬೋರ್ಡ್, ಇನ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಹೊಂದಿರುವ ಇನ್ಪೋಟೈನ್ ಮೆಂಟ್ ಸಿಸ್ಟಂ, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಏರ್ ಕಂಡಿಷನರ್, ಪನೊರಮಿಕ್ ಸನ್ ರೂಫ್‌, ವೈರ್ ಲೆಸ್ ಚಾರ್ಜರ್ ಸೌಲಭ್ಯಗಳಿವೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಕಿಯಾ ಕಂಪನಿಯು ಈ ಬಾರಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಅದರಲ್ಲೂ ಹೊಸ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ADAS) ಜೋಡಣೆಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಎಡಿಎಎಸ್ ಸೌಲಭ್ಯವು ಹೊಸ ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ. ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೊಲ್, ಲೇನ್ ಕೀಪ್ ಅಸಿಸ್ಟ್, ಬ್ಲೈಡ್ ಸ್ಪಾಟ್ ಕೂಲಿಷನ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ ಅಸಿಸ್ಟ್ ಸೌಲಭ್ಯಗಳಿವೆ.

ಇದರೊಂದಿಗೆ ಸೆಲ್ಟೊಸ್ ಫೇಸ್ ಲಿಫ್ಟ್ ಕಾರಿನಲ್ಲಿ ಕಿಯಾ ಕಂಪನಿಯು ಜಿಟಿಎಕ್ಸ್ ಪ್ಲಸ್ ಎಸ್ ಮತ್ತು ಎಕ್ಸ್-ಲೈನ್ ಎಸ್ ಎನ್ನುವ ಮತ್ತೆರಡು ಹೊಸ ವೆರಿಯೆಂಟ್ ಗಳನ್ನು ಪರಿಚಯಿಸಿದ್ದು, ಹೊಸ ವೆರಿಯೆಂಟ್ ಗಳು ಹೆಚ್ ಟಿಎಕ್ಸ್ ಪ್ಲಸ್ ಮತ್ತು ಎಕ್ಸ್-ಲೈನ್ ನಡುವಿನ ಸ್ಥಾನ ಪಡೆದುಕೊಂಡಿವೆ. ಹೊಸ ವೆರೆಯೆಂಟ್ ಗಳು ಅತಿ ಹೆಚ್ಚು ಬೇಡಿಕೆಯಲ್ಲಿರುವ ಟಾಪ್ ಎಂಡ್ ಮಾದರಿಗಳಿಗಾಗಿ ಕಾಯುತ್ತಿರುವ ಗ್ರಾಹಕರಿಗಾಗಿ ಪರ್ಯಾಯ ಆವೃತ್ತಿಯಾಗಿ ಪರಿಚಯಿಸಲಾಗಿದೆ. ಹೊಸ ವೆರಿಯೆಂಟ್ ಗಳು ಎಕ್ಸ್ ಶೋರೂಂ ಪ್ರಕಾರ ರೂ. 19,39,900 ರಿಂದ ರೂ. 19,59,900 ಬೆಲೆ ಹೊಂದಿದ್ದು, ಇವು ಎಡಿಎಎಸ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿವೆ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!