ಎಸಿಯೋ, ಕಿಟಕಿಯೋ? ಯಾವುದರಿಂದ ಕಾರಿನಲ್ಲಿ ಇಂಧನ ಹೆಚ್ಚು ಖರ್ಚಾಗುತ್ತೆ? ಇಲ್ಲಿದೆ ಸತ್ಯಾಂಶ
Car Mileage during AC on or Windows open: ಕಾರಿನೊಳಗೆ ಶೆಕೆ ತಪ್ಪಿಸಲು ಅನೇಕ ಜನರು ಏರ್ ಕಂಡಿಷನರ್ ಬದಲು ಕಿಟಕಿ ತೆರೆದು ಪ್ರಯಾಣಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಹಿನ್ನಡೆಯಾಗುತ್ತದೆ. ಏಕೆಂದರೆ ಕಿಟಕಿ ತೆರೆದಾಗ, ಕಾರು ಹೆಚ್ಚು ಇಂಧನ ಕುಡಿಯುತ್ತದೆ, ಅಂದರೆ ಮೈಲೇಜ್ ಕಡಿಮೆಯಾಗುತ್ತದೆ. ವೈಜ್ಞಾನಿಕವಾಗಿ ಇದಕ್ಕೆ ಕಾರಣ ನೀಡುವುದಾದರೆ ಏರೋಡೈನಾಮಿಕ್ಸ್ ಡ್ರ್ಯಾಗ್ ಎಫೆಕ್ಟ್ ಇದು. ಗಾಳಿಯ ಪ್ರತಿರೋಧವನ್ನು ದಾಟಿ ಕಾರು ಸಾಗಬೇಕಾಗುತ್ತದೆ. ಕಿಟಕಿ ತೆರೆದಾಗ ಹೆಚ್ಚು ಗಾಳಿ ಆವರಿಸಿ ಏರೋಡೈನಾಮಿಕ್ ಡ್ರ್ಯಾಗ್ ಅನ್ನು ಹೆಚ್ಚಿಸುತ್ತದೆ. ಇದರಿಂದ ಎಂಜಿನ್ ಹೆಚ್ಚು ಶಕ್ತಿ ವ್ಯಯಿಸುತ್ತದೆ.
Car mileage tips: ಬಿಸಿಲಿನ ತಾಪದಲ್ಲಿ ಎಲ್ಲಿಗಾದರೂ ಪ್ರಯಾಣಿಸುವುದೆಂದರೆ ಕಷ್ಟ ಕಷ್ಟ ಎನಿಸುತ್ತದೆ. ಸುಡು ಬಿಸಿನಲ್ಲಿ ಎಸಿ ಇಲ್ಲದೇ ಕಾರಿನಲ್ಲಿ ಕೂರುವುದೆಂದರೆ ಹಿಂಸೆ. ಆದರೆ, ಹವಾನಿಯಂತ್ರಣ (AC- Air condition) ಹಾಕಿ ಕಾರ್ ಓಡಿಸಿದರೆ ಇಂಧನ ಹೆಚ್ಚು ಖರ್ಚಾಗುತ್ತದೆ, ಮೈಲೇಜ್ ಕಡಿಮೆ ಆಗುತ್ತದೆ ಎಂದು ಭಯಪಡುವವರು ಇದ್ದಾರೆ. ಅವರು ಕಿಟಕಿ ತೆರೆದು ವಾಹನ ಚಲಾಯಿಸುತ್ತಾರೆ. ನೈಸರ್ಗಿಕವಾಗಿ ಗಾಳಿ ಬಿಸುವುದರಿಂದ ತಂಪಾಗುತ್ತದೆ. ಡೀಸಲ್ ಅಥವಾ ಪೆಟ್ರೋಲ್ ಅನ್ನೂ ತುಸು ಉಳಿಸಬಹುದು ಎನ್ನುವ ಆಲೋಚನೆ ಅವರದ್ದಾಗಿರುತ್ತದೆ. ಆದರೆ ವಾಸ್ತವದಲ್ಲಿ ಈ ಅಭಿಪ್ರಾಯವೇ ತಪ್ಪು. ಎಸಿ ಆನ್ ಮಾಡಿಕೊಂಡು ಕಾರ್ ಅಥವಾ ವಾಹನ ಓಡಿಸುವುದಾಗ ಖರ್ಚಾಗುವುದಕ್ಕಿಂತ ಕಿಟಕಿ ತೆರೆದು ಓಡಿಸುವಾಗ ಹೆಚ್ಚು ಇಂಧನ (more fuel) ಖರ್ಚಾಗುತ್ತದೆ ಎನ್ನುವುದು ಸತ್ಯಾಂಶ.
ಕಾರಿನ ಕಿಟಕಿಗಳನ್ನು ತೆರೆದು ಚಾಲನೆ ಮಾಡುವುದರಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂಬುದು ನಿಜ. ಇದರ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿವೆ.
ಏರೋಡೈನಾಮಿಕ್ ಡ್ರ್ಯಾಗ್
ನೀವು ಕಾರನ್ನು ಓಡಿಸಿದಾಗ, ಗಾಳಿಯು ಕಾರಿನ ವಿರುದ್ಧ ಹರಿಯುತ್ತದೆ. ನಿಮ್ಮ ಕಾರಿನ ಚಲನೆಗೆ ಗಾಳಿ ಪ್ರತಿರೋಧಕ ಶಕ್ತಿ ಒಡ್ಡುತ್ತದೆ. ಇದುವೇ ಏರೋಡೈನಾಮಿಕ್ ಡ್ರ್ಯಾಗ್ (Aerodynamic drag) ಎನ್ನುವುದು. ನಿಮ್ಮ ಕಾರು ಈ ಶಕ್ತಿಯನ್ನು ಮೀರಿ ಚಲಿಸಬೇಕಾಗುತ್ತದೆ. ಈ ಶಕ್ತಿ ಹೆಚ್ಚಿದಷ್ಟೂ ಅದನ್ನು ಮೀರಿಸಲು ಕಾರು ಹೆಚ್ಚು ಶಕ್ತಿ ಬಳಸಬೇಕಾಗುತ್ತದೆ. ಕಾರಿನ ಕಿಟಕಿ ತೆರೆದಾಗ ಹೊರಗಿನಿಂದ ಗಾಳಿ ಒಳಗೆ ಪ್ರವೇಶಿಸುತ್ತದೆ. ಇದರಿಂದ ಏರೋಡೈನಾಮಿಕ್ ಡ್ರ್ಯಾಗ್ ಅಥವಾ ಗಾಳಿಯ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಇದನ್ನು ಮೀರಿಸಬೇಕಾದರೆ ಕಾರಿನ ಎಂಜಿನ್ಗೆ ಹೆಚ್ಚಿನ ಶಕ್ತಿ (ಇಂಧನ) ಬೇಕಾಗುತ್ತದೆ. ಅಂತೆಯೇ, ಹೆಚ್ಚು ಇಂಧನ ಖರ್ಚಾಗುತ್ತದೆ.
ಇದನ್ನೂ ಓದಿ: ಕೇವಲ ಒಂದೇ ವರ್ಷದಲ್ಲಿ ಹೊಸ ದಾಖಲೆ ನಿರ್ಮಿಸಿದ ಹೋಂಡಾ ಶೈನ್ 100 ಬೈಕ್
ಏರ್ ಕಂಡೀಷನ್ ಪರಿಣಾಮ ಏನು?
ಕಾರಿನ ಎಸಿ ಹಾಕಿದರೆ ಕಾರಿನ ಎಂಜಿನ್ಗೆ ಒತ್ತಡ ಬೀಳುವುದೇ ಇಲ್ಲ ಎನ್ನುವಂತಿಲ್ಲ. ಏರ್ ಕಂಡೀಷನ್ ಹಾಕಿದಾಗಲೂ ಏರೋಡೈನಾಮಿಕ್ ಡ್ರ್ಯಾಗ್ನ ಪರಿಣಾಮ ಎದುರಿಸಲೇಬೇಕಾಗುತ್ತದೆ. ಆದರೆ, ಕಿಟಕಿ ತೆರೆದಿದ್ದಾಗ ಆಗುವ ಒತ್ತಡಕ್ಕೆ ಹೋಲಿಸಿದರೆ ಎಸಿಯಿಂದ ಎಂಜಿನ್ಗೆ ಒತ್ತಡ ಬೀಳುವುದು ಕಡಿಮೆ. ಕಾರಿಗೆ ಹೆಚ್ಚು ಮೈಲೇಜ್ ಬರಬೇಕಾದರೆ ನೀವು ಕಿಟಕಿ ತೆರೆಯುವ ಬದಲು ಎಸಿ ಆನ್ ಮಾಡುವುದು ಸೂಕ್ತ ಎನಿಸುತ್ತದೆ.
ಕಾರಿನ ವೇಗ ಹೆಚ್ಚಿದ್ದರೆ ಮೈಲೇಜ್ ಕಡಿಮೆ
ಕಿಟಕಿ ತೆರೆದು ಕಾರು ಓಡಿಸಿದರೆ ಮೈಲೇಜ್ ಕಡಿಮೆ ಆಗುತ್ತದೆ ಎನ್ನುವುದು ಹೌದು. ಹೀಗೆ ಕಿಟಕಿ ತೆರೆದು ಓಡುವ ಕಾರಿನ ಸ್ಪೀಡ್ ಹೆಚ್ಚಿದಷ್ಟೂ ಮೈಲೇಜ್ ಕಡಿಮೆ ಆಗುತ್ತಾ ಹೋಗುತ್ತದೆ. ಯಾಕೆಂದರೆ, ಕಿಟಕಿ ತೆರೆದಾಗ ಒಳನುಗ್ಗುವ ಗಾಳಿಯ ಪ್ರತಿರೋಧಕ ಶಕ್ತಿ, ಕಾರಿನ ವೇಗಕ್ಕೆ ಅನುಗುಣವಾಗಿ ಹೆಚ್ಚುತ್ತಾ ಹೋಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದೆ ಪವರ್‌ಫುಲ್ ನಿಸ್ಸಾನ್ ಎಕ್ಸ್-ಟ್ರಯಲ್ ಕಾರು
ನೀವು ಏನು ಮಾಡಬೇಕು?
ಕಾರಿನ ಮೈಲೇಜ್ ಅನ್ನು ಉಳಿಸುವ ಉದ್ದೇಶ ನಿಮಗಿದ್ದಲ್ಲಿ ಕಾರು ಚಲಾಯಿಸುವಾಗ ಕಿಟಕಿ ಮುಚ್ಚುವುದು ಉತ್ತಮ. ಶೆಖೆ ಹೆಚ್ಚಾಗಿದೆ ಎನಿಸಿದಲ್ಲಿ ಏರ್ ಕಂಡೀಷನಿಂಗ್ ಸಾಧನ ಬಳಸಬಹುದು.
ಇನ್ನಷ್ಟು ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ